Advertisement
ಶಿವಮೊಗ್ಗ ಸಚಿವ ಈಶ್ವರಪ್ಪ ಮಾತನಾಡಿ, ಮೈತ್ರಿ ಹಾಗೂ ಹಿಂದಿನ ಕಾಂಗ್ರೆಸ್ ಸರ್ಕಾರ ಜನರಿಗೆ ಸ್ಪಂದಿಸಿಲ್ಲ ಎನ್ನೋದಕ್ಕೆ ಕಳೆದ ಬಾರಿಯ ಚುನಾವಣಾ ಫಲಿತಾಂಶವೇ ಸಾಕ್ಷಿ. ಮೈತ್ರಿ ಸರ್ಕಾರವನ್ನೇ ತಿರಸ್ಕರಿಸಿ, ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ನಾನು ಶಾಸಕ ಆಗ್ತಿನಿ, ಸಚಿವನಾಗ್ತಿನಿ, ಉಪ ಮುಖ್ಯಮಂತ್ರಿಯಾಗ್ತಿನಿ ಅಂತಾ ಕನಸಿನಲ್ಲೂ ಯೋಚಿಸಿರಲಿಲ್ಲ. ಗ್ರಾಮೀಣಾಭಿವೃದ್ಧಿಯಂತಹ ದೊಡ್ಡ ಇಲಾಖೆ ನನಗೀಗ ದೊರೆತಿದೆ ಎಂದರು.
ಇಲಾಖೆ ಮೂಲಕ ರಾಜ್ಯದ ಜನರಿಗೆ ಯೋಜನೆಗಳ ಮೂಲಕ ಕೊಡುಗೆ ನೀಡಬೇಕೆಂದು ಚರ್ಚಿಸಿದ್ದೇನೆ. ಸಚಿವ, ಉಪಮುಖ್ಯಮಂತ್ರಿ ಆದಾಗಲೂ ನನಗೆ ಹೆಚ್ಚು ಭಯವಾಗಿಲ್ಲ ಆದ್ರೆ, ಈ ಬಾರಿ ಗ್ರಾಮೀಣಾಭಿವೃದ್ಧಿ ಸಚಿವನಾದ ಮೇಲೆ ಭಯವಾಗುತ್ತಿದೆ. ನನ್ನ ಮನೆ, ಕಚೇರಿ, ಬೆಂಗಳೂರು ಮನೆಗೆ ಜನ ಸಾಗರವೇ ಹರಿದು ಬರುತ್ತಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುತ್ತಿದ್ದಾರೆ. ಜನರ ಸಂಕಷ್ಟಗಳನ್ನು ಸಾಧ್ಯವಾದಷ್ಟು ನಾನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.