Advertisement

ಪ್ರತಿಭಟನೆಗೆ ಅಂಕೆ ಹಾಕಿ

09:40 AM Apr 25, 2018 | Karthik A |

ಹೊಸದಿಲ್ಲಿ: ಪ್ರಸಕ್ತ ಕಾಲಘಟ್ಟದಲ್ಲಿ ವೃತ್ತಿಪರ ಪ್ರತಿಭಟನಾಕಾರರ ಆರ್ಭಟ ತೀವ್ರಗೊಂಡಿದ್ದು, ಇಂಥವರು ತಮ್ಮ ಧ್ವನಿ ಎಲ್ಲೆಡೆ ಕೇಳುವಂತೆ ಮಾಡುವ ಉದ್ದೇಶದಿಂದ ಸಂಸತ್ತು, ಪ್ರಧಾನಿ ಅಥವಾ ರಾಷ್ಟ್ರಪತಿ ನಿವಾಸಗಳ ಮುಂದೆ ಪ್ರತಿಭಟನೆ ನಡೆಸುತ್ತಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಇಂಥವರನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ. ದಿಲ್ಲಿಯ ಮಧ್ಯಭಾಗದಲ್ಲಿನ ಸರಕಾರಿ ಕಚೇರಿಗಳು ಹಾಗೂ ಗಣ್ಯರ ನಿವಾಸಗಳಿರುವ ಪ್ರಾಂತ್ಯದಲ್ಲಿ ಹಲವಾರು ದಿನಗಳಿಂದ ನಿಷೇಧಾಜ್ಞೆ ಜಾರಿಗೊಳಿಸಿರುವುದರ ವಿರುದ್ಧ ಮಜ್ದೂರ್‌ ಕಿಸಾನ್‌ ಶಕ್ತಿ ಸಂಘಟನ್‌ ಎಂಬ ಸರಕಾರೇತರ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿ ಸಂಬಂಧಿಸಿ ಕೇಂದ್ರ ಈ ರೀತಿ ಉತ್ತರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next