Advertisement

ಐಟಿ ದಾಳಿ: 20 ಕೋಟಿ ಮೌಲ್ಯದ ಸಂಪತ್ತು ಜಪ್ತಿ

08:15 PM May 05, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ರಂಗೇರುತ್ತಿರುವ ಬೆನ್ನಲ್ಲೇ ಅಲ್ಲಲ್ಲಿ ಕುರುಡು ಕಾಂಚಾಣ ಸದ್ದು ಮಾಡುತ್ತಿದ್ದು, ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳೂ ಫ‌ುಲ್‌ ಅಲರ್ಟ್‌ ಆಗಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಫೈನ್ಯಾನ್ಸಿಯರ್‌ಗಳ ಮನೆ ಮೇಲೆ ದಾಳಿ ನಡೆಸಿ ಬರೊಬ್ಬರಿ 20 ಕೋಟಿ ರೂ. ಮೌಲ್ಯದ ಸಂಪತ್ತು ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದಾಳಿಯ ವೇಳೆ ಅಧಿಕಾರಿಗಳಿಗೆ ಸುಮಾರು 15 ಕೋಟಿ ರೂ. ನಗದು ಹಾಗೂ 5 ಕೋಟಿ ರೂ.ಮೌಲ್ಯದ ಚಿನ್ನಾಭರಣ ಸಿಕ್ಕಿದೆ. ದಾಳಿಯ ವೇಳೆ ದೊರೆತ ನಗದು ಹಾಗೂ ಚಿನ್ನಾಭರಣದ ಕುರಿತು ಯಾವುದೇ ಸೂಕ್ತ ದಾಖಲೆಗಳು ದೊರೆಯದ ಕಾರಣ ಅಧಿಕಾರಿಗಳು ಹಣ ಜಪ್ತಿಪಡಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಹಣಕಾಸಿನ ನೆರವು ನೀಡಲು ದುಬಾರಿ ಮೊತ್ತದ ಹಣವನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಆರೋಪದ ಮೇಲೆ ಶಾಂತಿನಗರ, ಕಾಕ್ಸ್‌ಟೌನ್‌, ಶಿವಾಜಿನಗರ, ಆರ್‌ಎಂವಿ ಬಡಾವಣೆ, ಕನ್ನಿಂಗ್‌ ಹ್ಯಾಮ್‌ ರಸ್ತೆ, ಸದಾಶಿವನಗರ, ಕುಮಾರ ಪಾರ್ಕ್‌ ವೆಸ್ಟ್‌, ಫೇಫೀಲ್ಡ್‌ ಲೇಔಟ್‌ ಮುಂತಾದ ಪ್ರದೇಶಗಳಲ್ಲಿರುವ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫೈನಾನ್ಸಿಯರ್‌ಗಳ ಮನೆ, ಕಚೇರಿ ಮೇಲೂ ದಾಳಿ ನಡೆದಿದೆ ಎಂದು ತಿಳಿದು ಬಂದಿವೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ದುಬಾರಿ ಮೊತ್ತವನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next