Advertisement

ಗುರಿ ಮುಟ್ಟಲು ಕಠಿಣ ಶ್ರಮ ಅಗತ್ಯ

04:39 PM Jul 24, 2019 | Team Udayavani |

ಗದಗ: ಇಂದಿನ ಯುವಜನತೆ ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದಾರೆಯೇ ಹೊರತು ವಾಸ್ತವಿಕ ಬದುಕನ್ನು ಅರ್ಥೈಸಿಕೊಳ್ಳುವಲ್ಲಿ ಸೋಲುತ್ತಿದ್ದಾರೆ. ಮೊಬೈಲ್ ಎಂಬ ಮಾಯಾಪೆಟ್ಟಿಗೆಯಲ್ಲಿ ಬಂಧಿಯಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ವಿಷಾದ ವ್ಯಕ್ತಪಡಿಸಿದರು.

Advertisement

ನಗರದ ಕೆಎಲ್ಇ ಸಂಸ್ಥೆಯ ಜ| ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣ ಘಟಕ, ರಾಜೀವ್‌ಗಾಂಧಿ ನಗರ ಪೊಲೀಸ್‌ ಠಾಣೆ ಹಾಗೂ ಚನ್ನಮ್ಮ ಮಹಿಳಾ ಪೊಲೀಸ್‌ ಪಡೆ ಸಹಯೋಗದಲ್ಲಿ ‘ಮಹಿಳಾ ಮತ್ತು ಮಕ್ಕಳ ರಕ್ಷಣಾ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜೀವನದಲ್ಲಿ ದೊಡ್ಡ ಕನಸುಗಳನ್ನು ಹೊಂದುವುದರ ಜೊತೆಗೆ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಿರಂತರ ಹಾಗೂ ಕಠಿಣ ಶ್ರಮ ವಹಿಸಬೇಕು. ಸಮಯ ಪ್ರಜ್ಞೆ, ಸತತ ಪ್ರಯತ್ನ, ನಿರಂತರ ಓದು ಹಾಗೂ ಮೊಬೈಲ್ನಿಂದ ದೂರ ಎಂಬ ನಾಲ್ಕು ಸೂತ್ರಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸ್ಪರ್ಧಾತ್ಮಕ ಪರೀಕ್ಷೆ ಹೇಗೆ ಎದುರಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ| ಸಿ. ಲಿಂಗಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ್ತವಾದ ನಡತೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಂತರ ಚನ್ನಮ್ಮ ಮಹಿಳಾ ಪೊಲೀಸ್‌ ಪಡೆಯಿಂದ ಮಹಿಳೆಯರ ಸುರಕ್ಷತೆ ಬಗ್ಗೆ ವಿವಿಧ ಪ್ರಾತ್ಯಕ್ಷಿಕೆ ನೀಡಲಾಯಿತು.

Advertisement

ಬೆಟಗೇರಿ ಸಿಪಿಐ ವಿ.ಕೆ. ಯಡಹಳ್ಳಿ, ಬೆಟಗೇರಿ ಪಿಎಸ್‌ಐ ಆರ್‌.ಪಿ. ಪವಾರ, ಎಎಸ್‌ಐ ಜಿ.ಎಸ್‌. ಕೊಪರ್ಡೆ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ| ಎಂ.ಎಂ. ನರಗುಂದ, ಪ್ರೊ| ಎಸ್‌.ಎಂ. ಬೆಂಗಳೂರು, ಪ್ರೊ| ಎಸ್‌.ವಿ. ಅಂಗಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next