Advertisement

ಕಾಂಗ್ರೆಸ್‌ನವ್ರನ್ನೇ ಹುಡ್ಕಿ ಹುಡ್ಕಿ ಐಟಿ ದಾಳಿ ಮಾಡ್ತಿದ್ದಾರೆ

12:35 PM Aug 30, 2017 | |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ನಾಯಕರ ಮೇಲೆ ಐಟಿ ದಾಳಿ ವಿಚಾರಕ್ಕೆ ಕೆಂಡಾಮಂಡಲವಾಗಿದ್ದು ಚುನಾವಣೆ ಹತ್ತಿರ ಬಂದಿರುವ ಹಿನ್ನಲೆಯಲ್ಲಿ ಷಡ್ಯಂತ್ರ ಮಾಡಿ ದಾಳಿ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

Advertisement

ಬುಧವಾರ ಸಚಿವ ಡಿ.ಕೆ.ಶಿವಕುಮಾರ್‌ ಆಪ್ತ ಕೆಪಿಸಿಸಿ ಕಾರ್ಯದರ್ಶಿ ವಿಜಯ್‌ ಮುಳಗುಂದ ನಿವಾಸದ ಮೇಲೆ ಐಟಿ ದಾಳಿ ವಿಚಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ”ಐಟಿ ದಾಳಿ ಮಾಡಲಿ, ಬೇಡ ಅನ್ನಲ್ಲ. ಆದರೆ ಕಾಂಗ್ರೆಸ್‌ನವರನ್ನೇ ಹುಡುಕಿ ಹುಡುಕಿ ಯಾಕೆ ದಾಳಿ ಮಾಡಲಾಗುತ್ತಿದೆ. ಚುನಾವಣೆ ಹತ್ತಿರ ಬಂದಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌ನವರ ನೈತಿಕ ಸ್ಥೈರ್ಯ ಕುಂದಿಸುವ ಷಡ್ಯಂತ್ರ ಹೂಡಿ ದಾಳಿ ಮಾಡಿಸಲಾಗುತ್ತಿದೆ” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next