ಪಡುಬಿದ್ರಿ: ಮಾತೃ ಭಾಷಾ ಜ್ಞಾನದ ಜೊತೆಗೆ ಎಲ್ಲಾ ಭಾಷೆಗಳ ಕಲಿಕೆಯನ್ನೂ ವೃದ್ಧಿಸಿಕೊಂಡರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡಾ ಬುದ್ಧಿವಂತರಾಗಿ ಮೂಡಿ ಬರಲು ಸಾಧ್ಯವಿದೆ. ಕನ್ನಡ ಭಾಷಾ ಬೋಧನೆಯೊಂದಿಗೆ ಆಂಗ್ಲ ಭಾಷಾ ಮಾಧ್ಯಮವನ್ನೂ ಜೋಡಿಸುವ ಮೂಲಕ ನಮ್ಮೂರಿನ ಸರಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಿದೆ. ಕನ್ನಡ ಶಾಲೆಗಳ ಉಳಿವಿಗೆ ಇಂತಹ ಉಪಕ್ರಮ ಅತ್ಯಂತ ಶ್ಲಾಘನೀಯವಾಗಿದೆ. ಈ ಮೂಲಕ ಜ್ಞಾನದ ಬೆಳಕನ್ನು ನಾಡಿಗೆ ಪಸರಿಸಲು ಸಾಧ್ಯವಿದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ನಂದಿಕೂರು ಶಿಕ್ಷಣ ಟ್ರಸ್ಟ್ ನಂದಿಕೂರು ಮತ್ತು ಶ್ರೀ ರಾಮ ಟೆಂಪಲ್ ಟ್ರಸ್ಟ್‌ನ ಸಹಯೋಗದಲ್ಲಿ ನಂದಿಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20 ಶೈಕ್ಷಣಿಕ ಸಾಲಿನಲ್ಲಿ ಆರಂಭಿಸಲಾಗುವ ಎಲ್ಕೆಜಿ, ಯುಕೆಜಿ ಹಾಗೂ ಒಂದನೇ ತರಗತಿ ಆಂಗ್ಲ ಮಾಧ್ಯಮ ವಿಭಾಗದ ಪ್ರಾರಂಭೋತ್ಸವ ಸಮಾರಂಭದ ದೀಪ ಬೆಳಗಿಸಿ ಅವರು ಆಶೀರ್ವಚನ ನೀಡಿದರು.
ಆರ್‌ಬಿಐನ ಆರ್ಥಿಕ ಸಂಶೋಧನಾ ವಿಭಾಗದ ನಿವೃತ್ತ ಮುಖ್ಯಸ್ಥ ಡಾ| ಸದಾನಂದ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ನೂತನವಾಗಿ ಆರಂಭಿಸಲಾಗುವ ಎಲ್ಕೆಜಿ ತರಗತಿಗಳನ್ನು ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ, ಮುಂಬೈನ ಉದ್ಯಮಿ ಕೃಷ್ಣ ವೈ. ಶೆಟ್ಟಿ, ಯುಕೆಜಿ ತರಗತಿಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಒಂದನೇ ತರಗತಿಯನ್ನು ಸಂಗೀತ ನಿರ್ದೇಶಕ ಗುರುಕಿರಣ್, ಸಂಯೋಜಕರ ಕಚೇರಿಯನ್ನು ಸಮಾಜ ಸೇವಕ ಸುರೇಶ್ ಶೆಟ್ಟಿ ಗುರ್ಮೆ, ಕಂಪ್ಯೂಟರ್ ಕೊಠಡಿಯನ್ನು ಭಾಸ್ಕರ್ ಶೆಟ್ಟಿ ಸಾಂತೂರು, ಶಿಕ್ಷಕರ ಕೊಠಡಿಯನ್ನು ಪಲಿಮಾರು ಗ್ರಾ.ಪಂ. ಅಧ್ಯಕ್ಷ ಜಿತೇಂದ್ರ ಫುಟಾರ್ಡೋ, ದಾನಿಗಳು ಕೊಡಮಾಡಿದ ಶಾಲಾ ಬಸ್‌ಗಳನ್ನು ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎನ್. ಮಧ್ವರಾಯ ಭಟ್ ಉದ್ಘಾಟಿಸಿದರು.
ಉದ್ಯಮಿಗಳಾದ ಉದಯ ಸುಂದರ ಶೆಟ್ಟಿ, ಶಂಕರ್ ಶೆಟ್ಟಿ ವಿರಾರ್, ಶ್ರೀ ರಾಮ ಟೆಂಪಲ್ ಟ್ರಸ್ಟ್‌ನ ಸುರೇಶ್ ಶೆಟ್ಟಿ, ರಘುರಾಮ ಶೆಟ್ಟಿ ಪುಣೆ, ಪ್ರಕಾಶ್ ವಿ.ಶೆಟ್ಟಿ ಅಡ್ವೆ ಮಾಗಂದಡಿ, ದಿನೇಶ್ ಶೆಟ್ಟಿ ಅಡ್ವೆ ಪರಾಡಿ, ಸತೀಶ್ ಆರ್. ಶೆಟ್ಟಿ, ತೆಂಕುಮನೆ ಪ್ರಸಾದ್ ಎಸ್.ಹೆಗ್ಡೆ, ಸಿಎ. ವಿಶ್ವನಾಥ ಶೆಟ್ಟಿ ನಂದಿಕೂರು, ನಾಗರಾಜ ರಾವ್ ನಂದಿಕೂರು, ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಉದಯ ರೈ ಅರಂತಡೆ, ನವೀನ್‌ಚಂದ್ರ ಸುವರ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ವಿಮಲಾ, ಎಸ್‌ಡಿಎಂಸಿ ಅಧ್ಯಕ್ಷ ಪದ್ಮನಾಭ ಆಚಾರ್ಯ ಉಪಸ್ಥಿತರಿದ್ದರು.
ಸಾಧಕ ಶಿಕ್ಷಕಿ ಸುಷ್ಮಾ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿ, ಗೌರವಿಸಲಾಯಿತು.
ನಂದಿಕೂರು ಶಿಕ್ಷಣ ಟ್ರಸ್ಟ್‌ನ ಆಡಳಿತ ನಿರ್ದೇಶಕ ಲಕ್ಷಣ ಎಲ್. ಶೆಟ್ಟಿವಾಲ್ ಅರಂತಡೆ ಸ್ವಾಗತಿಸಿದರು. ಟ್ರಸ್ಟ್ ಅಧ್ಯಕ್ಷ ಅಡ್ವೆ ಮಾಗಂದಡಿ ಅನಿಲ್ ಶೆಟ್ಟಿ ಏಳಿಂಜೆ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಅಡ್ವೆ ಸನ್ನೋಣಿ ಗಣನಾಥ ಬಿ. ಶೆಟ್ಟಿ ದಾನಿಗಳ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಸಿಎ. ಅನಿಲ್ ಶೆಟ್ಟಿ ತೆಂಕುಮನೆ ವಂದಿಸಿದರು. ಸಾಯಿನಾಥ್ ಎಂ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.