Advertisement
ಮಂಗಳೂರು: ಕೋವಿಡ್ ವೈರಸ್ ಉದ್ಯೋಗಾವಕಾಶಗಳ ಮೇಲೆ ತೀವ್ರ ಹೊಡೆತ ನೀಡಿದೆ. ಆರ್ಥಿಕತೆಯ ಆಧಾರಸ್ತಂಭಗಳು ಹಿನ್ನಡೆ ಅನುಭವಿಸಿವೆ. ಈ ಪರಿಸ್ಥಿತಿಯಲ್ಲಿ ಆರ್ಥಿಕತೆಯ ಸುಧಾರಣೆ ಹಾಗೂ ಉದ್ಯೋಗಾವಕಾಶ ಕ್ಷೇತ್ರಗಳತ್ತ ಒತ್ತು ನೀಡುವುದು ಅವಶ್ಯ. ಐಟಿಬಿಟಿ ಗಣನೀಯ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವ ಕ್ಷೇತ್ರ. ದೇಶಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿದೇಶಿ ವಿನಿಮಯವನ್ನು ತರುತ್ತಿದೆ. ಸದ್ಯಕ್ಕೆ ಸ್ವಲ್ಪ ಸ್ಲೋಡೌನ್ ಇದೆಯಾದರೂ ವ್ಯವಹಾರಗಳು ಹೆಚ್ಚು ಡಿಜಿಟಿಲೀಕರಣದತ್ತ ಪರಿವರ್ತನೆಗೊಳ್ಳುವುದು ಅನಿವಾರ್ಯ ಎನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ವೇಗವನ್ನು ಪಡೆದುಕೊಳ್ಳಲಿದೆ.
Related Articles
Advertisement
ಬೆಂಗಳೂರು ಬಿಟ್ಟರೆ ರಾಜ್ಯದ 2ನೇ ಐಟಿ ಹಬ್ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶಗಳನ್ನು ಮಂಗಳೂರು ಹೊಂದಿದೆ. ಇನ್ಫೋಸಿಸ್, ಕಾಗ್°ನಿಜೆಂಟ್ ಗ್ಲೋಬಲ್ ಸರ್ವಿಸಸ್ ಪ್ರೈ.ಲಿ., ದಿಯಾ ಸಿಸ್ಟಮ್ಸ್ ಪ್ರೈ.ಲಿ., ಎಂಸೋರ್ಸ್ ಲಿ., ಎಂಪಾಸಿಸ್, ಇನ್‌ವೆಂಜರ್ ಟೆಕ್ನಾಲಜೀಸ್ ಪ್ರೈ.ಲಿ., ಬೋಳಾಸ್ ಇಂಟೆಲ್ಲಿ ಸೊಲ್ಯೂಶನ್ ಪ್ರೈ.ಲಿ., ಅಟ್ಲಾಂಟಿಕ್ ಡಾಟಾ ಬ್ಯೂರೋ ಸರ್ವಿಸಸ್ ಪ್ರೈ.ಲಿ. ಮುಂತಾದವುಗಳು ಮಂಗಳೂರಿನ ಪ್ರಮುಖ ಐಟಿ ರಫ್ತು ಕಂಪೆನಿಗಳಾಗಿವೆ. ಮುಡಿಪು ಪ್ರದೇಶದಲ್ಲಿ ಇನ್ಫೋಸಿಸ್ ವಿಶಾಲ ಮತ್ತು ಸುಸಜ್ಜಿತ ಘಟಕವನ್ನು ಹೊಂದಿದೆ.
ಬೆಂಗಳೂರಿಗೆ ಹೋಲಿಸಿದರೆ ಮಂಗಳೂರಿ ನಲ್ಲಿ ಮಾನವ ಸಂಪನ್ಮೂಲ ವೆಚ್ಚ ( ವೇತನ ಹಾಗೂ ಇತರ ಸವಲತ್ತುಗಳು) ಶೇ.30ರಷ್ಟು ಕಡಿಮೆ. ಉತ್ತಮ ಟೆಲಿಕಾಂ ಸೌಲಭ್ಯಗಳು, ಡಾಟಾ ಕಮ್ಯೂನಿಕೇಶನ್ ಸೌಲಭ್ಯಗಳಿವೆ. ವಿಮಾನ ನಿಲ್ದಾಣ, ರೈಲು ,ರಸ್ತೆ ಸೇರಿದಂತೆ ಉತ್ತಮ ಸಂಚಾರ ಸೌಕರ್ಯಗಳಿವೆ. ಐಟಿ ಉದ್ಯಮಗಳಿಗೆ ಉತ್ತೇಜನ ನೀಡಲು ಸಾಫ್ಟ್‌ವೇರ್ ಪಾರ್ಕ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಕೇಂದ್ರ ಕಾರ್ಯಾಚರಿಸುತ್ತಿದೆ.
ವಸ್ತುಸ್ಥಿತಿಐಟಿ ಕ್ಷೇತ್ರದ ಪರಿಣಿತರು ಮಂಗಳೂರಿನತ್ತ ಆಕರ್ಷಿಸುವ ನಿಟ್ಟಿನಲ್ಲಿ ಐಟಿ ಇಕೋ ವ್ಯವಸ್ಥೆ ಹಾಗೂ ಐಟಿ ಪಾರ್ಕ್ ಸ್ಥಾಪನೆಗೊಳ್ಳಬೇಕಿದೆ. ಮಂಗಳೂರಿನ ಮೇರಿಹಿಲ್ ಕಿಯೊನಿಕ್ಸ್‌ಗೆ ಸೇರಿದ ಜಾಗವಿದೆ. ಇಲ್ಲಿ ಐಟಿ ಪಾರ್ಕ್‌ನ್ನು ಸ್ಥಾಪಿಸುವ ಪ್ರಸ್ತಾವ ರೂಪುಗೊಳ್ಳುತ್ತಿದೆ. ನಮ್ಮ ಜಿಲ್ಲೆಯವರಾದ ಹರಿಕೃಷ್ಣ ಬಂಟ್ವಾಳ ಪ್ರಸ್ತುತ ಕಿಯೋನಿಕ್ಸ್ ಅಧ್ಯಕ್ಷರಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳಬಹುದು. ಐಟಿ ಪಾರ್ಕ್ ಸ್ಥಾಪನೆಯಾದರೆ ಇಲ್ಲಿ ಆನೇಕ ಐಟಿ ಕಂಪೆನಿಗಳಿಗೆ ತಮ್ಮ ಘಟಕಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಆಗಬೇಕಾಗಿರುವುದು
ಮಂಗಳೂರಿನಲ್ಲಿ ಐಟಿ ಇಕೋ ವ್ಯವಸ್ಥೆ ಬೆಳೆದರೆ ಪ್ರಮುಖ ಕಂಪೆನಿಗಳು ಐಟಿ ಉಪಕೇಂದ್ರಗಳಲ್ಲಿ ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಮಂಗಳೂರಿನಲ್ಲಿ ತಮ್ಮ ಉಪಕಚೇರಿಗಳನ್ನು ಸ್ಥಾಪಿಸಿ ಐಟಿ ತಂತ್ರಜ್ಞರನ್ನು ಇಲ್ಲಿ ನಿಯುಕ್ತಿಗೊಳಿಸಲು ಅನುಕೂಲವಾಗುತ್ತದೆ.
ಇದು ಸಾಧ್ಯವಾಗಬೇಕಾದರೆ ಇಲ್ಲಿ ಅತ್ಯುತ್ತಮ ನೆಟ್‌ವರ್ಕ್ ಸೌಲಭ್ಯ, ಹೆಚ್ಚು ಸಾಮರ್ಥ್ಯದ ಬ್ಯಾಂಡ್‌ವಿಡ್¤ ಸೌಲಭ್ಯ, ಅಡೆತಡೆ ಇಲ್ಲದ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಪ್ರಸ್ತುತ ಐಟಿ.ಕಾಂ. ಮುಂತಾದ ಐಟಿ ಸಮಾವೇಶಗಳನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತದೆ. ಇವುಗಳನ್ನು ಮಂಗಳೂರಿ ನಲ್ಲೂ ನಡೆಸುವ ಬಗ್ಗೆ ಗಮನ ಹರಿಸಬೇಕು. ಐಟಿ ಇಕೋ ಸಿಸ್ಟಂ ಅಗತ್ಯ
ಮಂಗಳೂರಿನಲ್ಲಿ ಐಟಿ ಉದ್ಯಮಗಳಿಗೆ ಪೂರಕ ವಾತಾವರಣವಿದೆ ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಇದಕ್ಕೆ ಜಿಲ್ಲೆಯಲ್ಲಿ ಐಟಿ ಇಕೋ ಸಿಸ್ಟಂ ವ್ಯವಸ್ಥೆ ರೂಪುಗೊಳ್ಳಬೇಕಿದೆ. ಐಟಿ ಪಾರ್ಕ್ ಸ್ಥಾಪನೆ ಮಾಡಬೇಕು ಎಂಬುದಾಗಿ ಹಲವು ವರ್ಷಗಳಿಂದ ಬೇಡಿಕೆ. ಇದೆ. ಇದು ಸ್ಥಾಪನೆಯಾದರೆ ಐಟಿ ಉದ್ಯಮಗಳಿಗೆ ಅವಶ್ಯವಿರುವ ಮೂಲಸೌಕರ್ಯಗಳು ಬರಲು ಸಾಧ್ಯವಾಗುತ್ತದೆ. ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಬೇಕು.
– ಕಿರಣ್‌ಚಂದ್, ಕೆಸಿಸಿಐ ಐಟಿ ಉಪಸಮಿತಿ ಅಧ್ಯಕ್ಷರು ಅಂಕಿ ಅಂಶ
ಮಂಗಳೂರಿನಲ್ಲಿ ಐಟಿ ಕಂಪೆನಿ 110
ಉದ್ಯೋಗಿಗಳು (ಅಂದಾಜು) 12,000′
ಐಟಿ ಎಸ್‌ಇಝಡ್ 1 ಸರಕಾರದಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐಟಿ ಉದ್ಯಮಗಳಿಗೆ ಉತ್ತಮ ಅವಕಾಶವಿದೆ. ಇದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಐಟಿ ಸ್ನೇಹಿ ವ್ಯವಸ್ಥೆ ರೂಪುಗೊಳ್ಳಬೇಕು. ಸರಕಾರ ಹಲವಾರು ವರ್ಷಗಳಿಂದ ಮಂಗಳೂರಿನಲ್ಲಿ ಐಟಿ ಪಾರ್ಕ್ ಪ್ರಸ್ತಾವ ಮಾಡುತ್ತ ಬಂದಿದೆ. ಪ್ರಸ್ತುತ ಜಿಲ್ಲೆಯಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಯ ನಿಟ್ಟಿನಲ್ಲಿ ಈ ಪ್ರಸ್ತಾವವನ್ನು ಕಾರ್ಯಗತಗೊಳಿಸಲು ಕ್ರಮ ವಹಿಸಬೇಕು. ಮಂಗಳೂರಿನಲ್ಲಿ ಐಟಿ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವುಗಳಿಗೆ ನಿರ್ದಿಷ್ಟ ಅವಧಿಯವರೆಗೆ ತೆರಿಗೆ ರಜೆ ಸೌಲಭ್ಯ ನೀಡಬೇಕು. ಇದರಿಂದ ಹೆಚ್ಚು ಐಟಿ ಉದ್ಯಮಗಳು ಮಂಗಳೂರಿಗೆ ಬರಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಇಂಟರ್‌ನೆಟ್ ಬ್ಯಾಂಡ್‌ವಿಡ್¤ ಸಾಮರ್ಥ್ಯವನ್ನು ಹೆಚ್ಚಿಸಬೇಕು ಹಾಗೂ ಇನ್ನಷ್ಟು ಸೌಲಭ್ಯವನ್ನು ಅಳವಡಿಸಬೇಕು. ಇದರಿಂದಾಗಿ ಐಟಿ ಕಂಪೆನಿಗಳಿಗೆ ವರ್ಕ್ ಫ್ರಂ ಹೋಂ ವ್ಯವಸ್ಥೆಯನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ವಿದೇಶಗಳಿಗೆ ರಫ್ತು ಮಾಡುವ ಸಣ್ಣ ಐಟಿ ಕಂಪೆನಿಗಳಿಗೆ ಮಾರ್ಗದರ್ಶನ, ಉತ್ತೇಜನ , ವಿದೇಶಿ ಹಣ ವಿನಿಮಯ ಮುಂತಾದುವುಗಳಿಗೆ ನೆರವು ನೀಡಲು ಉಪ ಕಚೇರಿ ಮಂಗಳೂರಿನಲ್ಲಿ ಸ್ಥಾಪನೆಯಾದರೆ ಹೆಚ್ಚು ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಮಂಗಳೂರು ನಗರ ಐಟಿ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ನಾಸ್ಕಾಂ ಮಂಗಳೂರಿಗೂ ಆದ್ಯತೆ ನೀಡಬೇಕು. ಐಟಿ.ಕಾಂನಂತಹ ಸಮಾವೇಶಗಳನ್ನು ಮಂಗಳೂರಿನಲ್ಲೂ ಆಯೋಜಿಸಬೇಕು. ಉದಯವಾಣಿ ಅಧ್ಯಯನ ತಂಡ