Advertisement

ಗಿಡ ಮರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

08:15 PM Nov 08, 2020 | Suhan S |

ಗದಗ: ಗಿಡಮರಗಳನ್ನು ಬೆಳೆಸಿ ಸಂರಕ್ಷಿಸುವ ಕಾರ್ಯ ಪ್ರತಿಯೊಬ್ಬರ ಕರ್ತವ್ಯ. ಭಾಷಣ, ಘೋಷಣೆಗಿಂತ ವಾಸ್ತವವಾಗಿ ಕಾರ್ಯೋನ್ಮುಖರಾಗಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾ ಧೀಶ ರಾಜಶೇಖರ ವಿ.ಪಾಟೀಲ ಹೇಳಿದರು.

Advertisement

ಸಮೀಪದ ಬಿಂಕದಕಟ್ಟಿಯ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಗದಗ-ಬೆಟಗೇರಿ ಲಯನ್ಸ್‌ ಕ್ಲಬ್‌ ಏರ್ಪಡಿಸಿದ್ದ 250 ಸಸಿಗಳನ್ನು ದತ್ತು ಪಡೆಯುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾಜಿಕ ಸೇವಾ ಸಂಘಟನೆಯೊಂದು ತನ್ನೆಲ್ಲ ಸದಸ್ಯರನ್ನು ಇಂತಹ ಸಾಮಾಜಿಕ ಕಾರ್ಯದಲ್ಲಿತೊಡಗಿಸಿರುವುದು ಶ್ಲಾಘನೀಯ. ಪರಿಸರ ಸಂರಕ್ಷಣೆ, ಅರಣ್ಯ ಸಂಪತ್ತು ಉಳಿಸಿ, ಕಾಡು ಬೆಳಸಿ ನಾಡು ಉಳಿಸಿ ಎಂಬುದು ಕೇವಲ ಘೋಷಣೆಗೆ ಸ್ಥಿಮಿತವಾಗಬಾರದು. ಹಸಿರೀಕರಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕೆಂದು 10 ಸಸಿಗಳನ್ನು ದತ್ತು ಸ್ವೀಕರಿಸಿ, ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಹಣ ಪಾವತಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ ಮಾತನಾಡಿ, ಅರಣ್ಯ ಸಂರಕ್ಷಣೆ, ಪರಿಸರ ಉಳಿವಿಗಾಗಿ ಜನ ಸಮುದಾಯದಲ್ಲಿ ಜಾಗೃತಿ ಮೂಡುತ್ತಿದೆ. ಮಾಜಿ ಸಚಿವ ಎಸ್‌. ಎಸ್‌.ಪಾಟೀಲರು ವೈಯಕ್ತಿಕವಾಗಿ 100ಸಸಿಗಳನ್ನು ಮರಗಳನ್ನಾಗಿಸಲು ದತ್ತು ಪಡೆದಿದ್ದಾರೆ. ಅವರ ಬಳಿಕ ಸಾಮಾಜಿಕ ಸಂಸ್ಥೆಯೊಂದು ಬೃಹತ್‌ ಪ್ರಮಾಣದ 250 ಮರಗಳನ್ನಾಗಿಸಲು ದತ್ತು ಸ್ವೀಕಾರಕ್ಕೆ ಮುಂದಾಗಿರುವುದು ಇದೇ ಮೊದಲು ಎಂದರು.

ಜಿಲ್ಲಾ ಚೇಂಬರ್‌ ಆಫ್‌ ಕಾಮರ್ಸ್ ಅಧ್ಯಕ್ಷ ಆನಂದ ಪೋತ್ನೀಸ್‌ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯತೀಶ್‌ ಎನ್‌., ಕ್ಲಬ್‌ಪ್ರಾದೇಶಿಕ ಚೇರ್‌ ಪರ್ಸನ್‌ ಶಿವಕುಮಾರ ಪಾಟೀಲ ಅವರು ಲಯನ್ಸ್‌ ವನ ಬೋರ್ಡ್‌ ಅನಾವರಣಗೊಳಿಸಿದರು. ಸಮಾರಂಭದಲ್ಲಿ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಅಶ್ವಥ್‌ ಸುಲಾಖೆ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್‌ ಕಾರ್ಯದರ್ಶಿ ರಮೇಶ ಶಿಗ್ಲಿ, ರಘು ಮೇಹರವಾಡೆ, ಖಜಾಂಚಿ ಅರುಣ ಮಿಸ್ಕಿನ್‌, ಎಂ.ಬಿ.ಸಿಕ್ಕೇದೇಸಾಯಿ, ಡಾ| ಜೆ.ಸಿ.ಶಿರೋಳ, ಪ್ರಕಾಶ ರಾಯ್ಕರ್‌, ಅರುಣ ವಾದೋನೆ, ಶ್ರೀನಿವಾಸ ಬಾಕಳೆ, ಎಂ.ಕೆ.ಕುಷ್ಟಗಿ, ಪ್ರಕಾಶ ಅಂಗಡಿ, ಲಯನೆಸ್‌ ಕ್ಲಬ್‌ ಅಧ್ಯಕ್ಷೆ ವೀಣಾ ಸುಲಾಖೆ, ಕಾರ್ಯದರ್ಶಿ ಸಾವಿತ್ರಿಬಾಯಿ ಶಿಗ್ಲಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next