Advertisement

Bantwal ಬೀಡಿ ಉದ್ಯಮಿಯ ಮನೆಗೆ ಐಟಿ ದಾಳಿ ?

11:35 PM Oct 10, 2023 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕಿನ ಪೆರ್ನೆಯ ಬೀಡಿ ಉದ್ಯಮಿಯೊಬ್ಬರ ಮನೆಯಲ್ಲಿ ಮಂಗಳವಾರ ಹತ್ತಾರು ಸರಕಾರಿ ವಾಹನಗಳು ಕಂಡುಬಂದಿದ್ದು, ಉದ್ಯಮಿಯ ಮನೆಗೆ ಐಟಿ ದಾಳಿಯಾಗಿದೆ ಎನ್ನಲಾಗಿದ್ದರೂ ಈ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

Advertisement

ರಾ.ಹೆ.75ರ ಪೆರ್ನೆಯ ಕಡಂಬು ಬಳಿ ಹೆದ್ದಾರಿ ಅಂಚಿನಲ್ಲೇ ಉದ್ಯಮಿಯ ಮನೆ ಇದ್ದು, ಅನಿತಾ ಬೀಡಿ ಮಾಲಕ ಮಹಮ್ಮದ್‌ ಆಲಿಯವರ ಮನೆಗೆ ಅಧಿಕಾರಿಗಳು ತೆರಳಿ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿದ್ದಾರೆ, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆಯೇ, ತೆರಿಗೆ ವಂಚನೆಯ ಆರೋಪಗಳಿವೆಯೇ ಎಂಬುದು ತಿಳಿದುಬಂದಿಲ್ಲ.

ಅಧಿಕಾರಿಗಳ ಅಧಿಕೃತ ಹೇಳಿಕೆಯ ಬಳಿಕವೇ ಸತ್ಯಾಂಶ ಹೊರ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next