Advertisement
ಸದಾಶಿವನಗರ ನಿವಾಸದ ಬಳಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರಕಾರ ಸ್ವಲ್ಪಮಟ್ಟಿಗೆ ಶೇಕ್ ಆಗಿದೆ. ಇಲ್ಲ ಅಂತ ಹೇಳಿದರೆ ನಾನು ಸುಳ್ಳು ಹೇಳಿದಂತಾಗುತ್ತದೆ. ಇದನ್ನು ನಾವು ಸರಿಪಡಿಸಿಕೊಂಡು ಆಡಳಿತವನ್ನು ಮುಂದುವರಿಸುತ್ತೇವೆ. ನಾವ್ಯಾರೂ ಬಿಜೆಪಿ ಹುನ್ನಾರಕ್ಕೆ ಬಲಿಯಾಗುವುದು ಬೇಡ, ಆಡಳಿತ ಮಾಡಿಕೊಂಡು ಹೋಗೋಣ ಅಂತ ಸಂಪುಟ ಸಭೆಯಲ್ಲೂ ತೀರ್ಮಾನಿಸಿದ್ದೇವೆ. ಕಾನೂನು ಸಮರ ಮುಂದುವರಿಸಿಕೊಂಡೇ ಆಡಳಿತ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
Related Articles
Advertisement
ಪ್ರಾಸಿಕ್ಯೂಷನ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಯ ಸೆಕ್ಷನ್ 17ಎ ಅಡಿ ಯಾರ್ಯಾರಿಗೆ ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕೇಂದ್ರವೇ ವ್ಯಾಖ್ಯಾನಿಸಿದೆ. ಸಿಎಂಗೆ ಯಾರು ಮತ್ತು ಸಚಿವರಿಗೆ ಯಾರು ಅನುಮತಿ ಕೇಳಬೇಕು ಅಂತ ಕೇಂದ್ರದ ಮಾರ್ಗಸೂಚಿ ಇದೆ. ಸಿಎಂಗೆ ಡಿಜಿಪಿ ತನಿಖೆಗೆ ಅನುಮತಿ ಕೇಳಬೇಕು ಅಂತ ಇದೆ. ರಾಜ್ಯಪಾಲರು ಇದ್ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಇನ್ನೊಂದು ಕಡೆ, ದಾಖಲೆ ಇಲ್ಲದೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿ¨ªಾರೆ. ನಮ್ಮ ಸಚಿವ ಸಂಪುಟದ ತೀರ್ಮಾನವನ್ನೂ ತಿರಸ್ಕರಿಸಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಲೋಕಾಯುಕ್ತಕ್ಕೇ ತನಿಖೆ ಸಾಧ್ಯತೆಮುಡಾ ತನಿಖೆಯನ್ನು ನ್ಯಾಯಾಲಯವು ಯಾರಿಗೆ ನೀಡುತ್ತದೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಅವರಿಗೆ ಇರುವ ಆಯ್ಕೆ ಲೋಕಾಯುಕ್ತ ಮಾತ್ರ. ಲೋಕಾಯುಕ್ತದಲ್ಲೇ ಅರ್ಜಿದಾರರು ದೂರು ಕೊಟ್ಟಿರುವುದರಿಂದ ತನಿಖೆಯನ್ನೂ ಲೋಕಾಯುಕ್ತಕ್ಕೇ ಕೊಡುವ ಸಾಧ್ಯತೆ ಇದೆ ಎಂದು ಪರಮೇಶ್ವರ್ ಹೇಳಿದರು.