Advertisement

ವೈದ್ಯಕೀಯ ಬಿಲ್‌ ಪಾವತಿ ಸರ್ಕಾರದ ಕರ್ತವ್ಯ

07:07 AM Jun 04, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಬಿಲ್‌ ಕಳೆದ 4 ವರ್ಷಗಳಿಂದ ನೌಕರರಿಗೆ ಪಾವತಿ ಯಾ ಗದೆ 183 ನೌಕರರಿಗೆ ತೊಂದರೆಯಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರು ಕಳಿಸದಂತೆ  ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚ ಬಿಲ್‌ ವಿತರಣೆ ಕಾರ್ಯ ಕ್ರಮದಲ್ಲಿ ಭಾಗವಹಿಸಿ  ಮಾತನಾಡಿದ ಅವರು, ಸರ್ಕಾರಿ ನೌಕರರ ವೇತನ ಹಾಗೂ ಇತರೆ ಬಿಲ್‌ಗ‌ಳನ್ನು 8 ದಿನ ದೊ ಳಗೆ ಪೂರ್ಣಗೊಳಿಸಲಾಗುತ್ತಿತ್ತು. ಆದರೆ ಈ ವೈದ್ಯಕೀಯ ವೆಚ್ಚ ಬಿಲ್‌ನ್ನು ಕಳೆದ 4 ವರ್ಷದಿಂದ ನೆನ ಗುದಿಗೆ ಬಿದ್ದಿತ್ತು.

ಯಾರೊ ಮಾಡಿರುವ  ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತಹ ಸಮಸ್ಯೆ ಎದುರಾಗಿದೆ ಎಂದರು. ಜಿಲ್ಲಾಧಿಕಾರಿ ಆರ್‌.ಲತಾ ಮಾತನಾಡಿ, ಮುಂದಿನ ದಿನಗಳಲ್ಲಿ ಆಯಾ ತಾಲೂಕಿನಲ್ಲೇ ಸರ್ಕಾರಿ ನೌಕರರಿಗೆ ವೈದ್ಯಕೀಯ ವೆಚ್ಚ ಬಿಲ್‌ಗ‌ಳನ್ನು ನೀಡಲು ಕ್ರಮ  ವಹಿಸ ಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ವೈದ್ಯಕೀಯ ಸರ್ಕಾರಿ ನೌಕರರ ವೈದ್ಯಕೀಯ ವೆಚ್ಚ ಬಿಲ್‌ಗ‌ಳನ್ನು ವಿಳಂಬ ಆಗದಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

183 ಸರ್ಕಾರಿ ನೌಕರರಿಗೆ  ವೈದ್ಯಕೀಯ ವೆಚ್ಚ ಬಿಲ್‌ಗ‌ಳನ್ನು ವಿತರಿಸಲಾಯಿತು. ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌, ಸಾರ್ವ ಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಸ್‌ ನಾಗೇಶ್‌, ವೃತ್ತ ನಿರೀಕ್ಷಕ ಸುದರ್ಶನ್‌, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ,  ಪದಾಧಿಕಾರಿಗಳಾದ ಚಿಂತಾಮಣಿ ಚೌಡಪ್ಪ, ಅಶೋಕ್‌ ಕುಮಾರ್‌, ರವಣಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next