Advertisement
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಿದ್ಧರು, ದುಡ್ಡಿರುವವರು ಚುನಾವಣೆಯಲ್ಲಿ ಸ್ಪರ್ಧಿಸಿ ಕೋಟಿ ಕೋಟಿ ರೂ.ಗಳನ್ನು ಖರ್ಚು ಮಾಡಿ ಗೆಲ್ಲುವ ಕೆಟ್ಟ ಪದ್ಧತಿ ತೊಲಗಬೇಕು. ಜನಸಾಮಾನ್ಯರು ಚುನಾವಣೆಗೆ ನಿಂತು ಹಣ ವೆಚ್ಚ ಮಾಡದೇ ಗೆಲ್ಲುವಂಥ ಪರಿಸ್ಥಿತಿ ಬರಬೇಕು. ಅದಕ್ಕಾಗಿ ನಮ್ಮ ಪ್ರಜಾಕೀಯ ಪಕ್ಷ ಹೋರಾಟ ನಡೆಸುತ್ತಿದೆ ಎಂದರು.
Related Articles
Advertisement
ಸುಳ್ಳು ಹೇಳಿ ಮತ ಲೂಟಿ ಮಾಡಲ್ಲ: ಯಾವುದೇ ಪಕ್ಷ ಅಥವಾ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಮಾಡುವುದು ದೊಡ್ಡದಲ್ಲ. ಪ್ರಣಾಳಿಕೆಯನ್ನು ಕೋಟ್ìನಲ್ಲಿ ರಿಜಿಸ್ಟರ್ ಮಾಡಬೇಕು. ಪಕ್ಷ ಅಥವಾ ಅಭ್ಯರ್ಥಿ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಈಡೇರಿಸದಿದ್ದರೆ ಆ ಅಭ್ಯರ್ಥಿ ಅನರ್ಹಗೊಳ್ಳಬೇಕು ಆಗ ಮಾತ್ರ ಸುಳ್ಳು ಹೇಳಿ ಮತವನ್ನು ಲೂಟಿ ಮಾಡುವುದು ತಪ್ಪುತ್ತದೆ ಎಂದರು.
ಜನರಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಜನರ ಬೇಡಿಕೆಗಳನ್ನು ಈಡೇರಿಸಿ ಜನರಿಗೆ ಪಾರದರ್ಶಕ ಆಡಳಿತವನ್ನು ನೀಡುವಂತಾಗಬೇಕು. ಇತ್ತಿಚಿಗಿನ ತಂತ್ರಜ್ಞಾನಗಳನ್ನು ಬಳಸಿ ಪ್ರತಿಯೊಬ್ಬರಿಗೂ ಸೌಲಭ್ಯವನ್ನು ತಲುಪಿಸುವಷ್ಟು ತಾಕತ್ತು ಸರ್ಕಾರಕ್ಕಿದೆ ಜನರು ಮತದಾನ ಮಾಡುವ ಮೊದಲು ಸರಿಯಾದ ನಿರ್ಧಾರ ಮಾಡಬೇಕು ಎಂದರು.
ಜನ ಸೇವೆಯೇ ಮುಖ್ಯ ಗುರಿ: ಚುನಾವಣೆ ಗೆಲ್ಲಲು ಅಭ್ಯರ್ಥಿಗಳು ಸುಳ್ಳು ಭರವಸೆಗಳನ್ನು ಕೊಟ್ಟು ಗಿಮಿಕ್‌ಗಳನ್ನು ಮಾಡುತ್ತಾರೆ. ಚುನಾವಣೆ ಒಂದು ವರ್ಷ ಮುಂಚಿತವಾಗಿ ಜನಸೇವೆ ಮಾಡಲು ಹಣ ಖರ್ಚು ಮಾಡಿ ಷೋಗಳನ್ನು ನೀಡುತ್ತಾರೆ. ಇಂಥವರನ್ನು ಜನರು ಒಪ್ಪಬಾರದು ವ್ಯಕ್ತಿ ಮತ್ತು ಪಕ್ಷವನ್ನು ನೋಡದೇ ಆತನಲ್ಲಿರುವ ವಿಚಾರವನ್ನು ನೋಡಿ ಮತಹಾಕಬೇಕು ಎಂದರು.
ಲೂಟಿ ಮಾಡುವವರಿಗೆ ಮತ ಹಾಕಬೇಡಿ: ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ 2 ಲಕ್ಷ ಸಂಬಳ ಬರುತ್ತದೆ ಆದರೆ ಆ ಆಭ್ಯರ್ಥಿ ಗೆಲ್ಲಲು 40 ಕೋಟಿ ಹಣವನ್ನು ಖರ್ಚು ಮಾಡುತ್ತಾನೆ. ಕೋಟಿ ಕೋಟಿ ಖರ್ಚು ಮಾಡಿ ಗೆದ್ದು ಸಮಾಜ ಸೇವೆ ಮಾಡುವ ಬದಲು ಅದನ್ನು ಸಮಾಜಕ್ಕೆ ನೀಡಿಲ್ಲ. 40 ಕೋಟಿ ಹಣವನ್ನು ಖರ್ಚು ಮಾಡಿದವರು ಗೆದ್ದಮೇಲೆ ಎರಡು ಪಟ್ಟಿಗಿಂತ ಹೆಚ್ಚು ಲೂಟಿ ಮಾಡುತ್ತಾರೆ ಅಂಥವರು ಗೆಲ್ಲಬಾರದು ಜನರು ಬದಲಾಗಬೇಕು ಎಂದರು.
ಪಾರ್ಟಿ ಫಂಡ್ ಇರಬಾರದು, ಕಾರ್ಯಕರ್ತರು ಇರಬಾರದು, ಪಾರ್ಟಿಯ ಹೆಸರಿನಲ್ಲಿ ದಂಧೆ ನಡೆಯಬಾರದು ಎಂಬ ಬದಲಾವಣೆಯನ್ನು ಬಯಸಿ ಪಕ್ಷ ಸ್ಥಾಪನೆ ಮಾಡಿದ್ದೇನೆ. ರಾಜಕೀಯದಲ್ಲಿ ಸೋಲು ಗೆಲುವು ಮುಖ್ಯವಾಗಲ್ಲ ರಾಜಕೀಯ ಬದಲಾವಣೆಗೆ ನಾನು ಪ್ರಯತ್ನ ಮಾಡಿದ್ದೇನೆ ಎಂಬ ಆತ್ಮ ತೃಪ್ತಿ ಇದೆ ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರಜಾಕೀಯ ಅಭ್ಯರ್ಥಿ ಎಂ. ನಾಗರಾಜು ಸುದ್ದಿಗೋಷ್ಠಿಯಲ್ಲಿ ಇದ್ದರು.