Advertisement

ಎದ್ದು ನಿಂತು ರಾಷ್ಟ್ರಗೀತೆ ಹಾಡಿದ ಮಾತ್ರಕ್ಕೆ ದೇಶಪ್ರೇಮವಲ್ಲ

06:00 AM Oct 24, 2017 | Team Udayavani |

ಹೊಸದಿಲ್ಲಿ: ರಾಷ್ಟ್ರಗೀತೆ ಪ್ರಸಾರ ವಾದಾಗ ಎದ್ದು ನಿಲ್ಲುವುದು ರಾಷ್ಟ್ರಪ್ರೇಮವನ್ನು ಅಳೆಯುವ ಮಾನದಂಡ ವಲ್ಲ. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬೇಕೆ ಅಥವಾ ಬೇಡವೆ ಎಂಬುದನ್ನು ಕೇಂದ್ರ ಸರಕಾರ ತೀರ್ಮಾನಿಸಬೇಕು ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಅಲ್ಲದೆ ಈ ಸಂಬಂಧ ಕಾನೂನು ತಿದ್ದುಪಡಿ ಮಾಡಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸಲಹೆ ನೀಡಿದೆ. ಆದರೆ ಈ ಹಿಂದೆ ಕಡ್ಡಾಯ ವಾಗಿ ಥಿಯೇಟರ್‌ಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಮಾಡುವಂತೆ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಈ ಕಾನೂನು ತಿದ್ದುಪಡಿ ವೇಳೆ ಪರಿಗಣಿಸಬೇಕಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾ| ಎ.ಎಂ. ಖಾನ್ವಿಲ್ಕರ್‌ ಮತ್ತು ನ್ಯಾ| ಡಿ.ವೈ. ಚಂದ್ರಚೂಡ್‌ ಅವರನ್ನೊಳಗೊಂಡ ಪೀಠ ಹೇಳಿದೆ. ಅಲ್ಲದೆ ಅಗತ್ಯವಾದರೆ ಸುಪ್ರೀಂ ಕೋರ್ಟ್‌ ಆದೇಶವನ್ನೂ ತಿದ್ದುಪಡಿ ಮಾಡುವುದಾಗಿ ಕೋರ್ಟ್‌ ಹೇಳಿದೆ.

ರಾಷ್ಟ್ರಗೀತೆ ಕಡ್ಡಾಯವಾಗಿ “ಹಾಡಲೇಬೇಕು’ ಎನ್ನುವು ದರ ಬದಲಿಗೆ “ಹಾಡ ಬಹುದು’ ಎಂದು ತಿದ್ದುಪಡಿ ಮಾಡುವಂತೆಯೂ ನ್ಯಾಯಪೀಠ ಸಲಹೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next