Advertisement

ಗೋವಿನ ರಕ್ಷಣೆ ನಮ್ಮ ಕರ್ತವ್ಯ: ಜುಬೇದಾ ಬಾರಿಗಿಡದ

08:30 AM Nov 06, 2021 | Team Udayavani |

ಉಗರಗೋಳ: ಧಾರ್ಮಿಕ ದತ್ತಿ ಇಲಾಖೆಯ ಆದೇಶದ ಹಿನ್ನಲೆಯಲ್ಲಿ ದೀಪಾವಳಿ ಬಲಿಪಾಡ್ಯಮಿ ದಿನವಾದ ಶುಕ್ರವಾರ ಗ್ರಾಮದ ಹನಮಂತ ದೇವರ ದೇವಸ್ಥಾನದಲ್ಲಿ ಗ್ರಾ.ಪಂ ಅಧ್ಯಕ್ಷೆ ಜುಬೇದಾ ಬಾರಿಗಿಡದ ಗೋವಿನ ಪೂಜೆ ನೆರೆವೇರಸಿ ಗೋವಿಗೆ ನೈವೇದ್ಯ ಅರ್ಪಿಸಿದರು.
ಬಳಿಕ ಮಾತನಾಡಿದ ಅವರು, ಪುರಾಣ, ಉಪನಿಷತ್ತುಗಳಲ್ಲಿ ಗೋವಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ರಾಜ್ಯ ಸರ್ಕಾರ ಸೂಚಿಸಿದಂತೆ ದೀಪಾವಳಿಯ ವಿಶೇಷ ದಿನದಂದು ಗೋವಿನ ಪೂಜೆ ನಡೆಸಲಾಗಿದೆ. ಗೋ ಪೂಜೆಯಿಂದ ಅನೇಕ ಸಮಸ್ಯೆಗಳು ಸೇರಿ ವಾಸ್ತು ದೋಷಗಳ ನಿವಾರಣೆಯಾಗುತ್ತವೆ.

Advertisement

ಇದನ್ನೂ ಓದಿ:- ವಾಕಿಂಗ್ ಹೋದ ವ್ಯಕ್ತಿಗೆ ಅಂಬುಲೆನ್ಸ್ ಢಿಕ್ಕಿ ; ಸಾವು..!
ಇಂದಿನ ಆಧುನಿಕ ಯುಗದಲ್ಲಿ ಅನಾದಿ ಕಾಲದಿಂದ ನಡೆದು ಬಂದ ಸಂಪ್ರದಾಯಗಳನ್ನು ಮುಂದಿನ ಪೀಳ್ಳಿಗೆಗೆ ತಲುಪಿಸುವ ಸರ್ಕಾರದ ನಡೆ ಸ್ವಾಗತಾರ್ಹ. ಗೋವಿನ ಮಹತ್ವ ತಿಳಿಯುವದರ ಜೊತೆಗೆ ಅವುಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಬಳಿಕ ಗ್ರಾಮದ ವಿವಿಧ ದೇವಸ್ಥಾನಗಳಿಗೆ ತೆರಳಿ ಗೋವಿಗೆ ಹಸಿರು ಬಳೆ, ಸೀರೆ ಹಾಕಿ ಕುಂಕುಮ ಭಂಡಾರ ಹಚ್ಚಿ ಪೂಜೆ ನಡೆಸಿದರು.

ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಸದಸ್ಯರಾದ ವಿಠ್ಠಲ ಸಿದ್ದಕ್ಕನವರ, ರಾಜೇಸಾಬ ಬಾರಿಗಿಡದ, ಪರಸಪ್ಪ ಇಮ್ರಾಪುರ, ರಾಮು ಕಾಳಪ್ಪನವರ, ಮಾರುತಿ ಭಜಂತ್ರಿ, ಅಭಿಷೇಕ ತಿಪರಾಶಿ, ವೈ.ವೈ ಕಾಳಪ್ಪನವರ, ಬಿ.ಎನ್. ಸಿದ್ದಕ್ಕನವರ, ಶರೀಪಸಾಬ ಬಾರಿಗಿಡದ, ಬಸವರಾಜ ಕುಂಟೋಜಿ, ಮೆಳೆಪ್ಪ ಗೊರವನಕೊಳ್ಳ, ವಿರುಪಾಕ್ಷಿ ಬೇವಿನಗಿಡದ, ಸುರೇಶ ಗೋವಪ್ಪನವರ, ಉಮೇಶ ದಿಡಗನ್ನವರ, ಬಸು ಜಾಲಗಾರ ಹಾಗೂ ಇತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next