Advertisement

ನಿರ್ಮಾತೃ ಪತ್ತೆ ಕಷ್ಟ

12:38 AM Aug 30, 2019 | Team Udayavani |

ನವದೆಹಲಿ: ಅಯೋಧ್ಯೆಯಲ್ಲಿ ರಾಮಜನ್ಮಸ್ಥಳದಲ್ಲಿ ಬಾಬರ್‌ನ ಆಸ್ಥೆಯ ಮೇರೆಗೆ ಮಸೀದಿ ನಿರ್ಮಾಣವಾಯಿತೇ ಇಲ್ಲವೇ ಎಂಬುದು 500 ವರ್ಷಗಳಾದ ನಂತರ ಈಗ ಅದನ್ನು ಪರೀಕ್ಷಿಸಿ ಸತ್ಯಾಂಶ ಕಂಡುಹಿಡಿಯುವುದು ಕಷ್ಟದ ಕೆಲಸ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ರಾಮಜನ್ಮಭೂಮಿ ವಿಚಾರಣೆಯ 15ನೇ ದಿನವಾದ ಗುರುವಾರ, ತನ್ನ ವಕೀಲರ ಮೂಲಕ ವಾದ ಮಂಡಿಸಿರುವ ‘ಅಖೀಲ ಭಾರತೀಯ ಶ್ರೀರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ’, ರಾಮನ ಜನ್ಮಸ್ಥಳದಲ್ಲಿ ಬಾಬರನು ಮಸೀದಿ ಕಟ್ಟಿದ್ದನೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಈ ಹಿಂದೆ ಇದೇ ಪ್ರಕರಣದ ವಿಚಾರಣೆ ನಡೆಸಿದ ಅಲಹಾಬಾದ್‌ ಹೈಕೋರ್ಟ್‌ ನಿರಾಕರಿಸಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ ಈ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಆದರೆ, 500 ವರ್ಷಗಳ ನಂತರ ಮಸೀದಿ ಯಾರು ಕಟ್ಟಿದರು ಎಂಬುದನ್ನು ಪತ್ತೆ ಮಾಡುವುದು ಕಷ್ಟದ ಕೆಲಸ ಎಂದು ಹೇಳಿತು. ಪ್ರಕರಣದಲ್ಲಿ ಸಹ ಕಕ್ಷಿದಾರರಾಗಿರುವ ಮುಸ್ಲಿಂ ಸಂಘಟನೆ ಯೊಂದು, ರಾಮಜನ್ಮಸ್ಥಳದಲ್ಲಿದ್ದ ಮಸೀದಿಯನ್ನು ಬಾಬರ್‌ ಕಟ್ಟಿರಲಿಲ್ಲ. ಹಾಗಾಗಿ, ಆತನಿಗೆ ಆ ಸ್ಥಳದ ಮೇಲೆ ಯಾವ ಹಕ್ಕೂ ಇರಲಿಲ್ಲ ಎಂದಿದ್ದು, ಈಗ ವಿಚಾರಣೆ ಮತ್ತೂಂದು ದಿಕ್ಕಿನತ್ತ ಹೊರಳುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next