ಹೊಸದಿಲ್ಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ(ಪಿಎಂಎವೈ)ಯಡಿ ಮೊದಲ ಬಾರಿಗೆ ಮನೆ ಅಥವಾ ಅಪಾರ್ಟ್ ಮೆಂಟ್ ಖರೀದಿಗೆ ಮುಂದಾಗುವವರು ತಮ್ಮ ಸಾಲದ ಮೇಲಿನ ಸಬ್ಸಿಡಿಗಾಗಿ ಬ್ಯಾಂಕ್ ಗಳ ಶಾಖೆ ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಿಲ್ಲ. ಇದಕ್ಕಾಗಿ ಸಾಲ ಮಂಜೂರಾತಿಯ ವಿಧಾನ ವನ್ನು ಕೊಂಚ ಮಾರ್ಪಾಟು ಮಾಡಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ಈ ಮೂಲಕ ಈ ಯೋಜನೆಯು ಹೆಚ್ಚೆಚ್ಚು ಜನರನ್ನು ತಲುಪು ವಂತೆ ಮಾಡುವ ಉದ್ದೇಶ ಹೊಂದಲಾಗಿದೆ.
ಏನಿದು ಬದಲಾವಣೆ?
ಪಿಎಂಎವೈ ಅಡಿಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಲಿರುವ ವ್ಯಕ್ತಿಯ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಯಿಂದ ಕೇಂದ್ರ ಪಡೆಯ ಲಿದೆ. ಅದರಂತೆ, ಅರ್ಜಿದಾರನು ಆದಾಯ ತೆರಿಗೆ ಇಲಾಖೆಯ ವತಿಯಿಂದ ಒಂದು ಪ್ರಮಾಣ ಪತ್ರ ಪಡೆಯಬೇಕಿರುತ್ತದೆ. ಈ ಪ್ರಮಾಣ ಪತ್ರವನ್ನು ಬ್ಯಾಂಕಿನಲ್ಲಿ ಸಲ್ಲಿಸಿ ದರೆ ಸಾಕು. ಸಬ್ಸಿಡಿಯುಕ್ತ ಸಾಲ ಬೇಗನೆ ಮಂಜೂರಾಗುತ್ತದೆ. ಇಂಥದ್ದೊಂದು ವ್ಯವಸ್ಥೆ ಯನ್ನು ಜಾರಿಗೆ ತರಲು ಈಗಾಗಲೇ ವಿತ್ತ ಸಚಿವಾಲಯ ಮಾತುಕತೆ ನಡೆಸಿದೆ ಎಂದು “ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
2018ರ ಡಿಸೆಂಬರ್‌ವರೆಗೆ 3.4 ಲಕ್ಷ ಜನರು ಮಾತ್ರ ಪಿಎಂಎವೈ ಯೋಜನೆಯ ಲಾಭ ಪಡೆ ದಿದ್ದಾರೆ. ಸದ್ಯಕ್ಕೆ ವಾರ್ಷಿಕ 18 ಲಕ್ಷ ರೂ. ಆದಾಯವಿರುವ ವ್ಯಕ್ತಿಗಳಿಗೆ 20 ವರ್ಷ ಗಳ ಮರು ಸಂದಾಯ ಅವಧಿಗೆ ತೆಗೆದು ಕೊಳ್ಳಲಾಗುವ ಸಾಲದ ಮೇಲೆ 6 ಲಕ್ಷ ರೂ.ಗಳವರೆಗಿನ ಸಬ್ಸಿಡಿ ಇದೆ. ಸಾಲ ಮಂಜೂ ರಾದ ಕೂಡಲೇ 2.5 ಲಕ್ಷ ರೂ.ಗಳಿಂದ 2.70 ಲಕ್ಷ ರೂ.ಗಳವರೆಗೆ ಆರಂಭಿಕ ಸಬ್ಸಿಡಿ ನೀಡಲಾಗುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಲ್ಲಿ ಮಾರ್ಪಾಟು ತರಲು ಕೇಂದ್ರದ ಚಿಂತನೆ
ಐಟಿ ಇಲಾಖೆ ನೀಡುವ ಪ್ರಮಾಣ ಪತ್ರದ ಆಧಾರದ ಮೇಲೆ ಸಾಲದ ಸಬ್ಸಿಡಿ ನಿರ್ಧಾರ
ಯೋಜನೆಯ ಲಾಭವನ್ನು ಹೆಚ್ಚು ಜನರಿಗೆ ವಿಸ್ತರಿಸಲೂ ಇದರಿಂದ ಅನುಕೂಲ