Advertisement
ಪಕ್ಷ ವಿಭಜನೆಗೊಂಡಿರುವಾಗ ಉದ್ಧವ್ ಠಾಕ್ರೆ ಅವಾಸ್ತವಿಕ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಮಹಾರಾಷ್ಟ್ರ ವಿಧಾನ ಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಸಿಎಂ ಏಕನಾಥ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಬುಧವಾರ ಘೋಷಣೆ ಮಾಡಿರುವುದು ಉದ್ಧವ್ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆಯಾಗಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ “ಇಂಡಿಯಾ’ ಒಕ್ಕೂಟದ ಸಭೆಯಲ್ಲಿ ಎನ್‌ಸಿಪಿ ಕೂಡ ಭಾಗವಹಿಸಿತ್ತು. ಆದರೆ ಈ ವೇಳೆ ಪಕ್ಷವು ಸ್ಥಾನ ಹಂಚಿಕೆ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ಆದರೆ ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ್ ಅಘಾಡಿ ಅನ್ನು ಐ.ಎನ್.ಡಿ.ಐ.ಎ. ಒಕ್ಕೂಟಕ್ಕೆ ಸೇರಿ ಸುವಂತೆ ಎನ್‌ಸಿಪಿ ಮನವಿ ಮಾಡಿದೆ. ಸೀಟು ಹಂಚಿಕೆ ಬಗ್ಗೆ ಮುಂದಿನ ಸಭೆಗಳಲ್ಲಿ ನಿರ್ಧರಿಸುವುದಾಗಿ ಹೇಳಿದೆ.
Advertisement
Politics: ಹೋಳಾಗಿರುವ ಉದ್ಧವ್ ಶಿವಸೇನೆ ಬಣಕ್ಕೆ 23 ಕ್ಷೇತ್ರ ಕೊಡೋದು ಕಷ್ಟ: ಕಾಂಗ್ರೆಸ್
01:20 AM Jan 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.