Advertisement

IT: ಜಾಲತಾಣಗಳು ಹೊಣೆ ಹೊರಲಿ: ಸಚಿವ ರಾಜೀವ್‌ ಚಂದ್ರಶೇಖರ್‌ ಎಚ್ಚರಿಕೆ

11:51 PM Oct 25, 2023 | Team Udayavani |

ಹೊಸದಿಲ್ಲಿ: ಭಾರತ ಸೇರಿದಂತೆ ಜಗತ್ತಿನಾದ್ಯಂತ ಮುಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಉತ್ತರದಾಯಿತ್ವತೆ ಹೊಂದಬೇಕಾಗುವ ದಿನಗಳು ಬರಲಿವೆ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುವ ದಿನಗಳಿಗೆ ಪೂರ್ಣ ವಿರಾಮ ಸಿಗಲಿದೆ ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.

Advertisement

ಅಮೆರಿಕದಲ್ಲಿ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ವಿರುದ್ಧ 40 ಪ್ರಾಂತ್ಯಗಳಲ್ಲಿ ದಾವೆ ಹೂಡಲಾಗಿರುವ ಹಿನ್ನೆಲೆಯಲ್ಲಿ ಮಾತನಾಡಿದ ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌, “ಇದುವರೆಗೆ ಜಗತ್ತಿನಲ್ಲಿರುವ ಎಲ್ಲರೂ ಜಾಲತಾಣಗಳ ಉತ್ತಮ ಅಂಶಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಅದರ ದುಷ್ಪರಿಣಾಮಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇದುವರೆಗೆ ಜಗತ್ತಿನಲ್ಲಿ ಜಾಲತಾಣಗಳು ಹೊಣೆಗಾರಿಕೆ ಇಲ್ಲದೆ ವರ್ತಿಸುತ್ತಿದ್ದವು. ಅಮೆರಿಕದಲ್ಲಿ ವಿಶೇಷವಾಗಿ ಈ ಬಗ್ಗೆ ವಿಶೇಷವಾಗಿ ಗಮನಹರಿಸುತ್ತಿದ್ದಾರೆ ಎಂದು “ಎನ್‌ಡಿಟಿವಿ’ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಜಾಲತಾಣಗಳಲ್ಲಿ ಅಪ್‌ಲೋಡ್‌ ಆಗುವ ಮಾಹಿತಿಗಳಿಗೆ ಹೊಣೆ ಯಾರು ಎಂದು ಪ್ರಶ್ನಿಸಿದ ಅವರು, ನಮ್ಮ ಸರಕಾರ ಕೂಡ ಜಾಲತಾಣಗಳು ಹೊಣೆಗಾರಿಕೆಯಿಂದ ವರ್ತಿಸಬೇಕು ಎಂಬ ನಿಲುವು ಹೊಂದಿದೆ. ಈ ನಿಟ್ಟಿನಲ್ಲಿ ಎಚ್ಚೆತ್ತುಗೊಳ್ಳಬೇಕಾಗಿದೆ ಎಂದಿದ್ದಾರೆ.

ಮೆಟಾ ವ್ಯಾಪ್ತಿಯಲ್ಲಿ ಬರುವ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮತ್ತು ಇತರ ಜಾಲತಾಣಗಳು ಯುವ ಮನಸ್ಸಿನ ಮೇಲೆ ಪ್ರಭಾವ ಉಂಟು ಮಾಡಿ ಹೆಚ್ಚಿನ ಅವಧಿಯನ್ನು ಜಾಲತಾಣಗಳಲ್ಲಿ ಕಳೆಯುವಂತೆ ಮಾಡುತ್ತಿವೆ. ಇದರಿಂದಾಗಿ ಅವರ ಮನಸ್ಸಿನ ಮೇಲೆ ಖನ್ನತೆ, ನಿದ್ರಾಹೀನತೆ ಸೇರಿದಂತೆ ಹಲವು ಋಣಾತ್ಮಕ ಪರಿಣಾಮ ಬೀರುತ್ತಿದೆ. ಈ ಬಗ್ಗೆ ಹಲವು ಸಂಶೋಧನಾ ವರದಿಗಳಲ್ಲಿ ಉಲ್ಲೇಖಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಫ್ರಾನ್ಸೆಸ್‌ ಹ್ಯೂಜೆನ್‌ ಎಂಬುವರು ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next