Advertisement
ಮೋದಿ ಪ್ರಧಾನಿಯಾಗುವ ಮೊದಲು ದೇಶಕ್ಕೆ ಅಚ್ಚೇದಿನ್ ಆಯೇಗಾ ಎಂದು ಹೇಳಿದ್ದರು. ಅಚ್ಚೆ ದಿನ್ ಕಬ್ ಆಯೇಗಾ ? ಅದಾನಿ, ಅಂಬಾನಿ, ಬಾಬಾ ರಾಮ್‌ದೇವ್‌ಗೆ ಮಾತ್ರ ಅಚ್ಚೇದಿನ್ ಬಂದಿದೆ. ಸಾಮಾನ್ಯ ಜನರ ಅಕೌಂಟ್‌ಗೆ 15 ಲಕ್ಷರೂಪಾಯಿ ಹಾಕುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಒಂದು ನಯಾಪೈಸೆಯೂ ಬಡವರ ಅಕೌಂಟ್‌ಗೆ ಬಂದು ಸೇರಲಿಲ್ಲ. ಪ್ರತಿ ವರ್ಷ 2 ಕೋಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ,
ಇಪ್ಪತ್ತು ಲಕ್ಷ ಉದ್ಯೋಗ ಕೂಡ ಸೃಷ್ಠಿಯಾಗಿಲ್ಲ ಎಂದು ಆರೋಪಿಸಿದರು.
ನಾಯಕರೂ ಅವರ ಜೊತೆಗಿಲ್ಲ ಎಂದು ಹೇಳಿದರು.
Related Articles
Advertisement
ಪರಿವರ್ತನಾ ಯಾತ್ರೆಗೆ 3 ಲಕ್ಷ ಜನರು ಬರುತ್ತಾರೆ ಎಂದು ಹೇಳಿದ್ದರು. ಆದರೆ. 20 ಸಾವಿರ ಜನ ಮಾತ್ರ ಬಂದಿದ್ದರು. ಅದನ್ನೂ ಅಶೋಕ್ ಮೇಲೆ ಬಗರ್ ಹುಕುಂ ಅಸ್ತ್ರ ಪ್ರಯೋಗಿಸಿ ಕಾರ್ಯಕ್ರಮ ಯಶಸ್ವಿಯಾಗದಂತೆ ಸರ್ಕಾರ ನೋಡಿಕೊಂಡಿದೆ ಎಂದು ಆರೋಪಿಸಿದರು. ಅಶೋಕ್ ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿ ಅಕ್ರಮವಾಗಿ ಜಮೀನು ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ವಿರುದ್ಧವೂ ವಾಗ್ಧಾಳಿ ನಡೆಸಿ, ಈಶ್ವರಪ್ಪಗೆ ಮೆದಳು ಇಲ್ಲ ಎಂದು ವ್ಯಂಗ್ಯವಾಡಿದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧವೂ ವಾಗ್ಧಾಳಿ ನಡೆಸಿದ ಸಿಎಂ, ಮಕ್ಕಳಿಗೆ ಹಾಲು ಕೊಡುವ ಯೋಜನೆಯನ್ನು ರೇವಣ್ಣ ಆರಂಭಿಸಿದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಎಲ್ಲ ಯೋಜನೆಗಳನ್ನು ಇವರೇ ಮಾಡಿದ್ದರು. ಈಗ ಕರ್ನಾಟಕ ವಿಕಾಸ ಯಾತ್ರೆ ಮಾಡ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ವಿಕಾಸ ಮಾಡಿಲ್ಲವೇ ? ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದಾಗ ಹಾಸಿಗೆ ತಲೆದಿಂಬು ತೆಗೆದುಕೊಂಡು ಹೋಗಿ ಮತ್ತೆ ಎತ್ತಿಕೊಂಡು ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು. ಸೀರೆ ರಹಸ್ಯ ಬಿಚ್ಚಿಟ್ಟ ಸಿಎಂ
ನಾನು ವಕೀಲನಾಗಿದ್ದಾಗ ಶಾಂತಲಾ ಸಿಲ್ಕ್ ನಲ್ಲಿ ಸೀರೆ ತೆಗೆದುಕೊಳ್ಳುವವರ ಜೊತೆಗೆ ಹೋಗಿದ್ದೆ. ನನ್ನ ಹತ್ತಿರ ದುಡ್ಡಿರಲಿಲ್ಲ. ನಾನು ಬೇಡ ಎಂದಿದ್ದಕ್ಕೆ ಅವರು ಒತ್ತಾಯ ಮಾಡಿ ಸೀರೆ ಕೊಟ್ಟರು. ಆ ಮೇಲೆ ದುಡ್ಡು ಕೊಟ್ಟು ಕಳುಹಿಸಿದೆ. ಅವರು ನೀವು ಬಂದು ಹೋದ ಮೇಲೆ ನಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದರು.