Advertisement

ಉನ್ನತ ಅಧಿಕಾರಿಗಿಂತ ರೈತ ಆಗುವುದು ಶ್ರೇಷ್ಠ; ನಳಿನಾಕ್ಷಿ

04:24 PM Jul 07, 2022 | Team Udayavani |

ಆನೇಕಲ್‌: ತಾಲೂಕು ಕಸಾಪ ವತಿಯಿಂದ ಮಹಿಳೆಯರೊಂದಿಗೆ ನಮ್ಮ ಆಹಾರ ನಮ್ಮ ಅಕ್ಷರ ಸಂವಾದ ಕಾರ್ಯಕ್ರಮವನ್ನು ಪಟ್ಟಣದ ಕಲ್ಯಾಣಿ ಸಮೀಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆ ಯೋಗ ಶಿಕ್ಷಕಿ ನಳಿನಾಕ್ಷಿ ನೆರವೇರಿಸಿದರು. ಈ ವೇಳೆ ಸ್ವದೇಶಿ ನಾಗಭೂಷನ್‌ ಮಾತನಾಡಿ, ಹಸಿರುಕ್ರಾಂತಿಯ ನೆಪದಲ್ಲಿ ಮಣ್ಣಿನ ಸತ್ವವನ್ನು ಹಾಳು ಮಾಡಿದ್ದೇವೆ. ಮಿತಿ ಮೀರಿದ ಬಯಕೆಗಳು ಮನುಷ್ಯನನ್ನು ರೋಗಗ್ರಸ್ತರನ್ನಾಗಿ ಮಾಡುತ್ತಿದೆ.

Advertisement

ಪ್ರಸ್ತುತ ವಿದ್ಯಮಾನ ಗಮನಿಸಿದಾಗ ಉನ್ನತ ಅಧಿಕಾರಿ ಆಗುವುದಕ್ಕಿಂತ ರೈತನಾಗುವುದು ಬಹಳ ಶ್ರೇಷ್ಠವಾದ ಕೆಲಸ. ಅನ್ನ ನೀಡುವ ಕೈಗಳು ದೇವರ ಪೂಜೆಗೆ ಸಮಾನ ಎಂದರು.

ಯೋಗ ಶಿಕ್ಷಕಿ ನಳಿನಾಕ್ಷಿ ಮಾತನಾಡಿ, ಮನುಷ್ಯ ತನ್ನ ದೇಹವನ್ನು ಆಸ್ಪತ್ರೆಗಳಿಗೆ ಗುತ್ತಿಗೆ ಕೊಟ್ಟಂತೆ ಭಾಸವಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಕಾಯಿಲೆಗಳಿಂದ ಬಳಲುತ್ತಾ ಬೆಂಡಾಗಿ ಹೋಗಿದ್ದಾನೆ. ಇದನ್ನೆಲ್ಲ ಸರಿಪಡಿಸಿಕೊಳ್ಳಬೇಕಾದರೆ ನಮ್ಮ ಮೂಲ ಆಹಾರ ಪದ್ಧತಿಗೆ ಮರಳ ಬೇಕಾಗಿರುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷೆ ಜಯಕುಮಾರಿ ಮಾತನಾಡಿ, ಆಹಾರ ಮನುಷ್ಯನ ಹಕ್ಕು. ಆಹಾರದಲ್ಲಿ ತಾರತಮ್ಯವನ್ನು ಮಾಡುವುದು ಸರಿಯಲ್ಲ. ಅವರವರ ಆಹಾರವನ್ನು ಅವರೇ ಆಯ್ಕೆ ಮಾಡಿಕೊಂಡು ಸ್ವಚ್ಛಂದವಾಗಿ ಭೂಮಿಯಲ್ಲಿ ಬದುಕಿ ಬಾಳಿದಾಗ ಅದುವೇ ಸ್ವರ್ಗವಾಗುತ್ತದೆ ಎಂದರು.

ಆರೋಗ್ಯ ಸಮತೋಲನವಾಗಿರಬೇಕು: ಜ್ಞಾನಜ್ಯೋತಿಯ ಫಾದರ್‌ ಮೇಲ್ವಿನ್‌ ಕೆನ್‌ ಸಿಕ್ವೇರಾ ಮಾತನಾಡಿ, ಮನುಷ್ಯನಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವು ಸಮತೋಲನವಾಗಿರಬೇಕು. ನಾವು ಬರೀ ದೈ‌ಹಿಕ ಆರೋಗ್ಯವನ್ನು ಮಾತ್ರ ಜಾಗೃತಿ ವಹಿಸುತ್ತಿದ್ದೇವೆ. ಆದರೆ, ಮನುಷ್ಯನಿಗೆ ಮಾನಸಿಕ ಆರೋಗ್ಯವು ಅಷ್ಟೇ ಮುಖ್ಯವಾಗಿರುತ್ತದೆ. ಪ್ರತಿ ಮನೆಯಲ್ಲಿ ಹೆಣ್ಣು ಶಿಕ್ಷಿತಳಾಗಿರಬೇಕು. ಆಗ ಸಮಾಜ ಬಹುಬೇಗ ಅಭಿವೃದ್ಧಿ ಆಗುತ್ತದೆ ಎಂದರು.

Advertisement

ಕಸಾಪ ಅಧ್ಯಕ್ಷ ಆದೂರು ಪ್ರಕಾಶ್‌, ಮಮತಾ ಯಜಮಾನ್‌ ಪಾಪಮ್ಮ, ಟಿ.ನಾಗರಾಜು, ರತ್ನ ಡೋಲ್‌ ವಿದ್ವಾನ್‌, ಮಂಜುನಾಥ್‌, ಜ್ಞಾನಜ್ಯೋತಿಯ ವಿಜಯ್‌, ಸುಶೀಲ, ಯಲ್ಲಪ್ಪ, ಸೇನೆ ಕುಮಾರ್‌, ಕನಮನಹಳ್ಳಿ ಲಕ್ಷ್ಮೀ, ಯಶೋಧಾ, ಉಷಾಬಾಬು, ಜೀಜಾಬಾಯಿ, ಪುಷ್ಪಬಾಯಿ, ಕನಕ ಪುಷ್ಪಾ, ಆಶಾ ರಾಣಿ, ಗಮನ ಸಂಸ್ಥೆ ವರ್ಷ ಮದನ್‌, ಪ್ರಶಾಂತ್‌, ಮನು, ಮಾದೇವಿ, ಭರತ್‌, ಲತಾ, ರಕ್ಷಣಾ ವೇದಿಕೆಯ ಮಂಜು, ಅರೇಹಳ್ಳಿ ಚೌಡಪ್ಪ, ವಾಟಾಳ್‌ ಬಳಗದ ಸನಾವುಲ್ಲ, ಆರ್‌. ಮಹದೇವಯ್ಯ, ಭಾನುಪ್ರಕಾಶ್‌, ಇಲಿಯಾಸ್‌ ಖಾನ್‌. ರಾಮಚಂದ್ರ, ಗಾರೆ ಶಿವಪ್ಪ, ಪರಿಷತ್ತಿನ ಎಂ. ಗೋವಿಂದರಾಜು, ಮಹೇಶ್‌, ಊಗಿನಹಳ್ಳಿ ಅಪ್ಸರ ಆಲಿಖಾನ್‌, ಲೋಕೇಶ್‌ ಗೌಡ, ಹಾಲೆನಹಳ್ಳಿ ಶ್ರೀನಿವಾಸ್‌ ಚುಟುಕು ಶಂಕರ್‌, ಡಾ. ನಾಗರಾಜ್‌ ಕುಮಾರ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next