Advertisement
ಕಾಂಗ್ರೆಸ್ ಪಕ್ಷವು ದುರ್ಬಲವಾಗುತ್ತಿದೆ ಎಂಬುದು ಸತ್ಯ. ಇದರಿಂದಾಗಿಯೇ ನಾವು ಇಲ್ಲಿ ಸೇರಿದ್ದೇವೆ. ಹಿಂದೆಯೂ ನಾವು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಸಲುವಾಗಿ ಒಂದಾಗಿದ್ದೆವು ಎಂದು ಕಪಿಲ್ ಸಿಬಲ್ ಹೇಳಿದರು.
Related Articles
ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಗುಲಾಂ ನಬಿ ಆಜಾದ್, “ನೀವು ಜಮ್ಮು-ಕಾಶ್ಮೀರದವರಾಗಿರಿ ಅಥವಾ ಲಡಾಖ್‌ನವರಾಗಿರಿ; ನಾವು ಎಲ್ಲ ಧರ್ಮ, ಜನ ಮತ್ತು ಜಾತಿಗಳಿಗೆ ಗೌರವ ನೀಡಬೇಕು. ಇದೇ ನಮ್ಮ ಶಕ್ತಿ, ಇದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.
Advertisement
ನಾವು ಯಾರ ವಿರುದ್ಧವೂ ಅಲ್ಲಜಿ -23 ಬಗ್ಗೆ ಉಲ್ಲೇಖೀಸಿದ ಆಜಾದ್, ಇದು ಮಾಧ್ಯಮಗಳು ಸೃಷ್ಟಿಸಿದ ಪದ. ನಾವು ಯಾರ ವಿರುದ್ಧವೂ ಅಲ್ಲ. ನಾವು ಪಕ್ಷವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ, ಹಲವಾರು ಮಂದಿ ದೇಶವನ್ನು ವಿಭಜಿಸಲು ನೋಡುತ್ತಿದ್ದಾರೆ, ನಾವು ಅಭಿವೃದ್ಧಿಯ ಸಂಕಲ್ಪ ಮಾಡಿದ್ದೇವೆ ಎಂದರು. ಜತೆಗೆ, “ನಾನು ರಾಜ್ಯಸಭೆಯಿಂದ ನಿವೃತ್ತಿಯಾಗಿರಬಹುದು. ಆದರೆ ಸಕ್ರಿಯ ರಾಜಕಾರಣದಿಂದ ಅಲ್ಲ, ನನ್ನ ಹೋರಾಟ ಮುಂದೆಯೂ ಹಾಗೆಯೇ ಇರುತ್ತದೆ ಎಂದೂ ಘೋಷಿಸಿದರು. ಆಜಾದ್ ಅನುಭವ ಬೇಕಿತ್ತು
ಗುಲಾಂ ನಬಿ ಆಜಾದ್ ಅವರನ್ನು ರಾಜ್ಯಸಭೆಯಲ್ಲಿ ಮುಂದುವರಿಸದೆ ಇರುವ ಪಕ್ಷದ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕಪಿಲ್ ಸಿಬಲ್, ಅನುಭವಿ ರಾಜಕಾರಣಿ ಆಜಾದ್ ರಾಜ್ಯಸಭೆಯಿಂದ ಹೊರಗೆ ಬಂದಿರುವುದು ಬೇಸರ ತಂದಿದೆ ಎಂದಿದ್ದಾರೆ.
ಆಜಾದ್ ಅವರಿಗೆ ದೇಶದ ಪ್ರತೀ ಜಿಲ್ಲೆಯ ಪರಿಚಯವಿದೆ. ಇಂಥವರನ್ನು ಮುಂದುವರಿಸಬೇಕಿತ್ತು ಎಂದಿದ್ದಾರೆ.