Advertisement

ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ : ಫಿಲಿಪ್ ನೇರಿ

03:40 PM Jul 28, 2021 | Team Udayavani |

ಪಣಜಿ: ಕರ್ನಾಟಕವು ಮಹದಾಯಿ ನದಿ ನೀರನ್ನು ತಿರುಗಿಸಿಕೊಂಡಿರುವುದು ಸತ್ಯ. ಆದರೆ ಎಷ್ಟು ಪ್ರಮಾಣದಲ್ಲಿ ನೀರು ತಿರುಗಿಸಿಕೊಳ್ಳಲಾಗಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ಬರುತ್ತದೆ ಎಂದು ಸಚಿವ ಫಿಲಿಪ್ ನೇರಿ ರೋಡ್ರಿಗಸ್ ವಿಧಾನಸಭಾ ಅಧಿವೇಶನದಲ್ಲಿ ನುಡಿದರು.

Advertisement

ಮಳೆಗಾಲದ ಅಧಿವೇಶನದ ಮೊದಲ ದಿನ ಬುಧವಾರ ಪ್ರಶ್ನೊತ್ತರ ವೇಳೆಯಲ್ಲಿ ಪರ್ವರಿ ಕ್ಷೇತ್ರದ ಶಾಸಕ ರೋಹನ್ ಖಂವಟೆ ವಿಷಯ ಪ್ರಸ್ತಾಪಿಸಿ- ಮಹದಾಯಿ ನದಿಯ ಸದ್ಯದ ಪರಿಸ್ಥಿತಿ ಏನು ಎಂಬುದನ್ನು ಸರ್ಕಾರ ಮಾಹಿತಿ ನೀಡಲು ಸಾಧ್ಯವೇ ಎಂದು ಪ್ರಶ್ನೆ ಕೇಳಿದ್ದರು.

ಮಹದಾಯಿ ಪ್ರಕರಣದಲ್ಲಿ ನ್ಯಾಯಾಲಯದ ಹೊರಗೆ ಸರ್ಕಾರ ಏನು ಮಾಡಲು ಸಾಧ್ಯ ಎಂದು ಪ್ರತಿಪಕ್ಷದ ಶಾಸಕರು ಸೂಚನೆ ನೀಡಬೇಕು ಎಂದು ಜಲಸಂಪನ್ಮೂಲ ಸಚಿವ ಫಿಲಿಪ್ ನೇರಿ ರವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next