Advertisement

ವಚನ ಅರಿವು ಮೂಡಿಸಿದ್ದು ಹಳಕಟ್ಟಿ

09:56 AM Jul 03, 2022 | Team Udayavani |

ಕಲಬುರಗಿ: ಡಾ| ಫ.ಗು. ಹಳಕಟ್ಟಿ ಹರಿದು- ಹಂಚಿಹೋಗಿದ್ದ ವಚನಗಳನ್ನು ಮೂಲ ಸೌಕರ್ಯ ಇಲ್ಲದೇ ಮನೆ, ಮಠಗಳಿಗೆ ಹೋಗಿ ವಚನಗಳನ್ನು ಸಂಗ್ರಹಣೆ ಮಾಡಿದವರು. ಅವರ ಶ್ರಮದ ಫಲವಾಗಿಯೇ ವಚನಗಳನ್ನು ತಿಳಿದುಕೊಳ್ಳಲು ಸಹಾಯವಾಗಿದೆ ಎಂದು ಮಾಜಿ ಮಹಾಪೌರ ಶರಣ ಕುಮಾರ ಮೋದಿ ಹೇಳಿದರು.

Advertisement

ಶನಿವಾರ ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್‌, ಡಾ| ಫ.ಗು. ಹಳಕಟ್ಟಿ ಜಯಂತ್ಯುತ್ಸವ ಸಮಿತಿ ಸಂಯುಕ್ರಾಶ್ರಯದಲ್ಲಿ ಆಯೋಜಿಸಿದ್ದ ಡಾ| ಫ.ಗು. ಹಳಕಟ್ಟಿ ಜಯಂತ್ಯುತ್ಸವ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಡಾ| ಫ.ಗು. ಹಳಕಟ್ಟಿ ಬಸವಣ್ಣನವರ ವಚನಗಳನ್ನು ಒಂದುಗೂಡಿಸಿ ನಮ್ಮೆಲ್ಲರಿಗೂ ವಚನ ಸಾಹಿತ್ಯದ ಅರಿವು ಮೂಡಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ| ಫ.ಗು. ಹಳಕಟ್ಟಿ ಜಯಂತ್ಯುತ್ಸವ ಸಮಿತಿ ಜಿಲ್ಲಾಧ್ಯಕ್ಷ ಶಿವಲಿಂಗಪ್ಪ ಈರಣಪ್ಪಾ ಅಷ್ಟಗಿ ಮಾತನಾಡಿ, ಡಾ| ಫ.ಗು. ಹಳಕಟ್ಟಿ ಶರಣರ ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ ಜನರಿಗೆಲ್ಲ ಅದರ ಮಹತ್ವ ತಿಳಿಯುವಂತೆ ಪ್ರಚಾರಗೊಳಿಸಿದ ಫಲವಾಗಿ ವಚನ ಸಾಹಿತ್ಯ ಜನರಿಗೆ ತಲುಪಲು ಸಾಧ್ಯವಾಯಿತು ಎಂದು ಹೇಳಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ್‌ ಮಾತನಾಡಿ, ಮಹಿಳೆಯರ ಅಭಿವೃದ್ಧಿಗಾಗಿ ಅನೇಕ ಸಂಘ ಸಂಸ್ಥೆಗಳು ಹಾಗೂ ಶಾಲೆ- ಕಾಲೇಜುಗಳನ್ನು ನಿರ್ಮಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಜಾಗತಿಕ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವ ಮಾತನಾಡಿದರು.

ಗುಲಬರ್ಗಾ ವಿಶ್ವ ವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ದಂಡೆ ಡಾ| ಫ.ಗು. ಹಳಕಟ್ಟಿ ಜೀವನದ ಕುರಿತು ಉಪನ್ಯಾಸ ನೀಡಿದರು.

Advertisement

ಜಿಲ್ಲಾಡಳಿತ ಚುನಾವಣೆಯ ಶಾಖೆ ತಹಶೀಲ್ದಾರ್‌ ಮಹಾಂತೇಶ ಮುಡಬಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯ ನಿರ್ದೇಶಕ ದತ್ತಪ್ಪ ಸಾಗನೂರ, ಸಮಾಜದ ಗಣ್ಯ ವ್ಯಕ್ತಿಗಳು ಡಾ| ಫ.ಗು.ಹಳಕಟ್ಟಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಹಟಗಾರ ಸಮಾಜದ ಗೌರವಾಧ್ಯಕ್ಷ ಸೂರ್ಯಕಾಂತ ಸೊನ್ನದ, ಉಪಾಧ್ಯಕ್ಷ ಸಂಗಮನಾಥ ರೇವತಗಾಂವ, ಪ್ರಧಾನ ಕಾರ್ಯದರ್ಶಿ, ವಿನೋದಕುಮಾರ ಶ. ಜೆನವೇರಿ, ಖಜಾಂಚಿ ರಾಜು ಕೋಷ್ಠಿ ಹಾಗೂ ಸಮಾಜದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next