Advertisement
ಹನಗೋಡಿನ ನಾಡಕಛೇರಿ ಆವರಣದಲ್ಲಿ ಶುಕ್ರವಾರ ನಡೆದ ಅದಾಲತ್‌ಗೆ ಒಟ್ಟು 179ಮಂದಿ ವಿವಿಧ ಪಿಂಚಣಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ್ದರು. ದಾಖಲೆ ಪರಿಶೀಲಿಸಿ ಸ್ಥಳದಲ್ಲೇ 102 ಮಂದಿಗೆ ಆದೇಶ ಪತ್ರ ವಿತರಿಸಲಾಯಿತು. ನಂತರ ಮಾತನಾಡಿದ ಗ್ರೇಡ್-2 ತಹಸೀಲ್ದಾರ್ ನರಸಿಂಹಯ್ಯ ಸರಕಾರದ ಸೂಚನೆ ಮೇರೆಗೆ ಒಂದೇ ಸೂರಿನಡಿ ವಿವಿಧ ಸಲತ್ತುಗಳನ್ನು ನೀಡಲು ಪಿಂಚಣಿ ಅದಾಲತ್ ಆಯೋಜಿಸಲಾಗಿದೆ. ವೃದ್ದಾಪ್ಯ ಹಾಗೂ ಅಂಗವಿಕಲರ ವೇತನ ಮಂಜೂರಾತಿ ಮಾಡುವ ವೇಳೆ ವೈದ್ಯಕೀಯ ದೃಡೀಕರಣ ಪತ್ರ ನೀಡಲೇಬೇಕು. ಅಲ್ಲದೆ ವಿಧವಾ ವೇತನ ಪಡೆಯಲು ಮಕ್ಕಳು ಸೇರಿದಂತೆ ಎಲ್ಲಾ ಸವಲತ್ತು ಹೊಂದಿರುವವರಿಗೆ ಪಿಂಚಣಿ ನೀಡುವಾಗುವುದಿಲ್ಲಾ, ಗ್ರಾಮಲೆಕ್ಕಿಗರು ನೀಡುವ ಧೃಡಿಕರಣ ಪತ್ರವೇ ಅಂತಿಮವಾಗಿರುವುರಿಂದ ಅರ್ಜಿದಾರರು ನಾಡಕಛೇರಿಗೆ ಅರ್ಜಿ ಸಲ್ಲಿಸಿದರೆ ಉಳಿದ ದಾಖತಿಗಳನ್ನು ಒದಗಿಸಿಕೊಂಡು ಪಿಂಚಣಿ ಆದೇಶ ಪತ್ರವಿತರಿಸಬೇಕೆಂಬ ಸರಕಾರದ ಸೂಚನೆ ಇದ್ದು ಕಂದಾಯ ಇಲಾಖೆ ಅಧಿಕಾರಿಗಳು ಆದೇಶವನ್ನು ಪಾಲಿಸಬೇಕೆಂದು ಗ್ರಾಮ ಲೆಕ್ಕಿಗರಿಗೆ ಸೂಚನೆ ನೀಡಲಾಗಿದೆ ಎಂದರು.
Related Articles
Advertisement