Advertisement

ಒಂದು ಮತದಿಂದಲೂ ಬದಲಾವಣೆ ಸಾಧ್ಯ

10:20 PM Mar 25, 2019 | sudhir |

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ. 
ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

Advertisement

ಉತ್ತಮ ಭವಿಷ್ಯಕ್ಕಾಗಿ ಮತದಾನ
ನಮಗಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿ ಗೆ ಒತ್ತುಕೊಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾನದಿಂದ ಸಾಧ್ಯ. ನಾವೆಲ್ಲರೂ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಕ್ಷೇತ್ರದ, ದೇಶದ ಅಭಿವೃದ್ಧಿಗೂ ಕಾರಣೀಕರ್ತರಾಗಬೇಕಾಗಿದೆ. ಉತ್ತಮ ಪ್ರತಿನಿಧಿಗಾಗಿ, ದೇಶದ ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಿ.
– ಪ್ರದೀಪ್‌, ರಿಚರ್ಡ್‌ ಅಲ್ಮೇಡಾ ಪ್ರಥಮ ದರ್ಜೆ ಕಾಲೇಜು, ನಾವುಂದ

ದೇಶದ ಅಭಿವೃದ್ಧಿಯಲ್ಲಿ ಸಹಭಾಗಿತ್ವ
ಮತದಾನ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾನವೇ ಮಾನದಂಡ. ದೇಶದ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಪಡೆಯಲು ನಮಗೆ ಇದೊಂದು ಸುವರ್ಣವಕಾಶ. ಮತ ಹಾಕಲು ಹಿಂಜರಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಂದಾಗುವ ಸಮಸ್ಯೆಗಳಿಗೆ ನಾವೇ ಹೊಣೆಯಾಗುತ್ತೇವೆ.
– ವಿಶ್ವನಾಥ ಮೊಗವೀರ, ರಿಚರ್ಡ್‌ ಅಲ್ಮೇಡಾ ಪ್ರಥಮ ದರ್ಜೆ ಕಾಲೇಜು, ನಾವುಂದ

ನನ್ನ ಮತ ನನ್ನ ದೇಶಕ್ಕೆ
ಅವರವರ ಭವಿಷ್ಯ ಅವರ ಕೈಯÇÉೇ ಇರುತ್ತದೆ ಎನ್ನುವುದು ಹಿರಿಯರ ಮಾತು. ಹಾಗೆಯೇ ಈ ದೇಶದ ಭವಿಷ್ಯ ಒಬ್ಬ ಶ್ರೇಷ್ಠ ನಾಯಕನಿಂದ ಮಾತ್ರ ಮುನ್ನಡೆಯಲು ಸಾಧ್ಯ. ನಮ್ಮ ಮತ ಕೇವಲ ಆ ಶ್ರೇಷ್ಠ ನಾಯಕನನ್ನು ಗೆಲ್ಲಿಸುವುದಲ್ಲದೆ ನಮ್ಮ ದೇಶವನ್ನು ಮುನ್ನಡೆಸುವುದಾದರೆ ನಾವು ತಪ್ಪದೆ ಮತ ಚಲಾಯಿಸಲೇ ಬೇಕು. ನಮ್ಮ ಮುಂದಿನ ಪೀಳಿಗೆಗೆ ಅತ್ಯುತ್ತಮ ದೇಶವ ಕಟ್ಟಿಕೊಡಲು ನಾವು ಸಿದ್ಧªರಾಗಿದ್ದೇವೆ.
– ಅನಂತ್‌ರಾಜ್‌, ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ

ಮತದಾನ ವರವಿದ್ದಂತೆ
ಪ್ರತಿ ಪ್ರಜೆಗೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸದವಕಾಶವಿದು. ನಮ್ಮ ಒಳಿತನ್ನು, ಉಜ್ವಲ ಭವಿಷ್ಯವನ್ನು ಬಯಸುವ ಜನಪರ ನಾಯಕರನ್ನು ನಾವೇ ಆರಿಸಿಕೊಳ್ಳಲು ಮತದಾನ ವರವಿದ್ದಂತೆ. ಈಗಿರುವ ಯಾವುದೇ ವ್ಯಕ್ತಿಯನ್ನು ಅಧಿಕಾರಕ್ಕೆ ಸಮನಾಗಿಲ್ಲ ಎಂದೆನಿಸಿದರೆ ನೋಟಾ ಎಂಬ ಆಯ್ಕೆಗಾದರೂ ಮತದಾನ ಮಾಡಿ.
– ಪವನ್‌ ಶೆಟ್ಟಿ, ಉಪೇಂದ್ರ ಪೈ ಕಾಲೇಜು ಉಡುಪಿ

Advertisement

ಸಮರ್ಥ ನಾಯಕನಿಗಾಗಿ ಮತದಾನ
ಭಾರತ ಅಮೂಲ್ಯವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಇಷ್ಟು ಕೋಟಿಜನ ಒಮ್ಮೆಲೆ ಮತಚಲಾಯಿಸುವ ವ್ಯವಸ್ಥೆ ಇನ್ನಾವ ದೇಶದಲ್ಲಿಯೂ ಕಾಣಸಿಗುವುದಿÇÉಾ.. ಆದ್ದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಗೌರವವನ್ನು ಹೆಚ್ಚಿಸಿ, ದೇಶದ ಗಡಿರಕ್ಷಣೆ ಮತ್ತು ಸೈನಿಕರ ಬಗ್ಗೆ ಗಮನಹರಿಸುವ, ಸ್ವಜನ ಪಕ್ಷಪಾತ ಇಲ್ಲದ ಪ್ರತಿಯೊಬ್ಬ ಪ್ರಜೆಗೂ ಹಿತವಾಗುವಂತೆ ರಾಜ್ಯಾಭಾರ ಮಾಡುವ, ಸಮರ್ಥ ನಾಯಕನನ್ನು ಆರಿಸಬೇಕು.
– ಸುಶ್ಮಾ ಕೆ.ಸಿ., ಉಪೇಂದ್ರ ಪೈ ಸ್ಮಾರಕ ಕಾಲೇಜು

ಎಲ್ಲ ದಾನಗಳಂತೆ ಮತದಾನವೂ ಶ್ರೇಷ್ಠ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ವ್ಯಕ್ತಿಯ ಅವಿಭಾಜ್ಯ ಅಂಗವಾಗಿದೆ. ದೇಶದ ಅಭಿವೃದ್ಧಿಗೆ ತನ್ನ ಹಕ್ಕನ್ನು ಚಲಾಯಿಸುವ ಏಕೈಕ ಅವಕಾಶ ಇದಾಗಿದೆ. ಮತದಾನ ಕೇವಲ ಹಕ್ಕುಗಳಲ್ಲಿ ಮಾತ್ರ ಸೀಮಿತವಾಗಿರದೇ ಪ್ರತಿಯೊಬ್ಬ ಪೌರನ ಕರ್ತವ್ಯ ಕೂಡ ಆಗಿರುತ್ತದೆ. ರಕ್ತದಾನ, ನೇತ್ರದಾನ, ಅನ್ನದಾನ, ವಿದ್ಯಾದಾನಗಳಂತೆ “ಮತದಾನ’ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ.
– ರಾಜು ಭಟ್‌, ಉಪೇಂದ್ರ ಪೈ ಸ್ಮಾರಕ ಕಾಲೇಜ್‌ ಉಡುಪಿ

ಒಂದು ಮತದಿಂದಲೂ ಬದಲಾವಣೆ ಸಾಧ್ಯ
ನನ್ನ ಒಂದು ಮತ ಯಾವ ಬದಲಾವಣೆಯೂ ತರದು ಎಂದು ಯೋಚಿಸಿದರೆ, ನನ್ನ ಪರಿಸರ, ನನ್ನ ಊರು, ತಾಲೂಕು ಹೀಗೆ ಎಲ್ಲರೂ ಯೋಚಿಸಿದರೆ, ಮತದಾನವು ಬೂತ್‌ಗಳ ಭೂತವಾಗಿ ಬಿಡಬಹುದು, ಹನಿ ಹನಿ ಸೇರಿದರೆ ಹಳ್ಳದಂತೆ ಒಂದೊಂದು ಮತವೂ ಅತ್ಯಮೂಲ್ಯ. ಯಾವುದೇ ಆಮಿಷಕ್ಕೆ ಬಲಿಯಾಗದೆ ನಮ್ಮ ಮತವನ್ನು ಮಾಡಿ ಸಾರ್ಥಕತೆ ಹೊಂದೋಣ.
– ದರ್ಶನ್‌ ಶೆಟ್ಟಿ, ಪೂರ್ಣಪ್ರಜ್ಞ ಕಾಲೇಜು, ಉಡುಪಿ

ಉತ್ತಮ ನಾಯಕನಿಗಾಗಿ ನನ್ನ ಮತ
ನಮ್ಮ ದೇಶವು ಅಪಾರವಾದ ಯುವಶಕ್ತಿಯನ್ನು ಹೊಂದಿದ್ದು ಯುವಜನತೆಯು ಮುಂಬರುವ ಚುನಾವಣೆಯಲ್ಲಿ ಸಮರ್ಥ ನಾಯಕನನ್ನು ಆರಿಸಬೇಕು. ನಿಸ್ವಾರ್ಥತೆ ಯಿಂದ ದೇಶದ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಬೆಳವಣಿಗೆಯನ್ನು ಬಯಸುವ ನಾಯಕನನ್ನು ಆರಿಸೋಣ.
– ಪುನೀತ್‌ ಕುಮಾರ್‌ ಕೆ., ಉಪೇಂದ್ರ ಪೈ ಸ್ಮಾರಕ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next