Advertisement

ಐಟಿ ರೀಫ‌ಂಡ್‌ ಎಚ್ಚರ!

12:17 PM May 11, 2020 | mahesh |

ಲಾಕ್‌ಡೌನ್‌ನಿಂದಾಗಿ ಸಾಮಾಜಿಕ ಮಾತ್ರವಲ್ಲದೆ ಆರ್ಥಿಕ ವ್ಯವಸ್ಥೆಯೂ ಗೊಂದಲದಗೂಡಾಗಿದೆ. ಹೊಸ ಹೊಸ ಬದಲಾವಣೆಗಳನ್ನು ನಿತ್ಯವೂ ಕಾಣುತ್ತಿದ್ದೇವೆ. ಕಚೇರಿ-
ಕಾರ್ಯಾಲಯಗಳು ಮುಂಚಿನಂತೆ ಕೆಲಸ ನಿರ್ವಹಿಸುತ್ತಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು, ಹಣ ಲಪಟಾಯಿಸುವ ಹುನ್ನಾರಗಳಲ್ಲಿ ವಂಚಕರು ತೊಡಗಿದ್ದಾರೆ. ಕಳೆದೊಂದು ತಿಂಗಳಿಂದ, ಸೈಬರ್‌ ವಂಚನೆಗಳ ಕುರಿತು ಜಾಗ್ರತೆ ವಹಿಸುವಂತೆ ಬ್ಯಾಂಕುಗಳು, ಸಂಸ್ಥೆಗಳು ಜನರನ್ನು ಪದೇಪದೆ ಎಚ್ಚರಿಸುತ್ತಲೇ ಇವೆ. ಈ ಹಿಂದೆ ಇಎಂಐ ಮುಂದೂಡಿಕೆ ನೆಪದಲ್ಲಿ, ಸೈಬರ್‌ ವಂಚಕರು ನಕಲಿ ಇಮೇಲ್, ಎಸ್ಸೆಮ್ಮೆಸ್‌ ಕಳಿಸುತ್ತಿದ್ದರು. ಆ ಮೂಲಕ ಗ್ರಾಹಕರನ್ನು ಬಲೆಗೆ ಬೀಳಿಸಿಕೊಂಡು, ಅವರ ವೈಯಕ್ತಿಕ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಈ ಕುರಿತು ಜಾಗೃತಿ ಮೂಡಿಸಿದ ನಂತರ, ಜನರು ಎಚ್ಚೆತ್ತುಕೊಂಡಿದ್ದರು. ಇದೀಗ, ಸೈಬರ್‌ ವಂಚಕರು, ಆದಾಯ ತೆರಿಗೆಯ ಇಲಾಖೆಯ ಮುಖವಾಡ ತೊಟ್ಟು ವಂಚಿಸಲು ಇಳಿದಿದ್ದಾರೆ.

Advertisement

ವಂಚನೆಗೆ ಸಿಕ್ಕ ಅವಕಾಶ
ಈ ತುರ್ತು ಪರಿಸ್ಥಿತಿಯ ಸಮಯದಲ್ಲಿ ತೆರಿಗೆಪಾವತಿದಾರರಿಗೆ ನೆರವಾಗುವ ಉದ್ದೇಶವಿದೆ. ಈ ನಿಟ್ಟಿನಲ್ಲಿ, ತಾನು ಪೆಂಡಿಂಗ್‌ ಉಳಿಸಿಕೊಂಡಿದ್ದರಲ್ಲಿ 5 ಲಕ್ಷ ರೂ. ತನಕದ ರೀಫ‌ಂಡ್‌ ಬಾಕಿ ಇರುವ ತೆರಿಗೆ ಪಾವತಿದಾರರಿಗೆ ಆ ಮೊತ್ತವನ್ನು ಮರು ಪಾವತಿಸುವುದಾಗಿ ಕೆಲದಿನಗಳ ಹಿಂದೆ ತೆರಿಗೆ ಇಲಾಖೆಯು ಘೋಷಣೆ ಹೊರಡಿಸಿತ್ತು. ಆದರೆ, ಹಲವು ತೆರಿಗೆ ಪಾವತಿದಾರರು, ಹಿಂದಿನ ವರ್ಷದ ಔಟ್‌ ಸ್ಟ್ಯಾಂಡಿಂಗ್ ಟ್ಯಾಕ್ಸ್ ಮೊತ್ತವನ್ನೇ ಕಟ್ಟಿರಲಿಲ್ಲ. ಅಂಥವರು, ಈಗ ರೀಫ‌ಂಡ್‌ ಆಗುವ ಮೊತ್ತದಲ್ಲಿಯೇ, ತಾವು ಉಳಿಸಿಕೊಂಡ ತೆರಿಗೆಯ
ಮೊತ್ತವನ್ನು ಕಡಿತಗೊಳಿಸಿ (ಅಡ್ಜಸ್ಟ್ ಮೆಂಟ್) ಬಾಕಿ ಹಣವನ್ನು ರೀಫ‌ಂಡ್‌ ಮಾಡಿ ಎಂದು ಮನವಿ ಸಲ್ಲಿಸಿದರು. ಈ ಕುರಿತಾಗಿ ಆದಾಯ ತೆರಿಗೆ ಇಲಾಖೆ, ತೆರಿಗೆ ಪಾವತಿದಾರರಿಗೆ ಇಮೇಲ್‌ ಕಳಿಸಿ, ತಮ್ಮ ಅಧಿಕೃತ ಆದಾಯ ತೆರಿಗೆ ಖಾತೆಯಿಂದ ಇ ಫೈಲಿಂಗ್‌ ವೆಬ್‌ ಸೈಟಿನಲ್ಲಿ ರಿಪ್ಲೈ ಮಾಡಬೇಕು ಎಂದು ಸೂಚನೆ ನೀಡಿತ್ತು. ಈ ಅವಕಾಶವನ್ನು ವಂಚಕರು ಬಳಸಿಕೊಳ್ಳುತ್ತಿದ್ದಾರೆ.

ಫ್ರಾಡ್‌ ಸಂದೇಶದಲ್ಲೇನಿದೆ?
ಆದಾಯ ತೆರಿಗೆ ಇಲಾಖೆಯಿಂದಲೇ ಇಮೇಲ್‌ ಬಂದಿದೆ ಎನಿಸುವಂತೆ ತೋರುವ ಸಂದೇಶವನ್ನು, ಹ್ಯಾಕರ್‌ಗಳು ಸಿದ್ಧಪಡಿಸಿ ರುತ್ತಾರೆ. “ಕೋವಿಡ್‌- 19 ತುರ್ತು ಪರಿಸ್ಥಿತಿಯ
ಕಾರಣ, ಕೇಂದ್ರ ಸರ್ಕಾರ ಟ್ಯಾಕ್ಸ್ ರೀಫ‌ಂಡ್‌ ಮಾಡಲು ನಿರ್ಧರಿಸಿದೆ. ನಿಮಗೆ ಈ ಕೂಡಲೆ ರೀಫ‌ಂಡ್‌ ಆಗಬೇಕೆಂದಿದ್ದರೆ, ಕೆಳಗಿನ ಲಿಂಕನ್ನು ಕ್ಲಿಕ್‌ ಮಾಡಿ’ ಎಂಬ ವಿವರ ಅದರಲ್ಲಿರುತ್ತದೆ. ಈ ತಂತ್ರವನ್ನು ಫಿಷಿಂಗ್‌ ಎನ್ನುತ್ತಾರೆ. ಸೈಬರ್‌ ಕ್ರೈಮ್‌ ಪ್ರಪಂಚದಲ್ಲಿ, ಇದು ತುಂಬಾ ಹಳೆಯ ತಂತ್ರವಾಗಿದೆ.

ಎಚ್ಚರ ವಹಿಸಬೇಕು
ಫ್ರಾಡ್‌ ಸಂದೇಶ, ಇಮೇಲ್‌ ಅಥವಾ ಎಸ್ಸೆಮ್ಮೆಸ್‌ ಮೂಲಕವೂ ಬರಬಹುದು. ಗ್ರಾಹಕರು ಮೊದಲು ನೆನಪಿಟ್ಟುಕೊಳ್ಳಬೇಕಾದ ಸಂಗತಿ ಎಂದರೆ, ಆ ಇಮೇಲ್‌ ಐಡಿಯನ್ನು ಚೆಕ್‌ ಮಾಡುವುದು. ಆದಾಯ ತೆರಿಗೆ ಇಲಾಖೆಯ ಅಧಿಕೃತ ಜಾಲತಾಣ | ‘www. incometaxindia.gov. in’ ಮತ್ತು “www. incometax indiaefi ling.gov.in’.

ನೆನಪಿಡಿ; ರೀಫ‌ಂಡ್‌ ಅಡ್ಜಸ್ಟ್ ಮೆಂಟ್‌ ಕುರಿತಾದ ಯಾವುದೇ ಕ್ರಮಗಳನ್ನು ಕೈಗೊಳ್ಳುವಾಗ, ಗ್ರಾಹಕರು ತಮ್ಮ ಅಧಿಕೃತ ಆದಾಯ ತೆರಿಗೆ ಖಾತೆಗೆ ಲಾಗಿನ್‌ ಆಗಿ, ಅಲ್ಲಿ ಏನಾದರೂ ನೋಟಿಫಿಕೇಷನ್‌, ಸಂದೇಶ ಬಂದಿದೆಯಾ ಚೆಕ್‌ ಮಾಡಬೇಕು. ಅಲ್ಲಿಯೇ ಸಂವಹನ ನಡೆಸಬೇಕು. ಅದು ಬಿಟ್ಟು, ಥರ್ಡ್‌ ಪಾರ್ಟಿ ಇಮೇಲ್‌ನಲ್ಲಿ ಸಂವಹನ ನಡೆಸಬಾರದು, ಲಿಂಕ್‌ ಕ್ಲಿಕ್‌ ಮಾಡಬಾರದು. ಯಾವುದೇ ಅನುಮಾನಾಸ್ಪದ ಇಮೇಲ್‌ಗ‌ಳನ್ನು ತಮಗೆ “webmanager incometax.gov.in’ ಈ ಇಮೇಲ್‌ ವಿಳಾಸಕ್ಕೆ ಫಾರ್ವರ್ಡ್‌ ಮಾಡುವಂತೆ ಇಲಾಖೆ
ಕೇಳಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next