Advertisement

ಪರಿಸರ ಸಂರಕ್ಷಿಸುವುದು ಪ್ರತಿ ನಾಗರಿಕನ ಕರ್ತವ್ಯ: ಪ್ರಭಾಕರನ್‌

12:14 AM Jul 15, 2019 | sudhir |

ಮಡಿಕೇರಿ: ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪ್ರಭಾಕರನ್‌ ಕರೆ ನೀಡಿದ್ದಾರೆ.

Advertisement

ಕೊಡಗು ಗ್ರೀನ್‌ ಸಿಟಿ ಫೋರಂ ವತಿಯಿಂದ ರಚನೆಗೊಂಡಿರುವ ಹಸಿರುಪಡೆ’ಗೆ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಗ್ರೀನ್‌ ಸಿಟಿ ಫೋರಂನ ಅಧ್ಯಕ್ಷ ಕುಕ್ಕೇರ ಜಯಾಚಿಣ್ಣಪ್ಪ ಮಾತನಾಡಿ, ಸ್ವಚ್ಛ ಭಾರತದ ಕನಸಿನೊಂದಿಗೆ ಸುಂದರ ಪರಿಸರವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಮನವಿ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಜಯಾಚಿಣ್ಣಪ್ಪ ಮನವಿ ಮಾಡಿದರು.

ಗ್ರೀನ್‌ ಸಿಟಿ ಫೋರಂನ ಪ್ರಮುಖರಾದ ಮೋಂತಿಗಣೇಶ್‌ ಮಾತನಾಡಿ ವಿದ್ಯಾರ್ಥಿಗಳಿಗೆ ಒಣಕಸ ಹಾಗೂ ಹಸಿಕಸವನ್ನು ವಿಂಗಡಣೆ ಮಾಡುವ ವಿಧಾನವನ್ನು ವಿವರಿಸಿದರು. ನಂತರ ಕಿರುಚಿತ್ರದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ವಿಶ್ವ ಪರಿಸರ ದಿನದ ಪ್ರಯುಕ್ತ ಗಣ್ಯರು ಹಾಗೂ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟರು. ಕೊಡಗು ವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿ ವಿದ್ಯಾಹರೀಶ್‌, ಗ್ರೀನ್‌ ಸಿಟಿ ಫೋರಂನ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ, ಕಾರ್ಯದರ್ಶಿ ರಾಕೇಶ್‌, ಸದಸ್ಯರಾದ ಅಂಬೆಕಲ್ಲು ನವೀನ್‌ ಕುಶಾಲಪ್ಪ, ಕೃಷ್ಣಮೂರ್ತಿ, ಕೊಡಗು ಪ್ರಸ್‌ಕ್ಲಬ್‌ ಅಧ್ಯಕ್ಷ ಎ.ಆರ್‌.ಕುಟ್ಟಪ್ಪ, ಮೊದಲಾ ದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next