Advertisement
ಸೋಮವಾರ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣಮಹಾಸಭಾ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ವಿಪ್ರ ಸಹಕಾರಿ ನಿರ್ದೇಶಕರ ಹಾಗೂ ಪ್ರಮುಖರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ಮಹನೀಯರ ತ್ಯಾಗದಿಂದ ಈ ರಾಜ್ಯರಚನೆಯಾಗಿದೆ. ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಕರ್ನಾಟಕ ರಾಜ್ಯ ಒಗ್ಗೂಡಿಸಿದ ಶ್ರೇಯಸ್ಸು ಸಲ್ಲಬೇಕು ಎಂದರು.
Related Articles
Advertisement
ದುರಂತವೆಂದರೆ ಸಹಕಾರಿ ಕ್ಷೇತ್ರದಲ್ಲಿರುವಷ್ಟು ವ್ಯಾಜ್ಯಗಳು ಬೇರೆ ಯಾವ ಕ್ಷೇತ್ರದಲ್ಲೂ ಇಲ್ಲ. ರಾಜಕೀಯ ಪ್ರವೇಶದ ಹಿಂದೆ ಸಹಕಾರಿ ಕ್ಷೇತ್ರವನ್ನುನಿಯಂತ್ರಿಸುವ ಉದ್ದೇಶ ಅಡಗಿದೆ ಎಂಬುದು ಸತ್ಯ. ಆದರೆ, ಕೆಲವೊಂದು ಬದಲಾವಣೆ ಸಹಕಾರಿ ಕ್ಷೇತ್ರದಲ್ಲೂ ಅಗತ್ಯವಿದೆ. ಸಾರ್ವಜನಿಕರಿಗೆಬಹುಉಪಯೋಗವಾಗುವ ಸಹಕಾರಿ ಕ್ಷೇತ್ರವನ್ನುಬೆಳೆಸುವುದು, ಅಭಿವೃದ್ಧಿಪಡಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಹೊಯ್ಸಳ ಕರ್ನಾಟಕ ಸೌಹಾರ್ದ ಸಹಕಾರಿ ಅಧ್ಯಕ್ಷ ಎಂ. ಶಂಕರ್ ಮಾತನಾಡಿ, ಜಿಲ್ಲಾ ಸಹಕಾರ ಸಂಸ್ಥೆಗಳು ಅನೇಕ ಸಮಾಜಮುಖಿ ಕಾರ್ಯಗಳನ್ನುಮಾಡುತ್ತಿವೆ. ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬ್ರಾಹ್ಮಣ ಸಮಾಜ ಮಹತ್ತರ ಕೊಡುಗೆ ನೀಡಿದೆ. ಜಿಲ್ಲೆಯಲ್ಲಿ 650 ಕ್ಕೂ ಹೆಚ್ಚು ವಿಪ್ರ ಸಹಕಾರಿಗಳಿದ್ದಾರೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಜಿಲ್ಲಾ ಸಹಕಾರಿ ಕ್ಷೇತ್ರಗಳಿಂದ ಸಹಾಯವಾಗಿದೆ. 8 ಸಹಕಾರಿ ಸಂಸ್ಥೆಗಳು ವಿಪ್ರರ ನೇತೃತ್ವದಲ್ಲಿ 350 ಕೋಟಿ ರೂ.ಗೂ ಹೆಚ್ಚು ವಾರ್ಷಿಕ ವಹಿವಾಟು ನಡೆಸುತ್ತಿವೆ. ಇದೊಂದು ಇತಿಹಾಸ.
ಸಮಾಜಕ್ಕೆ ವಿಪ್ರ ಸಹಕಾರಿಗಳ ಕೊಡುಗೆ ಏನು? ಮತ್ತು ಅವರ ಐಡೆಂಟಿಟಿ ಸಮಾಜಕ್ಕೆ ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶವಿಲ್ಲ ಎಂದರು.
ಮುಖ್ಯ ಅತಿಥಿಗಳಾಗಿ ಸಹಕಾರಿ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ್ ವೈದ್ಯ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೋಡಿ ಪದ್ಮನಾಭ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ ಭಾಗವತ್, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿನಿಗಮದ ನಿಗಮದ ನಿರ್ದೇಶಕರಾದ ಎ.ಆರ್.ಪ್ರಸನ್ನಕುಮಾರ್ ಸೇರಿದಂತೆ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ವಿಪ್ರಸಮಾಜದ ಪ್ರಮುಖರು ಉಪಸ್ಥಿತಿರಿದ್ದರು.