Advertisement

ಜಾತಿ ಗಣತಿ ಕೈ ಬಿಡುವಂತೆ ಒತ್ತಡ ಸರಿಯಲ್ಲ: ಕೆ.ಎಸ್‌.ಈಶ್ವರಪ್ಪ

07:54 PM Sep 12, 2021 | Team Udayavani |

ಬಳ್ಳಾರಿ: ಅಧಿಕಾರದಲ್ಲಿದ್ದಾಗ ಜಾತಿ ಸಮೀಕ್ಷೆಯನ್ನು ಹೊರ ಬಿಡದ ಕಾಂಗ್ರೆಸ್‌ನವರು ಇದೀಗ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದು ಸರಿಯಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ವಿಧಾನ ಪರಿಷತ್‌ ವಿಪಕ್ಷದ ನಾಯಕನಾಗಿದ್ದಾಗ ನಾನು ಸಹ ಜಾತಿ ಸಮೀಕ್ಷೆ ಬಗ್ಗೆ ಪ್ರಶ್ನಿಸಿದ್ದೆ. ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಚುನಾವಣೆಯೊಳಗೆ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಪ್ರಕಟಿಸಲಿಲ್ಲ. ಕೇಳಿದರೆ ಅಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರು ವರದಿ ನೀಡಿರಲಿಲ್ಲ ಎಂದು ಹಾರಿಕೆ ಉತ್ತರ ನೀಡಿದ್ದರು.

ಇದಾಗ ಬಳಿಕ 2018ರ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಪುನಃ ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಇತ್ತು. ಎಚ್‌.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದರು. ಸಿದ್ದರಾಮಯ್ಯ ಸಮನ್ವಯ ಸಮಿತಿ ಮುಖ್ಯಸ್ಥರಾಗಿದ್ದರು. ಆಗ ಏಕೆ ಜಾತಿ ಸಮೀಕ್ಷೆ ವರದಿ ಬಿಡುಗಡೆ ಮಾಡಲಿಲ್ಲ. ಅಂದು ಸಿಎಂ ಕೇಳದಿದ್ದರೆ ರಾಜೀನಾಮೆ ನೀಡಬೇಕಿತ್ತು ಅಥವಾ ಬೆಂಬಲವನ್ನು ವಾಪಸ್‌ ಪಡೆಯಬೇಕಿತ್ತು. ಕಾಂಗ್ರೆಸ್‌ನವರು ಮತಕ್ಕಾಗಿ ಕೇವಲ ಹಿಂದುಳಿದ ವರ್ಗ, ದಲಿತರ ಹೆಸರುಗಳನ್ನು ಪ್ರಸ್ತಾಪಿಸೋದು. ಆಗ ಮಾಡೋದು ಬಿಟ್ಟು, ಈಗ ಬಿಜೆಪಿಯನ್ನು ಹಿಂದುಳಿದ ವರ್ಗ, ದಲಿತರ ವಿರೋಧಿ ಯನ್ನಾಗಿ ಬಿಂಬಿಸುವುದು ಸರಿಯಲ್ಲ ಎಂದರು.

ಇದನ್ನೂ ಓದಿ:ಮೂಷಿಕನಿಗೆ ವಿಶೇಷ ಪ್ರಾರ್ಥನೆ| ನೇಕಾರರಿಂದ ಹಿಂದಿನಿಂದಲೂ ಇಲಿಗಳಿಗೆ ಪೂಜೆ |

ಜಾತಿ ಜನಗಣತಿಗೆ 180 ಕೋಟಿ ರೂ. ವೆಚ್ಚ ಮಾಡಿ ಸಿದ್ಧಪಡಿಸಿರುವ ವರದಿ ಮೇಲೆ ಸದಸ್ಯ ಕಾರ್ಯದರ್ಶಿಯ ಸಹಿಯೇ ಇಲ್ಲ ಎಂದು ಆಯೋಗದ ನೂತನ ಅಧ್ಯಕ್ಷ ಜಯಪ್ರಕಾಶ್‌ ಹೆಗಡೆ ಈಚೆಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನವರು ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡಿದ್ದ ಹಿಂದುಳಿದ ವರ್ಗ, ದಲಿತರಿಗೆ ಮೋಸ ಮಾಡಿದ್ದಾರೆ. ಸಹಿಯೇ ಇಲ್ಲದಿದ್ದರೆ ಆ ವರದಿಗೆ ಬೆಲೆ ಏನು? ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಶೇ.27ರಷ್ಟು ಹಿಂದುಳಿದ ವರ್ಗದವರು ಸಚಿವರಾಗಿದ್ದಾರೆ. 20 ಜನ ದಲಿತರು ಸಚಿವರಾಗಿದ್ದಾರೆ. ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ನೀಡುವ ಅ ಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿದ್ದಾರೆ ಎಂದರು.

Advertisement

ನರೇಗಾ ಬಾಕಿ 1076 ಕೋಟಿ ಬಿಡುಗಡೆ
ಬಳ್ಳಾರಿ: ನರೇಗಾದಡಿ ಬಾಕಿ ಇರುವ 959 ಕೋಟಿ ಹಾಗೂ ಹೆಚ್ಚುವರಿಯಾಗಿ 117 ಕೋಟಿ ಸೇರಿ 1076 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ ಸಿಂಗ್‌ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ನರೇಗಾ ಅಡಿಯಲ್ಲಿ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಮನವಿ ಪರಿಗಣಿಸಿ ಬಾಕಿ ಹಣ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷ ನಿಗದಿತ ಗುರಿಗಿಂತಲೂ ಹೆಚ್ಚು 15 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕ, ಪ್ರಸಕ್ತ ವರ್ಷ 20 ಕೋಟಿ ಮಾನವ ದಿನಗಳನ್ನು ಸೃಜನೆ ಮಾಡಲು ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಆಯೋಗದ ಹಿಂದಿನ ಅಧ್ಯಕ್ಷ ಕಾಂತರಾಜ್‌ ಅವರನ್ನು ನಾನೇ ಖುದ್ದು ಭೇಟಿಯಾಗಿದ್ದೆ. ವರದಿ ಸಿದ್ಧವಾಗಿತ್ತು. ಆದರೆ, ಅದನ್ನು ಹೊರಗೆ ಬಿಡಲಿಲ್ಲ. ವರದಿಯನ್ನು ಹೊಸದಾಗಿ ಸಮೀಕ್ಷೆ ಮಾಡಬೇಕಾ ಅಥವಾ ಸದಸ್ಯ ಕಾರ್ಯದರ್ಶಿಯ ಸಹಿ ಮಾಡಿಸಿಕೊಂಡು ಪುನಃ ಸರ್ಕಾರಕ್ಕೆ ಕೊಡಬೇಕಾ ಎಂಬುದನ್ನು ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next