ವಾಷಿಂಗ್ಟನ್: ಜಾಗತಿಕ ಆರ್ಥಿಕ ಹಿಂಜರಿಕೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಐಟಿ ವಲಯದ ದೈತ್ಯ ಅಕ್ಸೆಂಜರ್ ಕಂಪನಿ 19,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಗುರುವಾರ (ಮಾರ್ಚ್ 23) ತಿಳಿಸಿದೆ.
ಇದನ್ನೂ ಓದಿ:ವೇತನ ಹೆಚ್ಚಳ ಬೇಡಿಕೆ; ಮಾರ್ಚ್ 24ರ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ತಡೆ
ಹದಗೆಡುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯು ಐಟಿ ಸೇವೆಗಳ ವಲಯದ ಮೇಲೆ ಪರಿಣಾಮ ಬೀರಲಿದ್ದು, ಈ ನಿಟ್ಟಿನಲ್ಲಿ ವೆಚ್ಚವನ್ನು ಕಡಿಮೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅಕ್ಸೆಂಜರ್ ಕಂಪನಿ ವಿವರಿಸಿದೆ.
ಐರ್ಲೆಂಡ್ ಮೂಲದ ಪ್ರೊಫೆಶನಲ್ ಸರ್ವೀಸಸ್ ಕಂಪನಿಯಾದ ಅಕ್ಸೆಂಜರ್ ಐಟಿ ವಲಯದಲ್ಲಿ ಬೃಹತ್ ದೊಡ್ಡ ಕಂಪನಿಯಾಗಿದೆ. ಆರ್ಥಿಕ ಹಿಂಜರಿತದ ಭೀತಿಯಲ್ಲಿ ಕಂಪನಿಯು ತನ್ನ ವಾರ್ಷಿಕ ಆದಾಯದ ಬೆಳವಣಿಗೆ ಮತ್ತು ಲಾಭದ ಮಿತಿಯನ್ನು ಇಳಿಕೆ ಮಾಡಿರುವುದಾಗಿ ತಿಳಿಸಿದೆ.
ಸುಮಾರು 19 ಸಾವಿರ ಉದ್ಯೋಗಿಗಳನ್ನು ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿರುವ ಅಕ್ಸೆಂಜರ್ ಕಂಪನಿ ಇದೀಗ ಕಂಪನಿಯ ವಾರ್ಷಿಕ ಆದಾಯ ಶೇ.10ರಿಂದ ಶೇ.8ಕ್ಕೆ ಇಳಿಕೆ ಮಾಡಿರುವುದಾಗಿ ಹೇಳಿದೆ.
ಅಕ್ಸೆಂಜರ್ ಐಟಿ ವೃತ್ತಿಪರ ಸೇವೆ ಒದಗಿಸುವ ಕಂಪನಿಯಾಗಿದ್ದು, 1989ರಲ್ಲಿ ಸ್ಥಾಪನೆಯಾಗಿರುವ ಈ ಕಂಪನಿಯಲ್ಲಿ 7.38 ಲಕ್ಷ ಉದ್ಯೋಗಿಗಳಿದ್ದಾರೆ.