Advertisement

ವಿಜಯಪುರ: ಸಾಗುವಳಿ ಹಕ್ಕುಪತ್ರ ವಿತರಿಸಿ

06:36 PM Feb 04, 2021 | Nagendra Trasi |

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮಸ್ಥರಿಗೆ ಭೂಮಿ ಸಾಗುವಳಿ ಆಸ್ತಿ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್‌ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಜಂಟಿ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಭೀಮಶಿ ಕಲಾದಗಿ ಮಾತನಾಡಿ, ಬಸವನಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ಸ.ನಂ. 221 ಕ್ಷೇತ್ರ 109 ಎಕರೆ 34 ಗುಂ. ಹಾಗೂ ಸ.ನಂ. 310 ಕ್ಷೇತ್ರ 125 ಎಕರೆ ವಂದಾಲ ಗ್ರಾಮ ಈ ಪ್ರಕಾರ ಆಸ್ತಿಗಳಿವೆ. ಜಮೀನಿನಲ್ಲಿ ಸುಮಾರು ವರ್ಷಗಳಿಂದ ಕಬಾ ವಹಿವಾಟಿನಿಂದ ಗ್ರಾಮದ ದಲಿತರು ಸಾಗುವಳಿ ಮಾಡುತ್ತ ಬಂದಿದ್ದೇವೆ. ಕಾರಣ ಕಂದಾಯ ಅ ಧಿಕಾರಿಗಳಿಗೆ ಸದರಿ ವಿಷಯ ಪ್ರಯುಕ್ತ ಮನವಿ ಸಲ್ಲಿಸಲಾಗಿದೆ.

ಭೂಮಿ ಉಳುವವನಿಗೆ ಹಕ್ಕು ಪತ್ರ ಕೊಡುವ ಕುರಿತು ಹಲವು ಬಾರಿ ನಾವು ಮನವಿ ಮಾಡಿದ್ದೇವೆ. ಆದರೆ ತಮಗೆ ಆಸ್ತಿ ಮಂಜೂರು ಮಾಡುವ ಅಧಿಕಾರ ಇಲ್ಲ. ಭೂಮಿ ಮಂಜೂರು ಮಾಡಲು ಅವಕಾಶ ಇರುವುದಿಲ್ಲ ಎಂದಿರುವ ಬಸವನಬಾಗೇವಾಡಿ ತಹಶೀಲ್ದಾರ್‌ ರು 18-1-2021ರಂದು ಹಿಂಬರಹ ನೀಡಿದ್ದಾರೆ ಎಂದು ದೂರಿದರು. ಭಾರತೀಯ ದಲಿತ ಪ್ಯಾಂಥರ್‌ ಜಿಲ್ಲಾಧ್ಯಕ್ಷ ಬಸವರಾಜ ಗುಡಿಮನಿ ಮಾತನಾಡಿ, ಕರ್ನಾಟಕ ಸರಕಾರ ಭೂಮಿ ಅರಣ್ಯ ಭೂಮಿ ಸಾಗುವಳಿ ಮಾಡುವುದಕ್ಕೆ ಫಾರ್ಮ್ 57 ಎರಡು ಭೂಮಿಗಳಲ್ಲಿ 55 ಜನ ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿದ್ದೇವೆ.

ಸಾಗುವಳಿದಾರರಲ್ಲಿ ಎಲ್ಲರೂ ದಲಿತರೇ ಇದ್ದೇವೆ. ಕರ್ನಾಟಕ ಸರಕಾರ ಕಂದಾಯ ಕಾನೂನು ಪ್ರಕಾರ ಅರಣ್ಯ ಭೂಮಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ಕೊಡಬೇಕು ಎಂದು ಆಗ್ರಹಿಸಿದರು. ಸುಪ್ರೀಂ ಕೋರ್ಟ್‌ ಅರಣ್ಯ ಭೂಮಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ಕೊಡುವಂತೆ ಅದೇಶಿಸಿದೆ. ಇದೀಗ ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದು, ನಮ್ಮ ದಾಖಲೆ ಪತ್ರ ಪರಿಶೀಲಿಸಬೇಕು. ಕೂಡಲೇ ಎಲ್ಲ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಿ ನಮಗೆ ಅನುಕೂಲ ಕಲ್ಪಿಸಿಕೊಡಲು ಒತ್ತಾಯಿಸಿದರು.

ಲಕ್ಷ್ಮಣ ಹಂದ್ರಾಳ, ಶಟ್ಟೆಪ್ಪ ಜೀರಲದಿನ್ನಿ, ಚಂದ್ರಪ್ಪ ಮಾದರ, ನಾಮದೇವ ಬಡಿಗೇರ, ಯಮನಪ್ಪ ಬೋರಲದಿನ್ನಿ, ಮಹಾದೇವಪ್ಪ ತಳವಾರ, ಬಾಳಪ್ಪ ಗುಡಿಮನಿ, ಭೀಮಪ್ಪ ಬಡಿಗೇರ, ಭೀಮವ್ವ ಬಡಿಗೇರ, ಮುಚಖಂಡೆ ತಳವಾರ, ನಿಜವ್ವ ಬಡಿಗೇರ, ಹನುಮವ್ವ ಗುಡಿಮನಿ, ನೀಲವ್ವ ತಳವಾರ, ಶಂಕ್ರವ್ವ ತಳವಾರ, ಬಸಪ್ಪ ವಂದಾಲ, ಸುರೇಖಾ ರಜಪೂತ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next