Advertisement

ಮಹಿಳೆಯರು ಕಾನೂನು ತಿಳಿಯುವುದು ಮುಖ್ಯ

07:31 AM Mar 09, 2019 | Team Udayavani |

ಮದ್ದೂರು: ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು 4ನೇ ಅಪರ ಸಿವಿಲ್‌ ನ್ಯಾಯಾಧೀಶೆ ತೃಪ್ತಿಧರಣಿ ಹೇಳಿದರು. 

Advertisement

ಪಟ್ಟಣದ ಆರೋಗ್ಯ ಇಲಾಖೆ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜ, ಕಾನೂನು ಮಹಿಳೆಯರಿಗೆ ಹಕ್ಕು, ಕಾನೂನು ರೂಪಿಸಿದೆ. ಅವುಗಳ ಸದ್ಬಳಕೆಗೆ ಮಹಿಳೆಯರು ಮುಂದಾಗಬೇಕು ಎಂದು ಹೇಳಿದರು. 

ಸಾಕ್ಷರತೆ ತುಂಬಾ ಅವಶ್ಯ: ಗ್ರಾಮೀಣ ಭಾಗದಲ್ಲಿ ಇಂದಿಗೂ ಮಹಿಳೆಯರ ಮೇಲೆ ಮೌಡ್ಯ, ಅನಕ್ಷರತೆ ಹಾಗೂ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಿವೆ. ಮಹಿಳೆಯರು ಇವುಗಳಿಂದ ಹೊರಬರಲು ಸಾಕ್ಷರತೆ ತುಂಬಾ ಅವಶ್ಯ. ಕಾನೂನು ಸೇವೆಗಳ ಪ್ರಾಧಿಕಾರ ಮಹಿಳೆಯರಿಗಾಗಿಯೇ ಉಚಿತ ಸೇವೆ ನೀಡುತ್ತಿದೆ. ಮಹಿಳೆಯರು ಅವುಗಳನ್ನು ಬಳಕೆ ಮಾಡಿಕೊಳ್ಳುವುದು ಮುಖ್ಯ. ಇದಕ್ಕೆ ಮಹಿಳೆಯರ ಮನಸ್ಥಿತಿಯೂ ಮುಖ್ಯ. ಸ್ವಯಂ ಆಲೋಚನೆಯಿಂದ ಹಕ್ಕುಗಳನ್ನು ಪಡೆಯಬೇಕು ಎಂದು ಹೇಳಿದರು. 

ಸಾಧನೆಗೆ ಸಹಕರಿಸಿ: ನ್ಯಾಯಾಧೀಶ ಶಿವಕುಮಾರ್‌ ಮಾತನಾಡಿ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಇಂದು ತಮ್ಮದೇ ಆದ ಕೌಶಲ್ಯಗಳ ಮೂಲಕ ಸಾಧನೆ ಮಾಡಿ ಬೆಳಕಿಗೆ ಬಂದಿದ್ದಾರೆ. ಮಹಿಳೆಯರ ಸಾಧನೆಗೆ ಮೊದಲು ಕುಟುಂಬಗಳು ಸಹಕರಿಸಬೇಕು. ಸಮಾಜವೂ ಪ್ರೋತ್ಸಾಹಿಸಬೇಕು. ಸರ್ಕಾರಗಳು ಮಹಿಳೆಯರ ಶ್ರಮವನ್ನು ಗುರುತಿಸಬೇಕು. ಆಗ ಮಹಿಳೆ ನಿರ್ಭಯವಾಗಿ, ಆತ್ಮಸ್ಥೈರ್ಯದಿಂದ ಯಾವುದೇ ಕೆಲಸಕ್ಕೂ ಕೈಹಾಕಲು ಸಾಧ್ಯ.

ಇದಕ್ಕೆ ಮಹಿಳೆಯರು ದಿಟ್ಟ ಮನಸ್ಸಿನಿಂದ ಮುಂದಾಗಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಪಿ.ಎಂ.ಬಾಲಸುಬ್ರಹ್ಮಣ್ಯ, ಸಿಡಿಪಿಒ ಚೇತನ್‌ಕುಮಾರ್‌, ತಾಲೂಕು ವೈದ್ಯಾಧಿಕಾರಿ   ಡಾ.ಎಂ.ಎನ್‌.ಆಶಾಲತಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಸತ್ಯಪ್ಪ, ಉಪಾಧ್ಯಕ್ಷ ಕೆಂಪೇಗೌಡ, ಕಾರ್ಯದರ್ಶಿ ಶಿವಣ್ಣ, ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಾನಂದ ಇತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next