ಬೆಂಗಳೂರು: ಐಟಿಬಿಟಿ ರಂಗಕ್ಕೂ ಕೃಷಿ ಪ್ರವೇಶಿಸಿರುವುದು ಬಹಳ ದೊಡ್ಡ ಹೆಮ್ಮೆಯ ಸಂಗತಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜಿಕೆವಿಕೆಯಲ್ಲಿ ಲಘುಉದ್ಯಮ ಭಾರತ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ “ಟೆಕ್ ಭಾರತ್” ಕಾರ್ಯಕ್ರಮವನ್ನು ಉದ್ಘಾಟಿಸಿ ಬಿ.ಸಿ.ಪಾಟೀಲ್ ಮಾತನಾಡಿದರು.
ಕೃಷಿಯ ಮಹತ್ವ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರಿಗೂ ಅರಿವಾಗುತ್ತಿದೆ. ಕೃಷಿಯಮೂಲ ಇಲ್ಲದಿದ್ದರೆ ಯಾವ ರಂಗವೂ ಇಲ್ಲ ಎಂಬುದು ತಿಳಿಯುತ್ತಿದೆ.ಮೇಕ್ ಇನ್‌ಇಂಡಿಯಾ ಅಡಿ ಕೃಷಿಕಾರ್ಯಕ್ರಮಗಳು ಕಾರ್ಯಗತಗೊಳಿಸುತ್ತಿದೆ.ದೇಶದಲ್ಲಿ ಮೊದಲನೇ ಹಾಗೂ ಇಡೀ ವಿಶ್ವದಲ್ಲಿ ನಾಲ್ಲನೇಸ್ಥಾನದಲ್ಲಿ ನಮ್ಮ ಬೆಂಗಳೂರು ತಂತ್ರಜ್ಞಾನ ವಿಜ್ಞಾನ ಅಭಿವೃದ್ಧಿಯಲ್ಲಿ ಸ್ಥಾನ ಪಡೆದಿರುವುದು ಸಂತಸದ ಸಂಗತಿ ಎಂದರು
1912 ರಲ್ಲಿಯೇ ಸರ್.ಎಂ.ವಿಶ್ವೇಶ್ವರಯ್ಯನವರು ನೀರಾವರಿ ಮತ್ತು ಕೈಗಾರಿಕಾಕರಣದಲ್ಲಿ ರೈತರ ಅಭಿವೃದ್ಧಿಯಚಿಂತನೆ ಹೊಂದಿದ್ದರು.2014 ರಿಂದ 2018 ರವರೆಗೆ ದೇಶದಲ್ಲಿ ಸುಮಾರು 50 ಸಾವಿರ ಸ್ಟಾರ್ಟಪ್‌ಗಳು ಹುಟ್ಟಿವೆ.2019 ಈ ಒಂದು ವರ್ಷದಲ್ಲಿಯೇ 9,300ಅಗ್ರಿ ಸ್ಟಾರ್ಟಪ್‌ಗಳು ಆರಂಭವಾಗಿದ್ದು,ಅದರಲ್ಲಿ ಕೃಷಿಗಾಗಿಯೇ 474 ಸ್ಟಾರ್ಟಪ್ಗಳಾಗಿವೆ.ಇದುವರೆಗೂ ಬೆಂಗಳೂರಿನಲ್ಲಿ 4 ಸಾವಿರ ಸ್ಟಾರ್ಟಪ್‌ಗಳು ತಲೆಯೆತ್ತಿವೆ. ನಮ್ಮ ದೇಶದಲ್ಲಿ ಪ್ರತಿದಿನ 2ರಿಂದ 3 ಸ್ಟಾರ್ಟಪ್‌ಗಳು ಹುಟ್ಟುತ್ತಿವೆ. ಸುಮಾರು 40 ಸಾವಿರ ಉದ್ಯೊಗೊಂದು ವರ್ಷದಲ್ಲು ಸೃಷ್ಟಿಯಾಗುತ್ತಿದೆ ಎಂದರು.
ವಿದ್ಯಾವಂತ ಯುವಕರು ಪಟ್ಟಣದಿಂದ ಹಳ್ಳಿಕಡೆಗೆ ಕೃಷಿ ತಂತ್ರಜ್ಞಾನ ಅಳವಡಿಸಿಕೊಂಡು ಪುನಃ ಮುಖಮಾಡಿದ್ದಾರೆ.ವೃದ್ಧಾಶ್ರಮವಾಗಿದ್ದ ಹಳ್ಳಿಗಳೀಗ ಕೃಷಿಯತ್ತ ಆಸಕ್ತಿಯಿಂದ ಮತ್ತೆ ಕಳೆಹೊಂದುತ್ತಿವೆ. 2020-21ರಲ್ಲಿ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿಯೂ ಕೂಡ ಕರ್ನಾಟಕ
164 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪಾದನೆಯಾಗಿದ್ದು,ಇದರಲ್ಲಿ ಶೇ.3ಭಾಗ ಕರ್ನಾಟಕವೇ ಇಡೀ ದೇಶದಲ್ಲಿ ಆಹಾರ ಉತ್ಪಾದಿಸಿ ಕೊಡುಗೆ ನೀಡಿರುವುದು ಹೆಮ್ಮೆಯ ವಿಚಾರ.ಆಹಾರ ಸಂಸ್ಕರಣಾ ಘಟಕ ಮತ್ತು ಅಗ್ರಿ ಸ್ಟಾರ್ಟಪ್‌ಗಳಿಗೆ ಆತ್ಮನಿರ್ಭರ ಯೋಜನೆಯಡಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ಸಾವಿರ ಕೋಟಿ ರೂ ಆಹಾರ ಸಂಸ್ಕರಣಾ ಘಟಕಗಳಿಗೆ ಹಾಗೂ 1 ಲಕ್ಷ ಕೋಟಿ ರೂ. ಅಗ್ರಿಕಲ್ಚರ್ ಇನ್ಫಟಾಸ್ಟ್ರಕ್ಚರ್ ಗಳಿಗೆ ಇಟ್ಟಿದ್ದಾರೆ.35% ರಾಜ್ಯ ಸರ್ಕಾರ ಉತ್ತೇಜನ 15ಲಕ್ಷ ರೂ.ಸಬ್ಸಿಡಿ ಉತ್ತೇಜನ ನೀಡುತ್ತಿದೆ ಎಂದರು.
ಸರ್ಕಾರಿ ನೌಕರಿ ಮೇಲೆಯೇ ಅವಲಂಬಿತರಾಗದೇ ಯುವಕರು ಸ್ವ ಉದ್ಯೋಗಕ್ಕೆ ಹೆಚ್ಚು ಒತ್ತುಕೊಡಬೇಕು.ಟೀ ಕಾಫಿಯು ಆನ್ಲೈನ್‌ನಲ್ಲಿ ಮನೆಗೆ ಸಿಗುವಂತಾಗಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಈ ಸಂದರ್ಭದಲ್ಲಿ ಜಿಕೆವಿಕೆ ಕುಲಪತಿ ಡಾ.ರಾಜೇಂದ್ರ ಪ್ರಸಾದ್, ಪ್ರಮುಖರಾಸ ಸಚ್ಚಿದ್ ಸೋಬಿನ್, ನಾರಾಯಣ್ ಪ್ರಸಾದ್,ಗೋಪಾಲಕೃಷ್ಣನ್, ರಮಣರೆಡ್ಡಿ, ಜೋಸೆಫ್ ಅಬ್ರಾಹಿಂ, ಸುಬ್ಬಣ್ಣ ಅಯ್ಯಪ್ಪ ಉಪಸ್ಥಿತರಿದ್ದರು.