Advertisement
ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರಕಾರ ಬೆಳಗಾವಿ ಶಾಸಕರ ಬೇಡಿಕೆಗೆ ತ್ವರಿತವಾಗಿ ಸ್ಪಂದಿಸಿದರೆ ಶೀಘ್ರವೇ ನಗರದ ಹೊರವಲಯದಲ್ಲಿ ಬಹು ರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸುವ ಸುಸಜ್ಜಿತ ಮಾಹಿತಿ ತಂತ್ರಜ್ಞಾನ ಪಾರ್ಕ್ ನಿರ್ಮಾಣವಾಗಲಿದೆ.
Related Articles
Advertisement
ಒಂದು ಐಟಿ ಪಾರ್ಕ್ ನಿರ್ಮಾಣಕ್ಕೆ ಕನಿಷ್ಠ 100 ಎಕರೆ ಜಾಗ ಇರಬೇಕು. ಕೆಎಲ್‌ಇ ಆಸ್ಪತ್ರೆ ಬಳಿ ಇರುವ ಈ ರಾಜ್ಯ ಸರಕಾರದ ಜಾಗ 774 ಎಕರೆ ವ್ಯಾಪ್ತಿ ಹೊಂದಿದ್ದು, ಸಾಕಷ್ಟು ಐಟಿ ಕಂಪನಿಗಳ ಸ್ಥಾಪನೆಗೆ ನೆರವಾಗಲಿದೆ. ಇಲ್ಲಿಂದ ರೈಲು, ವಿಮಾನ ಸಂಪರ್ಕಕ್ಕೆ ಸಾಕಷ್ಟು ಅನುಕೂಲವಾಗಿದೆ. ಈ ಪ್ರದೇಶ ನಗರದೊಳಗೆ ಇರುವುದರಿಂದ ಸೌಲಭ್ಯ ಒದಗಿಸಲು ಯಾವುದೇ ಸಮಸ್ಯೆ ಇಲ್ಲ ಎನ್ನುತ್ತಾರೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ.
ಇದ್ದೂ ಇಲ್ಲದಂತಿರುವ ಪಾರ್ಕ್: ಸರಕಾರ 10 ವರ್ಷಗಳ ಹಿಂದೆ ಬೆಳಗಾವಿಯಿಂದ 18 ಕಿಮೀ ದೂರದ ದೇಸೂರ ಬಳಿ 41 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ನಿರ್ಧರಿಸಿ ಅಲ್ಲಿ ರಸ್ತೆ ನಿರ್ಮಾಣ ಮಾಡಿತು. ದುರ್ದೈವ ಎಂದರೆ ಖಾನಾಪುರ ಮೂಲಕ ಗೋವಾ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ.ಮೀ. ಒಳಗಿರುವ ಈ ಪ್ರದೇಶದಲ್ಲಿ ಐಟಿ ಪಾರ್ಕ್‌ನ ಒಂದೇ ಒಂದು ಕುರುಹು ಕಾಣುತ್ತಿಲ್ಲ. ಇವತ್ತಿಗೂ ಅಲ್ಲಿ ಯಾವುದೇ ಐಟಿ ಸಂಸ್ಥೆ ತನ್ನ ಕಾರ್ಯಾರಂಭ ಮಾಡಿಲ್ಲ. ಐಟಿ ಪಾರ್ಕ್‌ಗೆ ಆಯ್ಕೆ ಮಾಡಿದ ಜಾಗವೇ ಸರಿ ಇಲ್ಲ. ಇದನ್ನು ಬೆಳಗಾವಿ ವಿಮಾನ ನಿಲ್ದಾಣ ಸಮೀಪ ಮಾಡಬೇಕಿತ್ತು. ಒಂದು ಪಾರ್ಕ್ ಮಾಡಿದ ಮೇಲೆ ಉದ್ಯಮಿಗಳಿಗೆ ಅಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿ ಕೊಡುವುದು ಸರಕಾರದ ಮುಖ್ಯ ಕೆಲಸ. ಆದರೆ ಅಂತಹ ಯಾವುದೇ ಬೆಳವಣಿಗೆ ಆಗಲಿಲ್ಲ. ಹೀಗಾಗಿ ದೇಸೂರ ಬಳಿ ಜಾಗ ಖರೀದಿಸಿದ್ದು ಯಾವ ಪ್ರಯೋಜನಕ್ಕೂ ಬಂದಿಲ್ಲ ಎಂಬುದು ಉದ್ಯಮಿಗಳ ನೋವು. ಈಗ ಕೆಎಲ್‌ಇ ಆಸ್ಪತ್ರೆ ಬಳಿ ಇರುವ ಜಾಗ ಐಟಿ ಪಾರ್ಕ್‌ಗೆ ಹೇಳಿ ಮಾಡಿಸಿದ ಸ್ಥಳ. ಎಲ್ಲದಕ್ಕೂ ಇದು ಅನುಕೂಲ ಆಗಲಿದೆ. ಸಾರಿಗೆ ಮತ್ತಿತರೆ ಸೌಲಭ್ಯಗಳಿಗೆ ಸಂಪರ್ಕದ ಸಮಸ್ಯೆ ಇಲ್ಲ. ನಗರಕ್ಕೆ ಹೊಂದಿಕೊಂಡಿರುವುದರಿಂದ ಯಾವುದಕ್ಕೂ ಪರದಾಡುವ ತಾಪತ್ರಯ ಇಲ್ಲ. ಆದರೆ ಈ ಜಾಗ ಬಿಟ್ಟು ಕೊಡಲು ಕೇಂದ್ರ ರಕ್ಷಣಾ ಇಲಾಖೆ ಮನಸ್ಸು ಮಾಡಬೇಕಷ್ಟೆ.