ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿ ವೇಳೆ ಬರೋಬ್ಬರಿ 750 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಂಗಳವಾರ ತಿಳಿಸಿದೆ.
ರಾಜ್ಯದ ಮೂವರು ಗುತ್ತಿಗೆದಾರರು 750 ಕೋಟಿ ರೂ.ಗಳ ಅಕ್ರಮ ಆಸ್ತಿ ಹೊಂದಿದ್ದು, ಈ ಪೈಕಿ 487 ಕೋಟಿ ರೂ. ಅಘೋಷಿತ ಆಸ್ತಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಳಿ ಸಂದರ್ಭದಲ್ಲಿ ದಾಖಲೆಗಳಿಲ್ಲದ 4.69 ಕೋಟಿ ರೂ. ಹಾಗೂ 8.67 ಕೋಟಿ ರೂ. ಮೌಲ್ಯದ ಚಿನ್ನಾಭರಣ, 29.83 ಲಕ್ಷ ರೂ. ಮೌಲ್ಯದ ಬೆಳ್ಳಿ, ಡಿಜಿಟಲ್ ಹಾಗೂ ಇತರೆ ದಾಖ ಲೆಗಳ ಸಾಕ್ಷ್ಯಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ:ಕಲಬುರಗಿ: ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಕಂಪಿಸಿದ ಭೂಮಿ
ಮಾಜಿ ಸಿಎಂ ಯಡಿಯೂರಪ್ಪ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಉಮೇಶ್ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಆಪ್ತ ಅರವಿಂದ ಹಾಗೂ ಕೆಲವು ಗುತ್ತಿಗೆದಾರರು, ಲೆಕ್ಕ ಪರಿಶೋಧಕರು ಮತ್ತಿತರರ ಮನೆ, ಕಚೇರಿಗಳಿಗೆ ಐಟಿ ದಾಳಿ ನಡೆಸಿತ್ತು. ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ನಾಲ್ಕು ದಿನ ದಾಳಿ, ಪರಿಶೀಲನೆ ನಡೆದಿತ್ತು.