Advertisement

ಪೊಲೀಸರನ್ನು ನಕಾರಾತ್ಮಕವಾಗಿ ಬಿಂಬಿಸುವುದು ಸರಿಯಲ್ಲ

12:40 PM Jul 23, 2018 | Team Udayavani |

ಮೈಸೂರು: ಸಿನಿಮಾಗಳಲ್ಲಿ ಪೊಲೀಸರನ್ನು ನಕಾರಾತ್ಮಕವಾಗಿ ಬಿಂಬಿಸುತ್ತಿರುವ ಪರಿಣಾಮ ಸಮಾಜದಲ್ಲಿ ಪೊಲೀಸರ ಇಮೇಜ್‌ ಹಾಳಾಗಿದೆ ಎಂದು ಮಹಿಳಾ ಪೊಲೀಸ್‌ ತರಬೇತಿ ಶಾಲೆಯ ಪ್ರಾಂಶುಪಾಲರಾದ ಡಾ.ಧರಣಿದೇವಿ ಮಾಲಗತ್ತಿ ವಿಷಾದ ವ್ಯಕ್ತಪಡಿಸಿದರು.

Advertisement

ಪ್ರಚೊÂàಮ ಪ್ರಕಾಶನ ಮತ್ತು ಹೇಮಗಂಗಾ ಕಾವ್ಯ ಬಳಗದ ವತಿಯಿಂದ ಭಾನುವಾರ ನಗರದ ಕರ್ನಾಟಕ ಪೊಲೀಸ್‌ ಅಕಾಡೆಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಹದೇವನಾಯಕ ಕೂಡ್ಲಾಪುರ ಅವರ “ಸಾಹಿತಿಗಳಂತರಾಳದಿಂದ ಪೊಲೀಸರು’ ಕೃತಿ ಬಿಡುಗಡೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸರು ಕ್ರೂರ ಭಕ್ಷಕರಲ್ಲ, ಅವರು ಸಹ ಸಮಾಜದ ಒಂದು ಭಾಗವಾಗಿದ್ದಾರೆ.

ಪೊಲೀಸರಲ್ಲೂ ಕವಿ, ಚಿತ್ರಕಲಾವಿದರು, ಸಾಹಿತಿ, ಸಂಗೀತಗಾರ, ಕ್ರೀಡಾಪಟುಗಳಿದ್ದು, ಅವರ ಪ್ರತಿಭೆಗೆ ವೇದಿಕೆ ಒದಗಿಸುವ ಕೆಲಸವನ್ನು ಇಲಾಖೆ ವತಿಯಿಂದ ಮಾಡಲಾಗುತ್ತಿದೆ. ಹೀಗಾಗಿ ಪೊಲೀಸರ ಪ್ರಪಂಚ ಬರಡಾಗಿಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಹೀಗಿದ್ದರೂ ಇಂದಿನ ಸಿನಿಮಾಗಳಲ್ಲಿ ಪೊಲೀಸರನ್ನು ಅತ್ಯಂತ ನಕಾರಾತ್ಮವಾಗಿ ಚಿತ್ರಿಸಲಾಗುತ್ತಿದ್ದು, ಇದರಿಂದ ಪೊಲೀಸರ ಇಮೇಜ್‌ ಹಾಳುಮಾಡಲಾಗುತ್ತಿದೆ. ಇದರಿಂದ ಸಮಾಜದಲ್ಲೂ ಪೊಲೀಸರ ಇಮೇಜ್‌ ಕೆಟ್ಟು ಹೋಗಿರುವುದರಿಂದ ನಮಗೆ ವಿದ್ಯುನ್ಮಾನ ಮಾಧ್ಯಮಗಳ ಮೇಲೆ ಆಕ್ಷೇಪವಿದೆ ಎಂದರು.

ಕೃತಿ ಬಿಡುಗಡೆ ಮಾಡಿದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಟಿ.ಸಿ.ಪೂರ್ಣಿಮಾ ಮಾತನಾಡಿ, ಪೊಲೀಸ್‌ ಎಂದೊಡನೆ ಅವರನ್ನು ಭಯದಿಂದ ನೋಡುತ್ತೇವೆ. ಆದರೆ ಪೊಲೀಸರಿಗೂ ಮನಸ್ಸು, ಭಾವನೆಗಳಿದ್ದು, ಕೆಲವೊಮ್ಮೆ ವೃತ್ತಿಯ ವಿಚಾರದಲ್ಲಿ ಒರಟಾಗಿ ವರ್ತಿಸುತ್ತಾರೆ. ಸ್ವಭಾವದಲ್ಲಿ ಕಲಾಮನಸ್ಸುಳ್ಳವರಾಗಿದ್ದು, ಹೀಗಾಗಿ ಪೊಲೀಸರ ವೃತ್ತಿಗಿಂತ ಅವರ ಪ್ರವೃತ್ತಿಯನ್ನು ಗುರುತಿಸಬೇಕಿದೆ.

Advertisement

ಸಮಾಜದಲ್ಲಿ ನಾವು ಮಾಡುವ ಸರಿ-ತಪ್ಪುಗಳ ಬಗ್ಗೆ ಎಚ್ಚರಿಸಿ ಜಾಗೃತಗೊಳಿಸುವ ಗುರುತರ ಜವಾಬ್ದಾರಿ ನಿರ್ವಹಿಸುತ್ತಾರೆ. ಅವರುಗಳನ್ನು ನಾವು ಗೌರವಿಸಬೇಕಿದ್ದು, ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಇರುವ ಋಣಾತ್ಮಕ ಅಂತರವನ್ನು ಕಡಿಮೆಗೊಳಿಸಲು ಇಂತಹ ಪುಸ್ತಕಗಳನ್ನು ಹೊರತರುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿ.ವಿ.ಪುರಂ ಠಾಣೆ ಎಎಸ್‌ಐ ಮಹದೇವನಾಯಕ ಕೂಡ್ಲಾಪುರ, ಲೇಖಕ ಡಾ.ಗುಬ್ಬಿಗೂಡು ರಮೇಶ್‌, ಸಂಸ್ಕೃತಿ ಚಿಂತಕ ಡಾ.ಜಯಪ್ಪ ಹೊನ್ನಾಳಿ, ಲೇಖಕಿ ಎ. ಹೇಮಗಂಗಾ, ಭೇರ್ಯ ರಾಮಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next