Advertisement

ಹಣದ ಮತ್ತು ಹತ್ತದಿದ್ದರೆ ಉತ್ತಮ

05:42 PM Aug 06, 2024 | Team Udayavani |

ಹಣವೇನಾದರೂ ಮರದಲ್ಲಿ ಎಲೆಗಳಂತೆ ಚಿಗುರುತ್ತಿದ್ದರೆ ಎಲ್ಲರೂ ಸಾಲುಮರದ ತಿಮ್ಮಕ್ಕ ಆಗುತ್ತಿದ್ದರೇನೋ. ಹಣ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಹಣ ಶ್ರೀಮಂತನ ಬಳಿ ಇದ್ದರೂ, ಬಡವರ ಬಳಿ ಇದ್ದರೂ ಅದರ ಬೆಲೆ ಬದಲಾಗದು. ಆದರೆ ಅದು ಯಾವ ಸಮಯದಲ್ಲಿ ಹೇಗೆ ಬಳಕೆಯಾಗುತ್ತದೆ ಅನ್ನುವುದರ ಮೇಲೆ ಅದರ ಮೌಲ್ಯ ನಿರ್ಧಾರವಾಗುತ್ತದೆ.

Advertisement

ಒಂದು ದಿನ ವ್ಯಕ್ತಿಯೊಬ್ಬ ಸ್ವಾಮೀಜಿಯೊಬ್ಬರನ್ನು ಭೇಟಿಯಾಗಲು ಬಂದಿದ್ದ. ಆತ ತೀವ್ರ ನಿರುತ್ಸಾಹಿಯಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದ್ದ. ಸ್ವಾಮೀಜಿ ಆತನಲ್ಲಿ ಸಮಸ್ಯೆ ಏನು ಎಂದು ಕೇಳಿದಾಗ ಆತ, 5 ವರ್ಷಗಳ ಹಿಂದೆ ತನ್ನ ಬಳಿ ಇದ್ದ ಮೂರು ಸಾವಿರ ಕೋಟಿ ಅಸ್ತಿಯನ್ನು ಸ್ಟಾಕ್‌ ಮಾರ್ಕೆಟ್‌ ನಲ್ಲಿ ಹೂಡಿಕೆ ಮಾಡಿದ್ದು. ಯಾವುದೋ ಅನಿರೀಕ್ಷಿತ ದುರ್ಘ‌ಟನೆ ನಡೆದಿದ್ದರಿಂದ ಸ್ವಲ್ಪ ಮಟ್ಟಿಗೆ ನಷ್ಟ ಎದುರಿಸಬೇಕಾಗಿ ಬಂತು.

ಈಗ ತನ್ನ ಅಸ್ತಿಯ ಮೌಲ್ಯ 250 ಕೋಟಿ ರೂ. ಗೆ ಇಳಿಕೆಯಾಗಿದೆ. ಇದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚಿಸಿದ್ದೇನೆ ಎಂದು ತನ್ನ ಅಳಲನ್ನು ತೋಡಿಕೊಂಡ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮೀಜಿ, ಜನರಿಗೆ ಅಷ್ಟು ಹಣವನ್ನು ಕೊಟ್ಟು ನಿನಗೆ ಹಣ ಬೇಕೇ ಅಥವಾ ಸ್ವರ್ಗ ಬೇಕೇ ಎಂದು ಕೇಳಿದರೆ ಬಹುತೇಕ ಎಲ್ಲರು ಹಣವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಣ ಜೇಬಿನಲ್ಲಿದ್ದರೆ ಉತ್ತಮ, ಅದು ತಲೆಯೊಳಗೆ ಹೊಕ್ಕಾಗಲೇ ಜೀವನ ಸಂಕಟಗಳು ಆರಂಭವಾಗುವುದು. ಏಕೆಂದರೆ ಅದನ್ನಿಟ್ಟುಕೊಳ್ಳಲು ತಲೆ ಸೂಕ್ತವಾದ ಜಾಗಲ್ಲ ಎಂದು ಪಾಠ ಹೇಳಿದರು.

ಮೇಲಿನ ಕಥೆಯಂತೆ “ಹಣ ಮಾನವನ ಯೋಗಕ್ಷೇಮಕ್ಕೆ ಒಂದು ಉಪಕರಣವಷ್ಟೆ, ಅದೇ ಎಲ್ಲವೂ ಅಲ್ಲ’. ಹಣ ಎಂದರೆ ಬಾಹ್ಯ ಪ್ರಪಂಚವನ್ನು ನಮಗೆ ಅನುಕೂಲಕರವನ್ನಾಗಿಸುವ ಬಗೆ. ಹಣ ಕೇವಲ ಒಂದು ಮಾಧ್ಯಮವೇ ಹೊರತು, ಅದುವೇ ಅಂತಿಮ ಗುರಿಯಲ್ಲ. ಹಣ ಕೆಟ್ಟದೇ? ಒಳ್ಳೆಯದೇ? ಎರಡೂ ಅಲ್ಲ. ಅದು ನಾವೇ ಸೃಷ್ಟಿಸಿರುವ ಒಂದು ಸಾಧನ ಅಥವಾ ಉಪಕರಣ ಅಷ್ಟೇ. ಹಣ ಮಾನವನಿಗೆ ಜಗತ್ತಿನ ಬಾಹ್ಯ ಹಿತವನ್ನು ಕೊಡಬಹುದೇ ವಿನಃ ಅದು ಮಾನವನಿಗೆ  ಆಂತರಿಕ ಹಿತವನ್ನು ನೀಡಲು ಸಾಧ್ಯವಿಲ್ಲ.

ಎಲ್ಲರಿಗೂ ಅವರವರ ಜೀವನ ಹಿತಕರವಾಗಿರಬೇಕೆಂಬ ಆಸೆ ಇರುತ್ತದೆ. ಹಣ ನಿಮಗೆ ಬಾಹ್ಯ ಜಗತ್ತಿನ ಹಿತವನ್ನು ಕೊಡಿಸಬಹುದು. ಆದರೆ ಅದು ಮನುಷನಿಗೆ ಆಂತರಿಕ ಹಿತ ಅಥವಾ ನೆಮ್ಮದಿಯನ್ನು ನೀಡಲು ಸಾಧ್ಯವಿಲ್ಲ. ನಿಮ್ಮ ಬಳಿ ಬಹಳ ಹಣವಿದ್ದರೆ ನೀವು ಒಂದು ಐಷಾರಾಮಿ ಹೊಟೇಲಿನಲ್ಲಿ ತಂಗಬಹುದು. ಆದರೆ ನಿಮ್ಮ ಶರೀರ, ಮನಸ್ಸು, ಭಾವನೆಗಳು ಮತ್ತು ಪ್ರಾಣಶಕ್ತಿ ಹಿತಕರವಾಗಿಲ್ಲದಿದ್ದರೆ ನೀವು ಐಷಾರಾಮಿ ಹೊಟೇಲಿನಲ್ಲಿ ಸಂತೋಷದಿಂದ ಇರಬಲ್ಲರೇ? ಕಂಡಿತ ಇಲ್ಲ.

Advertisement

ಈ ನಾಲ್ಕು ಅಂಶಗಳು ಸರಿಯಾಗಿದ್ದರೆ ಒಂದು ಮರದ ಕೆಳಗಿದ್ದರೂ ಸಹ ನೀವು ಆನಂದದಿಂದಿರಬಹುದು. ಇದರರ್ಥ ನಿಮ್ಮ ಬಳಿ ಹಣವಿರಬಾರದೆಂದಲ್ಲ. ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು – ಯಾವುದು ಮೊದಲು ಬರಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಈ ನಾಲ್ಕು ಅಂಶಗಳು ನಿಮ್ಮಲ್ಲಿ ಹಿತವಾಗಿದ್ದು, ನಿಮ್ಮ ಹತ್ತಿರ ಹಣವೂ ಇದ್ದರೆ, ನಿಮ್ಮ ಹೊರ ಪ್ರಪಂಚವನ್ನು ಹಿತವಾಗಿರಿಸಿಕೊಳ್ಳಬಹುದು. ಆದ್ದರಿಂದ ಹಣವನ್ನು ಹೊಂದುವುದು ಸರಿಯೇ ಅಥವಾ ತಪ್ಪೇ ಎಂಬುದು ಇಲ್ಲಿ ವಿಚಾರವಲ್ಲ. ಅದು ಒಂದು ರೀತಿಯ ಸಾಧನ ಅಥವಾ ಉಪಕರಣ ಅಷ್ಟೇ. ಹಣವು ನಿಮ್ಮ ಜೇಬಿಗೆ ಸೀಮಿತವಾಗಿರದೆ ಅದು ನಿಮ್ಮ ಮೆದುಳಿಗೆ ಏರಿತೆಂದರೆ, ಜೀವನ ದುಃಖಕರವಾಗುತ್ತದೆ.

-ರೇಣುಕಾ ಸಂಗಪ್ಪನವರ

ಸಂತ ಅಲೋಶಿಯಸ್‌ ಕಾಲೇಜು, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next