Advertisement
ಜಿಪಂ ಸಭಾಂಗಣದಲ್ಲಿ ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ “ಗ್ರಾಮ ಪಂಚಾಯಿತಿ ಹಂತದಲ್ಲಿ ನೀರಿನ ಆಯವ್ಯಯ ಸಿದ್ಧಪಡಿಸುವಿಕೆ ಮತ್ತು ಬದಲಾಗುವ ಹವಾಮಾನಕ್ಕೆ ಹೊಂದಿಕೊಳ್ಳುವಿಕೆ’ ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ವಾಟರ್ ಸೆಕ್ಯೂರಿಟಿ ಪ್ಲ್ಯಾನ್: ಜಲಾಮೃತ ಯೋಜನೆ ನಿರ್ದೇಶಕ ಬಿ.ನಿಜಲಿಂಗಪ್ಪ ಮಾತನಾಡಿ, ನೀರಿನ ಆಯವ್ಯಯ ಸಿದ್ಧಪಡಿಸಲು ಗ್ರಾಮ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಪೋರ್ಟಲ್ ಹಾಗೂ ಕ್ಷೇತ್ರ ಭೇಟಿ ಮಾಡಿ ನೀರಿನ ಲಭ್ಯತೆ ಪ್ರಮಾಣ ಹಾಗೂ ನೀರಿನ ಬೇಡಿಕೆ ಬಗ್ಗೆ ಮಾಹಿತಿ ಸಂಗ್ರಹಿಸಿ ಇದರ ಆಧಾರದ ಮೇಲೆ ಮಳೆ ನೀರು ಕೊಯ್ಲು, ಮಣ್ಣಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಮಾರ್ಗೋಪಾಯಗಳ ಮೂಲಕ ವಾಟರ್ ಸೆಕ್ಯೂರಿಟಿ ಪ್ಲ್ಯಾನ್ ಮಾಡಲಾಗುವುದು ಎಂದರು. ಅಟಲ್ ಭೂಜಲ್, ಜಲಾಮೃತ ಹಾಗೂ ಎಂಜಿ ನರೇಗಾ ಯೋಜನೆ ಸೇರಿದರೆ ನೀರಿನ ಆಯವ್ಯಯ ಸಿದ್ಧಪಡಿಸಲು ಅನುವಾಗುತ್ತದೆ ಎಂದು ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ನೀರಿನ ಉಳಿತಾಯ ಮಾಡಿ ಸಮೃದ್ಧಿಯಾಗಿ ಇರುವಂತೆ ನೋಡಿಕೊಂಡಲ್ಲಿ ಬರ ಎದುರಿಸುವ ಪರಿಸ್ಥಿತಿ ಬರುವುದಿಲ್ಲ. ಹೊಸದಾಗಿ ಬೋರ್‌ವೆಲ್ ತೆಗೆಯುವ ಬದಲು ಇರುವ ಬೋರ್‌ವೆಲ್‌ಗಳ ಜಲ ಮರುಪೂರಣ ಮಾಡುವ ಕೆಲಸ ಆಗಬೇಕು. ಇತ್ತೀಚಿನ ಜೀವನಶೈಲಿಯಿಂದ ನೀರು ಹೆಚ್ಚು ಪೋಲಾಗುತ್ತಿರುವುದನ್ನು ತಪ್ಪಿಸಬೇಕು. ಜಲಾಮೃತ ಯೋಜನೆ ಅಭಿವೃದ್ಧಿಗೆ ಪ್ರತಿಯೊಬ್ಬರ ಕೊಡುಗೆ ಅಗತ್ಯ. ನೀರಿನ ಸಮಸ್ಯೆ ಕಡಿಮೆಯಾಗಲು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಜಲಾಮೃತ ಯೋಜನೆಯ ಜಲಾನಯನ ಸಂಯೋಜಕ ಡಾ.ಎನ್.ಕೆ. ರಾಜೇಶ್‌ಕುಮಾರ್, ಸಂಯೋಜಕ ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಟಿ.ಕೆ. ರಮೇಶ್, ದಿಶಾ ಸಮಿತಿಯ ಸದಸ್ಯ ಕುಂದರನಹಳ್ಳಿ ರಮೇಶ್, ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಆಯ್ದ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲೆಯ ನೀರಿನ ಮೂಲ ಮಳೆಯಾಗಿದೆ. ಮಳೆ ನೀರು ಪರಿಣಾಮಕಾರಿ ಹಿಡಿದಿಟ್ಟುಕೊಂಡು ಬಳಸಬೇಕು. ಬಿದ್ದ ಮಳೆ ನೀರು ಪಕ್ಕದ ಜಮೀನಿಗೂ ಬಿಡದೇ ಹಿಡಿದಿಟ್ಟುಕೊಳ್ಳಬೇಕು. ನೀರು ಮೇಲ್ಮೆ„ಯಲ್ಲಿ ಉಳಿತಾಯ ಮಾಡಿದರೆ ಅದು ದಿನಕಳೆದಂತೆ ಕಡಿಮೆಯಾಗುತ್ತದೆ. ಆದರೆ ಅಂತರ್ಜಲದಲ್ಲಿ ಉಳಿತಾಯ ಮಾಡಿದರೆ ಸಮಸ್ಯೆಯಾಗುವುದಿಲ್ಲ ಆದ್ದರಿಂದ ನೀರು ಅಂತರ್ಜಲಕ್ಕೆ ಕಳಿಸಬೇಕು. -ಕಾಂತರಾಜ್, ಅಟಲ್ ಭೂಜಲ ಯೋಜನೆ ನಿರ್ದೇಶಕ