ನವ ದೆಹಲಿ: 2020-21ನೇ ಹಣಕಾಸು ವರ್ಷದಲ್ಲಿ ದೇಶದ ತಂತ್ರಜ್ಞಾನ ಕ್ಷೇತ್ರವು ಸುಮಾರು 1.38 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸುವ ನಿರೀಕ್ಷೆಯಿದೆ. ಆ ಮೂಲಕ ಟೆಕ್ ಕ್ಷೇತ್ರದ ಉದ್ಯೋಗಿಗಳ ಸಂಖ್ಯೆಯು 4.47 ದಶಲಕ್ಷಕ್ಕೇರಲಿದೆ ಎಂದು ವಾರ್ಷಿಕ ನಾಸ್ಕಾಂ ವರದಿ ಹೇಳಿದೆ.
ಟೆಕ್ ಕ್ಷೇತ್ರವು ಉತ್ತಮ ಪ್ರಗತಿ ದಾಖಲಿಸುತ್ತಿದ್ದು, ಡಿಜಿಟಲ್ ಕೌಶಲ್ಯ ಹೆಚ್ಚಿಸುವತ್ತ ಗಮನ ನೀಡಲಾಗುವುದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಡಿಜಿಟಲ್ ಪ್ರತಿಭೆಗಳ ಪ್ರಮಾಣ ಶೇ.32ರಷ್ಟು ಹೆಚ್ಚಳವಾಗಲಿದೆ. ಪ್ರತಿ ವರ್ಷ ಕಂಪನಿಗಳು 2.5 ಲಕ್ಷ ಉದ್ಯೋಗಿಗಳಿಗೆ ಡಿಜಿಟಲ್ ಕೌಶಲ್ಯವನ್ನು ಒದಗಿಸುತ್ತಿದೆ ಎಂದೂ ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಮಾರ್ಚ್ 2021ಕ್ಕೆ ಅಂತ್ಯಗೊಳ್ಳುವ ಹಣಕಾಸು ವರ್ಷದಲ್ಲಿ ಟೆಕ್ನಾಲಜಿ ಕ್ಷೇತ್ರದ ಗಾತ್ರವು ಶೇ.2.3ರಷ್ಟು ಬೆಳವಣಿಗೆ ಹೊಂದಲಿದೆ ಎಂದೂ ವರದಿ ತಿಳಿಸಿದೆ.
ಇದನ್ನೂ ಓದಿ:ಹಳ್ಳಿ ದತ್ತು ಪಡೆದು ಗ್ರಾಮಾಭಿವೃದ್ಧಿಗೆ ಹೊಸ ಹೆಜ್ಜೆ ಇಟ್ಟ ಕಿಚ್ಚ ಸುದೀಪ್