Advertisement

ಅಧಿಕಾರಿಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ

06:07 PM Feb 20, 2021 | Nagendra Trasi |

ಕೊಲ್ಹಾರ: ಕಾಲುವೆಗಳ ಮುಖಾಂತರ ಕೆರೆಗೆ ನೀರು ಬಿಟ್ಟಿರುವುದನ್ನು ವಿನಾಕಾರಣ ಅಧಿ ಕಾರಿಗಳು ಮತ್ತು ನನ್ನ ಮೇಲೆ ಶಾಸಕ ಶಿವಾನಂದ ಪಾಟೀಲ ಆರೋಪಿಸಿ ವಿಧಾನಸಭೆಯಲ್ಲಿ ಪ್ರಶ್ನೆ ಎತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ ಹೇಳಿದರು.

Advertisement

ತಾಲೂಕಿನ ಮಸೂತಿ ಹಾಗೂ ಕುರಬರದಿನ್ನಿ ಗ್ರಾಮಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಆಸಂಗಿ ಕೆರೆಯನ್ನು ತುಂಬುವುದರಿಂದ ಸುತ್ತಲಿನ ಹತ್ತು ಗ್ರಾಮಗಳ ನಾಗರಿಕರಿಗೆ ಮತ್ತು ರೈತಾಪಿ ವರ್ಗದವರಿಗೆ ಅನುಕೂಲವಾಗುತ್ತದೆ ಎನ್ನುವ ಸದುದ್ದೇಶದಿಂದ ಕಾಲುವೆಯನ್ನು ಹರಿದು ರೈತರು ಕೆರೆಗೆ ನೀರು ಬಿಟ್ಟಿರುವ ಸಂದರ್ಭದಲ್ಲಿ ಖುದ್ದಾಗಿ ನಾನು ಸ್ಥಳದಲ್ಲಿಯೇ ಇದ್ದೆ. ಆದರೆ ಕೃಷ್ಣಾ ಭಾಗ್ಯ ಜಲನಿಗಮದ ಉನ್ನತ ಅಧಿ ಕಾರಿಗಳಾಗಲಿ ಕಿರಿಯ ಅ ಧಿಕಾರಿಗಳಾಗಲಿ ಸ್ಥಳದಲ್ಲಿ ಇರಲಿಲ್ಲ. ವಿನಾಕಾರಣ ಅಧಿಕಾರಿಗಳ ಮೇಲೆ ಗೂಬೆ ಕೂರಿಸುತ್ತಿರುವ ಶಾಸಕ ಶಿವಾನಂದ ಪಾಟೀಲರ ನಡೆ ಬೇಜವಾಬ್ದಾರಿಯಿಂದ ಕೂಡಿದೆ ಎಂದರು.

2020 ಮಾ.31ರ ಕಾಲುವೆಗಳಿಗೆ ನೀರು ಬಿಡುವ ಹಂಗಾಮು ಮುಗಿದ ನಂತರ ಮೇ ತಿಂಗಳಿನಲ್ಲಿ ಸರಕಾರ ಜಿಲ್ಲೆಯ 90 ಕೆರೆಗಳಿಗೆ ವಿಶೇಷವಾಗಿ ನೀರು ತುಂಬುವ ಯೋಜನೆ ಹಾಕಿಕೊಂಡಾಗ ಚಿಕ್ಕಆಸಂಗಿ ಕೆರಗೆ ನೀರು ಬಿಡದೇ ಇರುವುದರಿಂದ ತುಂಬಿರಲಿಲ್ಲ. ಇದನ್ನು ನನ್ನ ಗಮನಕ್ಕೆ ತಂದಾಗ ನೀರನ್ನು ಹರಿಯಬಿಟ್ಟು ಕೆರೆ ತುಂಬಲಾಗಿದೆ.

ನೀರು ಪ್ರತಿ ಗ್ರಾಮಗಳ ಎಲ್ಲ ರೈತಾಪಿ ವರ್ಗದವರಿಗೆ ಅವಶ್ಯಕ ಎನ್ನುವುದನ್ನು ಶಾಸಕ ಶಿವಾನಂದ ಪಾಟೀಲರು ಮನಗಾಣಬೇಕು. ಕ್ಷೇತ್ರದ ನಾಗರಿಕರ ಮತವನ್ನು ಪಡೆದ ಚುನಾಯಿತರಾದ ನಾವುಗಳು ಅವರಿಗೆ ಕಷ್ಟ ಬಂದಾಗ ಮುಂದೆ ನಿಂತು ಪರಿಹರಿಸಬೇಕು. ಯಾವುದೋ ಒಬ್ಬ ರೈತ ಅಡಚಣೆ ಮಾಡಿದರೆ ಅವನ ಮನವೊಲಿಸಿ ಸರ್ವರಿಗೂ ಅನುಕೂಲ ಕಲ್ಪಿಸುವ ಜವಾಬ್ದಾರಿ ಜನಪ್ರತಿನಿಧಿಗೆ ಇರುತ್ತದೆ.

ಅಂತಹುದರಲ್ಲಿ ಸೊಕ್ಕಿನ ಮಾತನ್ನು ಆಡದೇ ಖುದ್ದಾಗಿ ಸ್ಥಳ ಪರಿಶೀಲನೆ ಮಾಡದೇ ಸುಮಾರು ಒಂದು ವರ್ಷವಾದ ನಂತರ ಇಂತಹ ಪ್ರಶ್ನೆಗಳನ್ನು ವಿಧಾನಸಭೆಯಲ್ಲಿ ಎತ್ತುವದು ಶಾಸಕರ ಘನತೆಗೆ ಶೋಭೆ ತರುವಂತಹದಲ್ಲ ಎಂದರು. ರೋಣಿಹಾಳ, ಮಸೂತಿ, ಚಿಕ್ಕಆಸಂಗಿ, ಹಿರೇಆಸಂಗಿ, ಕುರಬರದಿನ್ನಿ, ಮಟ್ಟಿಹಾಳ, ನಾಗರದಿನ್ನಿ, ಇನ್ನಿತರ ಗ್ರಾಮಗಳ ರೈತರು ಶಾಸಕರಾದ ಶಿವಾನಂದ ಪಾಟೀಲರ ಬಳಿ ತೆರಳಿ ನೀರನ್ನು ಹರಿಸಲು ವಿನಂತಿಸಿದಾಗ ಶಾಸಕರು ಬೇಜವಾಬ್ದಾರಿಯಾಗಿ ಉತ್ತರ ನೀಡಿದ್ದಾರೆ.

Advertisement

ಈ ಮಾತನ್ನು ನನ್ನ ಬಳಿ ಬಂದು ರೈತರು ಹೇಳಿದಾಗ ಸಾಮಾಜಿಕ ಕ್ಷೇತ್ರದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು ಇಂಥ ಹೀಗೆ ಹೇಳಬಾರದು. ನಾನು ಕೂಡ ಒಬ್ಬ ಸಾಮಾನ್ಯ ರೈತನ ಮಗನಾಗಿ ರೈತರ ಕಷ್ಟ ಎಂಥಹದ್ದು ಎನ್ನುವುದನ್ನು ಅರಿತುಕೊಂಡು ಕಾಲುವೆಯನ್ನು ಹರಿದು ಕೆರೆ ತುಂಬಿಸಲಾಗಿದೆ ವಿನಃ ಇದರಲ್ಲಿ ಯಾರದೇ ಸ್ವಾರ್ಥವಿಲ್ಲ ಕೆರೆ ತುಂಬಿದ ನಂತರ ಕಾಲುವೆಯನ್ನು ಮೊದಲಿದ್ದ ಸ್ಥಿತಿಯಂತೆ ದುರಸ್ತಿ ಮಾಡಲಾಗಿದ್ದು, ಇದರಲ್ಲಿ ಸರಕಾರದ ಪಾತ್ರವಿಲ್ಲ. ರೈತರೇ ಎಲ್ಲ ವೆಚ್ಚ ಭರಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next