Advertisement
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಕೋಟ್ಯಂತರ ರೂ. ಬಳಸಿಕೊಳ್ಳುವ ನಮ್ಮ ಕೃಷಿ ವಿಶ್ವವಿದ್ಯಾಲಗಳು ನಾಚುವಂತಹ ಕೃಷಿ ಮೇಳ ತಾಲೂಕಿನ ಸುತ್ತೂರು ಜಾತ್ರೆಯದ್ದಾಗಿದೆ. ಕೃಷಿ ವಿವಿಗಳು ಹಿಂಗಾರು ಮುಂಗಾರು ಬೆಳೆಗಳನ್ನಾಧರಿಸಿ ಕೃಷಿ ಮೇಳವನ್ನಾಚರಿಸಿದರೆ ಕಾಲದ ಪರಿವೆ ಇಲ್ಲದೆ ಸುಮಾರು 162 ಬೆಳೆಗಳನ್ನು ಸ್ವತಃ ಬೆಳದು ಅದರ ಫಲವನ್ನೂ ತೋರುತ್ತಿರುವ ಈ ಕೃಷಿ ಮೇಳ ದಲ್ಲಿ ಏನುಂಟು ಏನಿಲ್ಲ ಎಂಬುದನ್ನು ಸ್ವತಃ ಪ್ರೇಕ್ಷಕ ನೋಡಿಯೇ ತಿಳಿಯಬೇಕಾಗಿದೆ.
Related Articles
Advertisement
ಕೇವಲ 15 ರಿಂದ 20 ಸಾವಿರ ರೂ.ಖರ್ಚು ಮಾಡಿ ಮನುಷ್ಯನಿಗೆ ಬೇಕಾಗಬಹುದಾದ 98 ಬೆಳೆಗಳನ್ನು ಬೆಳೆದು ಇಲ್ಲಿ ತೋರಲಾಗಿದೆ. ಈ ಪಾಟಿ ಬೆಳೆಗಳನ್ನು ಬೆಳೆಯುವುದರ ಮುಖಾಂತರ ರೈತ ಸ್ವಾವಲಂಬಿಯಾಗಿ ಸುಖ ಸಂಸಾರವನ್ನು ಸಂಬಾಳಿಸಬಹುದಾದ ದಾರಿಯನ್ನು ಕೆವಿಕೆ ಇಲ್ಲಿ ತೋರುತ್ತಿದೆ.
ಕಡಿಮೆ ನೀರು ಅಧಿಕ ಬೆಳೆ: ಇದು ಈ ಬಾರಿಯ ಕೃಷಿ ಮೇಳದ ಆದ್ಯತೆಯಾಗಿದ್ದು, ಬೆಳೆಗಳ ಸಿದ್ಧತೆಯನ್ನು ಮಾತ್ರ ನೋಡಬಹುದಾಗಿದ್ದ, ಈ ವರೆಗಿನ ಜಾತ್ರೆಯ ಪದ್ಧತಿಯನ್ನು ಬದಲಾಯಿಸಿದ ಜಾತ್ರೋತ್ಸವ ಸಮಿತಿ ಈ ಬಾರಿ ಅಕ್ಟೋಬರ್ ಮೊದಲ ವಾರದಲ್ಲೇ ಸೂತ್ತೂರು ಜಾತ್ರಾ
ಕೃಷಿ ಮೇಳದ ಸಿದ್ಧತೆಯನ್ನು ಆರಂಭಿಸಿದ ಹಿನ್ನೆಲೆಯಲ್ಲಿ ಈಗ ವಿವಿಧ ತರಕಾರಿ ಬೆಳೆಗಳು ಬೆಳೆದು ನಿಂತಿದ್ದು, ಅದರ ಸೋಭಗು ನೋಡುಗರ ಸೆಳೆಯುತ್ತಿದೆ. ಈ ಬಾರಿ ಬೆಳೆದಿರುವ ಭಾರಿ ಗಾತ್ರದ ಹಾಗಲ ಕಾಯಿ, ಹೀರೆ ಕಾಯಿ, ಸೊರೆ , ಪಡವಲ, ಕರಿ ಕುಂಬಳ ಮುಂತಾದ ತರಕಾರಿಗಳು ಪ್ರೇಕ್ಷಕರ ಮನ ಸೆಳೆಯುತ್ತಿದೆ.
ಸಿರಿಧಾನ್ಯಕ್ಕೆ ಒತ್ತು: ಅನಾರೋಗ್ಯ ಪೀಡಿತ ಜನತೆ ಇತ್ತೀಚಿಗೆ ಸಿರಿ ಧಾನ್ಯಕ್ಕೆ ಮೊರೆ ಹೊಗುತ್ತಿರುವದನ್ನು ಗಮನಿಸಿದ ಜಾತ್ರಾ ಸಮಿತಿ ಈ ಬಾರಿ ಶಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಿರುವದನ್ನು ಇಲ್ಲಿ ಕಾಣಬಹುದು. ಅತ್ಯಂತ ಕಡಿ ಮೇ ನೀರು ಪಡೆದು ಅತ್ಯತ್ತಮ ಆರೋಗ್ಯ ನೀಡುವ ಸಿರಿ ಧಾನ್ಯಗಳಾದ ಸಾಮೆ ನವಣೆ ಸಜ್ಜೆ ಬರಗು,
ಹಾರಕ ಊದಲು ಇವುಗಳ ಪ್ರಾತ್ಯಕ್ಷತೆಯ ಜೊತೆಗೆ ಯುವ ಜನತೆಯನ್ನು ದಾರಿತಪ್ಪಿಸುತ್ತಿರುವ ಜಂಕ್ ಫುಡ್ ಗಳಿಂದ ಮತ್ತೆ ಸ್ವದೇಶಿ ಆಹಾರದತ್ತ ಮುಖ ತಿರುಗಿಸುವ ಪ್ರಯತ್ನ ಸಹ ಇಲ್ಲಿ ಸಾಗಿದೆ. ಅದಕ್ಕಾಗಿಯೇ ಈ ಬಾರಿ ಶುಚಿ ರುಚಿಯಾದ ಸಿರಿಧಾನ್ಯಗಳ ಆಹಾರವನ್ನು ಸ್ಥಳದಲ್ಲೇ ಸಿದ್ಧಪಡಿಸಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಾರಾಟಕ್ಕೂ ಅವಕಾಶ: ಕೃಷಿ ಉತ್ಪಾದನೆಯ ಜೊತೆ ಮಾರಾಟಕ್ಕೂ ಈ ಬಾರಿ ಅವಕಾಶ ನೀಡಲಾಗಿದ್ದು, ಅದಕ್ಕಾಗಿಯೇ ಈ ಬಾರಿ 20 ಕ್ಕೂ ಹೆಚ್ಚು ಕೃಷಿ ಉತ್ಪನ್ನ ಮಾರಾಟ ಮಳಿಗೆ ತೆರೆಯಲಾಗಿದೆ. ಒಟ್ಟಾರೆ ಕೃಷಿ ವಿಭಾಗಕ್ಕೊಂದಕ್ಕೇ 140 ಕ್ಕೂ ಮಳಿಗೆಗಳು ಮೀಸಲಾಗಿರುವುದು ಈ ಬಾರಿಯ ಸೂತ್ತೂರಿನ ಕೃಷಿ ಮೇಳದ ಹೆಗ್ಗಳಿಕೆಯಾಗಿದೆ. * ಶ್ರೀಧರ್ ಆರ್ ಭಟ್