ವಿಜಯಪುರ: ಸಮಾಜದ ಬೆಳವಣಿಗೆಗೆ ಸಮುದಾಯದ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಆರೋಗ್ಯ, ಸಾಮಾಜಿಕ, ಆರ್ಥಿಕವಾಗಿ ಬೆಳಕಿಗೆ ತರುವಲ್ಲಿ ಸಮುದಾಯಗಳ ಪಾತ್ರ ಅತ್ಯಂತ ಮಹತ್ತರವಾಗಿದೆ ಎಂದು ಮೇಲ್ಮನೆ ಮಾಜಿ ಶಾಸಕ ಜಿ.ಎಸ್. ನ್ಯಾಮಗೌಡ ಅಭಿಪ್ರಾಯಪಟ್ಟರು. ನಗರದ ವನಶ್ರೀ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಗಾಣಿಗ ಸಮಾಜದ 11ನೇ ವಾರ್ಷಿಕೋತ್ಸವದ ಅಂಗವಾಗಿ ಎಸ್ಸೆಸ್ಸೆಲ್ಸಿ , ಪಿಯುಸಿಯಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಾಧಕರ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗಾಣಿಗ ಸಮಾಜ ಮೊದಲು ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳೆಯಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸಮಾಜದ ಏಳ್ಗೆ ಜೊತೆಗೆ ಮುಖ್ಯವಾಹಿನಿಗೆ ತರುವಲ್ಲಿ ಸಮಾಜದ ಜವಾಬ್ದಾರಿ ಅತ್ಯಂತ ಮಹತ್ತರವಾಗಿದೆ ಎಂದರು. ಪ್ರತಿಯೊಬ್ಬರು ಶೈಕ್ಷಣಿಕ ಸಾಧನೆ ಜೊತೆಗೆ ದೇಶಕ್ಕೆ
ಅನ್ನ ನೀಡುವ ಕೃಷಿ ಉದ್ಯೋಗದಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಸಮಾಜ ಪ್ರತಿ ವ್ಯಕ್ತಿಯೂ ನಮ್ಮ ಸಮಾಜವನ್ನು ಪ್ರೀತಿಸುವುದರ ಮೂಲಕ ಇತರೆ
ಸಮಾಜಗಳನ್ನು ಆದರದಿಂದ ಗೌರವಿಸಬೇಕಾದದ್ದು ನಮ್ಮ ಸಮಾಜದ ಧ್ಯೇಯವಾಗಬೇಕು. ಅಂದರೆ ಮಾತ್ರ ಇತರ ಜಾತಿಗಳ ಬೆಂಬಲ ಎಲ್ಲ ಜಾತಿಗಳಿಗೆ
ಅವಶ್ಯಕವಾಗಿದೆ ಎಂದರು.
ಗದಗ ಜಿಲ್ಲೆಯ ಹಿರಿಯ ಸಾಹಿತಿ ವೀರನಗೌಡ ಮರಿಗೌಡರ ಮಾತನಾಡಿ, ಶ್ರೇಷ್ಠ ಶ್ರಮ ಜೀವಿಗಳನ್ನು ಹೊಂದಿರುವ ಗಾಣಿಗರು ಸಮಾಜದಲ್ಲಿ ಹಲವಾರು ಜಾತಿ ವರ್ಗಗಳು ತಮ್ಮ ಜಾತಿ ಬಗ್ಗೆ ಪ್ರೀತಿ ಇರಿಸಿಕೊಂಡಿದ್ದಾರೆ. ಜೊತೆಗೆ ಇತರೆ ಸಮುದಾಯಗಳ ಜನರೊಂದಿಗೆ ಸೌಹಾರ್ದಯುತವಾಗಿ ಬೆರೆಯುವ ಸೌಜನ್ಯದ ಗುಣ ಹೊಂದಿದೆ. ಗಾಣಿಗ ಸಮಾಜ ಪುರಾತನ ಕಾಲದಿಂದಲೂ ತನ್ನದೇ ವಿಶಿಷ್ಟ ಇತಿಹಾಸ ಹೊಂದಿದೆ. ಒಂದೊಂದು ಜಾತಿಗಳು, ವರ್ಗಗಳು ತಮ್ಮ ಕಾಯಕ ವೃತ್ತಿಯಿಂದ ಬೆಳೆಕಿಗೆ ಬಂದಿವೆ. ಗಾಣ ಹಾಕಿಕೊಂಡು ವೃತ್ತಿಯಿಂದ ಮುಂದೆ ಬಂದವರು. ಆದ್ದರಿಂದ ನಮ್ಮ ಸಮುದಾಯವನ್ನು ಆರ್ಥಿಕವಾಗಿ ಬೆಳೆಯಬೇಕಾದರೆ ಅನ್ಯ ಜಾತಿಯ ಸಹಕಾರ ಬೆಂಬಲ ಅಗತ್ಯವಾಗಿದೆ ಎಂದರು.
ಬಿಜೆಪಿ ಯುವ ಘಟಕದ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿ, ಸಮಾಜ ಸಮುದಾಯ ಕಟ್ಟುವಲ್ಲಿ ಎಲ್ಲರಲ್ಲಿ ಒಗ್ಗಟ್ಟತನ ಕ್ರಿಯಾಶೀಲತೆ, ಸರಳತೆ, ಮಾನವೀಯತೆ ಅತಿ ಅವಶ್ಯ. ಸಮಾಜವನ್ನು ನಾವು ಗೌರವಿಸಿದರೆ ಆ ಸಮುದಾಯ ನಮ್ಮನ್ನು ಗೌರವಿಸುತ್ತದೆ. ಆರ್ಥಿಕ, ಶೈಕ್ಷಣಿಕ, ಸಮಾಜಿಕವಾಗಿ ಬೆಳೆಯಲು ಎಲ್ಲರಲ್ಲಿ ಪರಸ್ಪರ ಹೊಂದಾಣಿಕೆ ಮುಖ್ಯ. ಸಮಾಜದ ಬಡ ಪ್ರತಿಭಾವಂತರ ಆರ್ಥಿಕ ನೆರವಿಗಾಗಿ 1.11 ಲಕ್ಷ ರೂ. ದೇಣಿಗೆ ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಜಾತಿ ವ್ಯವಸ್ಥೆಯಿಂದ ದೇಶದ ದುರವ್ಯವಸ್ಥೆ ಆವರಿಸಿದ್ದು, ಸಾಮಾಜಿಕ ವ್ಯವಸ್ಥೆ ಕಲುಷಿತಗೊಂಡಿದೆ. ಆದ್ದರಿಂದ ಅತಿಯಾದ ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಜ್ಞಾನ ಹೆಚ್ಚುತ್ತದೆ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಬೇಕು ಎಂದರು. ಗಾಣಿಗ ಸಮಾಜದ ಪೀಠಾಧ್ಯಕ್ಷ ಡಾ| ಜಯಬಸವಕುಮಾರ ಶ್ರೀ, ಕೊಲ್ಹಾರದ ಕಲ್ಲಿನಾಥ ಶ್ರೀ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕರಾದ ರಮೇಶ ಭೂಸನೂರ, ಬಿ.ಜಿ. ಪಾಟೀಲ
(ಹಲಸಂಗಿ), ಅಖೀಲ ಭಾರತ ಗಾಣಿಗ ಸಮಾಜ ಸಂಘದ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು.
ಮಲಕಪ್ಪ ಮೊಸಲಗಿ, ನಿಂಗರಾಜ ಬಗಲಿ, ಸಿದ್ದಲಿಂಗ ಹಂಜಗಿ, ಮಲ್ಲಣ್ಣ ಮನಗೂಳಿ, ಎಂ.ಎನ್. ಬಿಸ್ಟಗೊಂಡ, ಪರಮಾನಂದ ಯಾಳವಾರ, ಪ್ರಕಾಶ ಬಗಲಿ, ಬಂಡೆಪ್ಪ ತೇಲಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮಹಾದೇವ ಆಹೇರಿ, ಬಿ.ಪಿ. ಸರನಾಡಗೌಡ, ಆರ್.ಎನ್. ಸಜ್ಜನ, ಎಸ್ .ಜಿ.ಪಾಟೀಲ, ಅಶೋಕ ನ್ಯಾಮಗೌಡ ಇದ್ದರು. ಡಾ| ಮಲ್ಲಿಕಾರ್ಜುನ ಮೇತ್ರಿ ಸ್ವಾಗತಿಸಿದರು. ಎಸ್.ಬಿ. ಪುಟ್ಟಿ ನಿರೂಪಿಸಿದರು. ಎಂ.ಡಿ. ಹೆಬ್ಬಿ ವಂದಿಸಿದರು.