Advertisement
ಆದಾಯ ತೆರಿಗೆ ಇಲಾಖೆ ಕೈಗೊಂಡಿರುವ “ಆಪರೇಷನ್ ಕ್ಲೀನ್ ಮನಿ’ ವ್ಯಾಪ್ತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಿನಕರನ್‌ಗೆ ಸೇರಿದ ತೋಟದ ಮನೆ, ತಮಿಳುನಾಡಿನ ಹೆಚ್ಚಿನ ಭಾಗ, ಹೈದರಾಬಾದ್, ಹೊಸದಿಲ್ಲಿ ಮತ್ತು ಬೆಂಗಳೂರಿನಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಜಯಾ ಟಿವಿ ಮತ್ತು ಸಹವರ್ತಿ ಸಂಸ್ಥೆ, ಜಾಝ್ ಸಿನಿಮಾಸ್, ಮಿದಾಸ್ ಡಿಸ್ಟಿಲರೀಸ್, ಚಿನ್ನಾಭರಣ ಮಳಿಗೆ ಮತ್ತು ಇತರ ಸಂಸ್ಥೆಗಳಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಸ್ಥೆಗಳು ದಿ| ಜಯಲಲಿತಾ ಹೆಸರಲ್ಲಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದಿನಕರನ್, ದಾಳಿಯ ಹಿಂದೆ ಸಂಚು ಇದೆ. ಇಂಥ ಕ್ರಮಗಳ ಮೂಲಕ ತಮ್ಮನ್ನು ಮತ್ತು ಪಕ್ಷವನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಚೆನ್ನೈಯಲ್ಲಿರುವ ತಮ್ಮ ನಿವಾಸದ ಮೇಲೆ ದಾಳಿಯಾಗಿಲ್ಲ. ಆದರೆ ಪುದುಚೇರಿ ಸಮೀಪದ ತೋಟದ ಮನೆಯಲ್ಲಿ ಶೋಧ ನಡೆದಿದೆ. ಇದೆಲ್ಲ ಕೇಂದ್ರ ಚಿತಾವಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಯಲಲಿತಾ ಸಾವಿನ ಅನಂತರ ಓ.ಪನ್ನೀರ್ ಸೆಲ್ವಂ, ವಿ.ಕೆ. ಶಶಿಕಲಾ ಬಣಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ “ಎಐಡಿಎಂಕೆ ಪಕ್ಷದ ಚಿಹ್ನೆ’ ಪ್ರಕರಣದ ವಿಚಾರಣೆಯು ಅಂತ್ಯಗೊಂಡಿದ್ದು, ಶೀಘ್ರದಲ್ಲೇ ಚಿಹ್ನೆ ಯಾವ ಬಣಕ್ಕೆ ಸೇರಬೇಕು ಎಂಬ ಬಗ್ಗೆ ತೀರ್ಪು ಪ್ರಕಟಿಸಲಾಗುವುದು
ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.