Advertisement
ಇಲ್ಲಿನ ಆಂದೋಲನ ದಿನಪತ್ರಿಕೆಯ 50ನೇ ವರ್ಷದ ಪಯಣದ ಅಂಗವಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಬುಧವಾರ ನಡೆದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಕೆಲವು ರಾಜಕಾರಣಿಗಳು ಪತ್ರಿಕೆ ನಡೆಸುವ ಪ್ರಯತ್ನ ಮಾಡಿದರು. ವೀರೇಂದ್ರ ಪಾಟೀಲ್, ಆರ್.ಗುಂಡೂರಾವ್ ಪತ್ರಿಕೆಗಳನ್ನು ನಡೆಸಲು ಪ್ರಯತ್ನಪಟ್ಟರು. ಆದರೆ, ಯಶಸ್ವಿಯಾಗಲಿಲ್ಲ ಎಂದರು.
ಪೂರ್ವಗ್ರಹ ಪೀಡಿತವಾಗಿ ನೋಡಬಾರದು. ವಸ್ತು ನಿಷ್ಠವಾಗಿಯೂ ನೋಡುವ ಅವಶ್ಯಕತೆ ಇದೆ. ಹೊಸದು ಬಂದಾಗ ಟೀಕೆ ಬೇಡ. ಖಾಸಗೀ ಕರಣ ಬಂದಾಗ ಟೀಕಿಸಿದರು. ಆದ್ದರಿಂದ ವಸ್ತು ನಿಷ್ಠವಾಗಿ ನೋಡುವ ಅವಶ್ಯಕತೆ ಇದೆ ಎಂದರು. ಪತ್ರಿಕೋದ್ಯಮದಲ್ಲಿ ತಾಂತ್ರಿಕವಾಗಿ ಭಾರೀ ಬದಲಾವಣೆಯಾಗಿದೆ. ರಾಜಶೇಖರ ಕೋಟಿ ಅವರು ಕೇವಲ ಪತ್ರಕರ್ತರು ಮಾತ್ರ ಆಗಿರಲಿಲ್ಲ. ಜನಪರ ಧ್ವನಿಯಾಗಿದ್ದರು. ಜನ ಕಲ್ಯಾಣದ ಬಗ್ಗೆ ನಿರಂತರ ಚಿಂತನೆ ಮಾಡುತ್ತಿದ್ದರು. ಚಳವಳಿ ಜೊತೆಗೆ ಕೋಟಿ ಜೋಡಿಸಿಕೊಂಡಿದ್ದರು ಎಂದರು.
Related Articles
Advertisement
ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದನ್ನೇ ಪುಂಖಾನು ಪುಂಕವಾಗಿ ವರದಿ ಮಾಡಲಾಯಿತು. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆ ಎಂದೆಲ್ಲಾ ಹೇಳಿದರು. ಆದರೆ, ನಾನು 12 ಬಾರಿ ಚಾಮರಾಜ ನಗರಕ್ಕೆ ಭೇಟಿ ನೀಡಿದರೂ 5 ವರ್ಷ ಅಧಿಕಾರ ಅವಧಿ ಪೂರ್ಣಗೊಳಿಸಿದೆ ಎಂದರು.
ರಾಜಶೇಖರ ಕೋಟಿಯವರು ಎಂದೂ ಕೂಡ ರಾಜಿ ಮಾಡಿಕೊಳ್ಳಲಿಲ್ಲ. ತುಳಿತಕ್ಕೆ, ಶೋಷಣೆಗೆ ಒಳಗಾದವರ ಧ್ವನಿಯಾಗಿದ್ದರು. ಅವರು ಸ್ನೇಹ ಜೀವಿಯಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿ ದರು. ಚಲನಚಿತ್ರ ನಟ ಶಿವರಾಜಕುಮಾರ್ ಮಾತನಾಡಿ, ಸಿನಿಮಾ ರಂಗಕ್ಕೂ, ಪತ್ರಿಕಾ ರಂಗಕ್ಕೂ ಹೆಚ್ಚಿನ ಒಡನಾಟವಿದೆ ಎಂದರು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ನಿರ್ಮಲ ಕೋಟಿ, ರಶ್ಮಿ ಕೋಟಿ , ರವಿ ಕೋಟಿ ಉಪಸ್ಥಿತರಿದ್ದರು.