Advertisement

land ಖರೀದಿಸಿದ್ದು ನಿಜ, ತಪ್ಪೇನು? ಪ್ರಿಯಾಂಕ್‌ ಖರ್ಗೆ

12:41 AM Aug 28, 2024 | Team Udayavani |

ಬೆಂಗಳೂರು: ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ ನಮ್ಮ ಕುಟುಂಬದವರು ಟ್ರಸ್ಟಿ ಗಳಾ ಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ ನಾಗರಿಕ ಬಳಕೆ (ಸಿಎ) ನಿವೇಶನ ಖರೀದಿ ಮಾಡಿರು ವುದು ನಿಜ. ಇದರಲ್ಲಿ ತಪ್ಪೇನಿದೆ? ನಾವು ಕಾನೂನು ಬದ್ಧ ವಾಗಿಯೇ ಖರೀದಿಸಿದ್ದೇವೆ. ನಾವು ಕೌಶಲಾಭಿವೃದ್ಧಿ ಕೇಂದ್ರ ಮಾಡಬಾರದೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

Advertisement

ವಿಕಾಸಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ, ಸಿದ್ಧಾರ್ಥ ವಿಹಾರ ಟ್ರಸ್ಟ್‌ ಎರಡು ದಶಕದಿಂದ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದೆ. ನಾವು ಲಾಭದ ವ್ಯವಹಾರ ಮಾಡಲು ಟ್ರಸ್ಟ್‌ ನಡೆಸುತ್ತಿಲ್ಲ. ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನಲ್ಲಿ 193 ಸಿಎ ನಿವೇಶನಗಳಿಗೆ ಅರ್ಜಿ ಆಹ್ವಾನಿಸಿದಾಗ ಕೇವಲ 43 ಸಂಸ್ಥೆಗಳು ಅರ್ಜಿ ಹಾಕಿದ್ದವು. ಅದರಲ್ಲಿ ನಮ್ಮದೂ ಒಂದು. ಸಿಎ ನಿವೇಶನವನ್ನು ಹಣ ಕೊಟ್ಟು ಖರೀದಿ ಮಾಡಿದ್ದೇವೆ. ಯಾವುದೇ ಸಬ್ಸಿಡಿ ಕೇಳಿಲ್ಲ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಟ್ರಸ್ಟ್‌ ನಡೆಸುತ್ತಿರುವ ರಾಹುಲ್‌ ಖರ್ಗೆ ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಪಡೆದವರು. ವಿಟಿಯು ಎಂಜಿನಿಯರಿಂಗ್‌ನಲ್ಲಿ ಟಾಪರ್‌. ಐಐಎಸ್‌ಸಿಯಲ್ಲಿ ತರಬೇತಿ ಪಡೆದು ಸೂಪರ್‌ ಕಂಪ್ಯೂಟರ್‌ ಶಾಖೆಯಲ್ಲಿ ಕೆಲಸ ಮಾಡಿದವರು. ಕೇಂದ್ರ ಏಜೆನ್ಸಿಗಳಿಂದ ಹಲವು ಪ್ರಶಸ್ತಿಗಳು ಬಂದಿವೆ. ಇದಕ್ಕಿಂತ ಇನ್ನೇನು ಬೇಕು? ನಮ್ಮ ಕುಟುಂಬದವರು ಉದ್ಯಮಿ ಆಗಬಾರದೇ ಎಂದು ಅವರು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next