Advertisement
ಗುರುವಾರ ಕೆಸರಗಟಿ ಗ್ರಾಮದ ಬಳಿ ನಿರ್ಮಿಸಿರುವ ವಾಜಪೇಯಿ ವಸತಿ ಯೋಜನೆ, ಆಶ್ರಯ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿರುವ 820 ಮನೆಗಳನ್ನು ಜನಾರ್ಪಣೆ ಮಾಡಿ ಅವರು ಮಾತನಾಡಿದರು. ಜಾತಿ ಧರ್ಮ ಅಂತ ಹೇಳಿ ಜೋತು ಬೀಳದೆ, ನೀವಿರುವ ಪ್ರದೇಶವನ್ನು ಸ್ವತ್ಛವಾಗಿಟ್ಟುಕೊಂಡು ಉತ್ತಮ ಪರಿಸರ ಕಾಪಾಡಿ.
Related Articles
Advertisement
ಶಾಲೆ ಮತ್ತು ಆಸ್ಪತ್ರೆಗಳನ್ನು ಆರಂಭಿಸಲು ಸೂಚನೆ ನೀಡಲಾಗಿದೆ. ಆದ್ದರಿಂದ ಜನರು ಇಲ್ಲಿ ವಾಸ ಮಾಡಿ ಸರಕಾರ ಪ್ರಯೋಜನ ಪಡೆಯಬೇಕು ಎಂದು ಹೇಳಿದರು. ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಇದೊಂದು ತುಂಬಾ ದೊಡ್ಡ ಯೋಜನೆ. ಒಂದೇ ಹಾಸಿಗೆಯಲ್ಲಿ 1324 ಮನೆಗಳು ನಿರ್ಮಾಣವಾಗಿವೆ. ರಾಜ್ಯದಲ್ಲಿ ಇಷ್ಟು ಮನೆಗಳು ಒಂದೆ ಕಡೆಯಲ್ಲಿ ಇಲ್ಲ.
ಆದ್ದರಿಂದ ಜನರು ಅದರಲ್ಲೂ ಬಡವರು ಯೋಜನೆ ಪ್ರಯೋಜನ ಪಡೆಯಬೇಕು ಎಂದರು. ಇಲ್ಲಿ ಆಸ್ಪತ್ರೆ, ಶಾಲೆ ಹಾಗೂ ವ್ಯಾಪಾರಿ ಮಳಿಗೆ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುವುದು. ಅಂಗನವಾಡಿ ನಿರ್ಮಾಣ ಮಾಡುವುದಲ್ಲದೆ, ನೀವುಗಳು ಇಲ್ಲಿ ಬಂದು ನಾಳೆಯಿಂದ ನೆಲೆಸುವುದೇ ಆದಲ್ಲಿ, ಬಸ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ, ರಾಜೀವಗಾಂಧಿ ಆವಾಸ್ ಯೋಜನೆ ಅಡಿ 1000 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಖಮರುಲ್ ಇಸ್ಲಾಂ ಮಾತನಾಡಿ, ಇವತ್ತು ಮನೆಗಳನ್ನು ವಿತರಿಸಬೇಕಾದರೆ ಇದರ ಹಿಂದೆ ನನ್ನ ಹಾಗೂ ಸಚಿವ ಪಾಟೀಲರ, ಖರ್ಗೆ ಅವರ ಶ್ರಮವಿದೆ ಎಂದರು. ಮೇಯರ್ ಶರಣ ಕುಮಾರ ಮೋದಿ, ತೊಗರಿ ಮಂಡಳಿ ಅಧ್ಯಕ್ಷ ಭಾಗಣ್ಣಗೌಡ ಪಾಟೀಲ ಸಂಕನೂರು, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಡಿಎ ಅಧ್ಯಕ್ಷ ಅಸಗರ್ ಚುಲ್‌ಬುಲ್, ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್, ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ, ಪಾಲಿಕೆ ಮುಖ್ಯ ಇಂಜಿನಿಯರ್ ಆರ್.ಪಿ. ಜಾಧವ, ವಿಜಯಲಕ್ಷ್ಮಿ ಇದ್ದರು.