ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಸ್ಯಾಂಡಲ್‌ವುಡ್‌ನ ಕೆಲ ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುವ ಮೂಲಕ ಭಾರೀ ಶಾಕ್ ನೀಡಿದ್ದಾರೆ.
ಖ್ಯಾತ ನಟ ಶಿವರಾಜ್ ಕುಮಾರ್,ನಟ ಪುನೀತ್ ರಾಜ್‌ಕುಮಾರ್,ಕಿಚ್ಚ ಸುದೀಪ್, ಯಶ್, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಜಯಣ್ಣ, ಎಂಎಲ್‌ಸಿ ಸಿ.ಆರ್ ಮನೋಹರ್, ಕೆಜಿಎಫ್ ಖ್ಯಾತಿಯ ವಿಜಯ್ ಕಿರಗಂದೂರು ಸೇರಿ ದಿಗ್ಗಜರ ನಿವಾಸಗಳ ಮೇಲೆ ದಾಳಿ ನಡೆದಿದೆ ಎಂದು ವರದಿ ಲಭ್ಯವಾಗಿವೆ.
25 ಕ್ಕೂ ಹೆಚ್ಚು ಕಡೆ ಖಾಸಗಿ ವಾಹನಗಳಲ್ಲಿ ತೆರಳಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಮಹಾಲಕ್ಷ್ಮೀ ಲೇಔಟ್‌ನಲ್ಲಿ ರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನಿವಾಸ, ಸದಾಶಿವನಗರದಲ್ಲಿರುವ ಪುನೀತ್ ರಾಜ್ ಕುಮಾರ್ ಅವರ ನಿವಾಸ,ಕತ್ರಿಗುಪ್ಪೆಯಲ್ಲಿರುವ ನಟ ಯಶ್ ನಿವಾಸ, ಸುದೀಪ್ ಅವರ ಜೆ.ಪಿ.ನಗರ ನಿವಾಸ, ವಿಜಯ್ ಕಿರಗಂದೂರು ಅವರ ನಾಗರಬಾವಿಯಲ್ಲಿರುವ ನಿವಾಸ, ಶಿವರಾಜ್ ಕುಮಾರ್ ಅವರ ಮಾನ್ಯತಾ ಟೆಕ್ ಪಾರ್ಕ್ ಬಳಿಯಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.