Advertisement

ಮಕ್ಕಳಿಗೆ ಅಕ್ಷರದ ಜತೆ ಸಂಸ್ಕಾರವೂ ಮುಖ್ಯ

03:12 PM Apr 05, 2022 | Team Udayavani |

ಮೂಡಲಗಿ: ವಿದ್ಯಾರ್ಥಿಗಳು ನಮ್ಮ ನಾಡಿನ ಹಬ್ಬ-ಹರಿದಿನಗಳು, ಸಂಸ್ಕೃತಿ-ಸಂಸ್ಕಾರ ಅರಿತುಕೊಂಡು ಅಕ್ಷರಭ್ಯಾಸ ಮಾಡಿದಲ್ಲಿ ಆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಸ್ಕಾರವಂತ ವ್ಯಕ್ತಿಗಳಾಗಿ ಬಾಳುತ್ತಾರೆ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

Advertisement

ಅವರ ತಾಲೂಕಿನ ತುಕ್ಕಾನಟ್ಟಿ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಂದ್ರಮಾನ ಯುಗಾದಿ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಕ್ಷರ ದಾಸೋಹದ ವಿಶೇಷ ಭೋಜನ ಕೂಟದಲ್ಲಿ ಮಾತನಾಡಿ, ಈ ಶಾಲೆಯ ಶಿಕ್ಷಕರು ನಮ್ಮ ಹಿಂದೂ ಸಂಸ್ಕೃತಿಯಂತೆ ಯುಗಾದಿ ಹಬ್ಬದ ದಿನ ಹೊಸ ವರ್ಷಾಚರಣೆ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಗೋಕಾಕ ತಾಲೂಕಾ ಅಕ್ಷರದಾಸೋಹ ನಿರ್ದೇಶಕ ಅಶೋಕ ಮಲಬನ್ನವರ ಮಾತನಾಡಿ, ಬೇವು ಬೆಲ್ಲದಂತೆ ಜೀವನದಲ್ಲಿ ಕಷ್ಟ ಸುಖ ಸಮಾನವಾಗಿ ಹಂಚಿಕೊಂಡು ಸೌರ್ಹಾದಯುತವಾಗಿ ಬಾಳಬೇಕೆಂಬ ಪರಂಪರೆಯನ್ನು ಸಾರುವ ಈ ಯುಗಾದಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ವಿಶೇಷ ಭೋಜನವನ್ನು ಏರ್ಪಡಿಸಿರುವುದು ಮಾದರಿಯಾಗಿದೆ ಎಂದರು.

ಈಗಾಗಲೇ ಅಕ್ಷರದಾಸೋಹದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ಏರ್ಪಡಿಸುವುದರ ಮೂಲಕ ಸರ್ಕಾರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಈ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸುಮಾರು 700 ವಿದ್ಯಾರ್ಥಿಗಳಿಗೆ ಬೇವು ಬೆಲ್ಲದೊಂದಿಗೆ ಕುರ್ಮಾ ಪುರಿ, ಬಟಾಟಿ ಪಲ್ಯೆ, ಗುಲಾಬ ಜಾಮೂನ್‌, ಲಾಡು, ಮಸಾಲೆ ಅನ್ನ, ಮೊಸರನ್ನ, ರಾಗಿ ಅಂಬಲಿ, ಸಾಂಬಾರ ಹೀಗೆ ವಿವಿಧ ಖಾದ್ಯಗಳನ್ನು ನೀಡಲಾಯಿತು.

Advertisement

ತುಕ್ಕಾನಟ್ಟಿ ಗ್ರಾಪಂ ಅಧ್ಯಕ್ಷ ಕುಮಾರ ಮರ್ದಿ, ಸದಸ್ಯರಾದ ಸುನಂದಾ ಭಜಂತ್ರಿ, ರೈತ ಮುಖಂಡ ಮಂಜು ಗದಾಡಿ ಹಾಗೂ ಪ್ರಧಾನ ಗುರುಗಳಾದ ಎ.ವಿ ಗಿರೆಣ್ಣವರ, ಶಿವಾನಂದ ಸೋಮವ್ವಗೋಳ, ಕಲ್ಲೋಳಿ ಸಂಪನ್ಮೂಲ ವ್ಯಕ್ತಿ ಗಣಪತಿ ಉಪ್ಪಾರ ಶಿಕ್ಷಕರಾದ ವಿಮಲಾಕ್ಷಿ ತೋರಗಲ್ಲ, ಕುಸುಮಾ ಚಿಗರಿ, ಲಕ್ಷ್ಮೀ ಹೆಬ್ಟಾಳ, ಪುಷ್ಪಾ ಭರಮದೆ, ಸಂಗೀತಾ ತಳವಾರ, ಶೀಲಾ ಕುಲಕರ್ಣಿ, ಖಾತೂನ ನದಾಫ, ಶಿವಲೀಲಾ ಹುಲಕುಂದ, ಹೊಳೆಪ್ಪಾ ಗದಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ಮಹಾದೇವ ಗೋಮಾಡಿ, ಮಂಜುನಾಥ ಕಮ್ಮಾರ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next