ಶಿರಸಿ: ವಿಕೇಂದ್ರೀಕರಣ ವ್ಯವಸ್ಥೆ ಜಾರಿಗೊಳಿಸಿದ ರಾಮಕೃಷ್ಣ ಹೆಗಡೆ ಅವರ ಕನಸಿನ ಕೂಸಾದ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ಆರ್ಥಿಕ ನಿರ್ವಹಣೆಯ ಮಾನದಂಡ ಇಟ್ಟುಕೊಂಡು ರಾಜ್ಯ ಸರಕಾರ ಜಿಲ್ಲಾ ಹಾಗೂ ಗ್ರಾಮ ಪಂಚಾಯತ್‌ಗಳ ಕೊಂಡಿಯಾದ ತಾಲೂಕು ಪಂಚಾಯತ್ ರದ್ದುಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ವಾದ, ವಾಗ್ವಾದ ಕೇಳಿ ಬರತೊಡಗಿದೆ.
ಅನುದಾನ ಕೊಟ್ಟು ಬಲಗೊಳಿಸುವ ಬದಲು, ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೇಕೊಡಲಿ ಏಟು ನೀಡುವುದು ಸರಿಯಲ್ಲ ಎಂಬುದು ಈಗಿನ ವಾದವಾಗಿದೆ. ಹಾಗೆ ನೋಡಿದರೆ ಶಿರಸಿ ತಾಪಂ 32 ಗ್ರಾಮ ಪಂಚಾಯತ್‌ಗಳನ್ನು ನಿರ್ವಹಣೆ ಮಾಡುತ್ತದೆ. ಉದ್ಯೋಗ ಖಾತ್ರಿಯಿಂದ ಹಿಡಿದು ತಾಲೂಕು ಹಂತದ ಗ್ರಾಮೀಣ ಭಾಗದ ಕುಡಿಯುವ ನೀರು, ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಬರುವ ಕೇವಲ ಒಂದು ಕೋಟಿ ರೂ.ಗಳನ್ನು ತನ್ನ 12 ಸದಸ್ಯರಿಗೆ ಹಂಚಿಕೆ ಮಾಡಿ ಮೂಗಿಗೆ ತುಪ್ಪ ಸವರುತ್ತಿದ್ದರೂ ಶಾಸಕರು, ಸಚಿವರಿಗೆ, ಸರಕಾರಕ್ಕೆ ಇಂಥ ಕೆಲಸ-ಕಾಮಗಾರಿಗಳು ಇಡೀ ತಾಲೂಕಿಗೆ ಬೇಕು ಎಂದು ಮನವಿ ಮಾಡುತ್ತ ಸಕ್ರಿಯವಾಗಿದೆ. ಉದ್ಯೋಗ ಖಾತ್ರಿಯಂತಹ ಮಹತ್ವದ ಯೋಜನೆ, ಬಿಸಿಯೂಟದಂತಹ ಯೋಜನೆಗಳನ್ನೂ ಅನುಷ್ಠಾನಗೊಳಿಸಲು ತಾ.ಪಂ. ತನ್ನದೇ ಆದ ಪಾತ್ರ ನಿರ್ವಹಣೆ ಮಾಡುತ್ತಿದೆ.
ಎರಡು ಮೂರು ಪಂಚಾಯತ್‌ಗಳಿಗೆ ಒಬ್ಬರಂತೆ ತಾ.ಪಂ. ಸದಸ್ಯರಿದ್ದರೆ, ಐದಾರು ಪಂಚಾಯ್ತಕ್ಕೆ ಒಬ್ಬ ಜಿ.ಪಂ. ಸದಸ್ಯರು ಇರುತ್ತಾರೆ. ಗ್ರಾ.ಪಂಗಳ ಕಾಮಗಾರಿ ನಿರ್ವಹಣೆ, ವಿವಿಧ ಗ್ರಾ.ಪಂ.ಗಳ ಜೊತೆ ಸಂವಹನ ನಡೆಸುವುದು ತಾಲೂಕು ಹಂತದ ಅಧಿಕಾರಿಗಳಿಂದ ಆಗಬೇಕಾದ ಕಾರ್ಯ ಮಾಡಿಸುವುದು ಇವರ ಕೆಲಸವಾದರೆ, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಜಿಪಂ ಸದಸ್ಯರು ನಿರ್ವಹಣೆ ಮಾಡುತ್ತಾರೆ.
ಈ ಹೊಂದಾಣಿಕೆ ಉಳಿಸಿಕೊಂಡರೆ ಮಾತ್ರ ಸಂವಹನ ಹಾಗೂ ಅಭಿವೃದ್ಧಿಯ ಗುಣಮಟ್ಟ ಸಾಧ್ಯ ಎಂಬುದು ಅನೇಕ ತಾಪಂ ಸದಸ್ಯರ ಅಭಿಮತ.ತಾಪಂ ಇರದೇ ಕೇವಲ ಜಿಪಂ ಹಾಗೂ ಗ್ರಾಪಂ ಉಳಿದರೆ ಈ ಸಂವಹನದ ಕೊರತೆ ಆಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತರಬೇತಿ ನೀಡುವ ಕೇಂದ್ರವಾಗಿ ಗ್ರಾಪಂ ಅದರಿಂದ .ಪಂ., ಹಾಗೂ ಜಿ.ಪಂ. ಆಗಲಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ಪುನರವಸತಿಯಲ್ಲ ಎಂಬ ವಾದವೂ ಬಲವಾಗಿದೆ. ತಾ.ಪಂ. ಉಳಿಸಿ, ಅನುದಾನ ಕೊಡಿ. ಇಲ್ಲವಾದರೆ ರದ್ದತಿಗೊಳಿಸಿ. ಎಡಬಿಡಂಗಿ ಆಗಿರುವುದು ಬೇಡ ಎಂಬ ಅಭಿಪ್ರಾಯವೂ ಕೇಳ ಬಂದಿದ್ದು ಸುಳ್ಳಲ.
ಇದನ್ನೂ ಓದಿ:ಕೇಳುಗರ ಮನ ಗೆದ್ದ ‘ಸಲಗ’ ಸಾಂಗ್
ಕಳೆದ ಐದು ವರ್ಷದಲ್ಲಿ ಕೋವಿಡ್, ಚುನಾವಣೆಗಳ ನೀತಿ ಸಂಹಿತೆಗಳ ಬಿಡುವಿನ ನಡುವೆ ನಾವೂ ಅನೇಕ ಉದ್ಯೋಗ ಖಾತ್ರಿ, ಗ್ರಾಮ ನೈರ್ಮಲ್ಯ, ದೀಪ, ಶಿಕ್ಷಣ, ಕುಡಿಯುವ ನೀರಿನಕಾಮಗಾರಿಗಳನ್ನು ಮಾಡಿದ್ದೇವೆ. ತಾಪಂ ಬಲವರ್ಧನೆ ಮಾಡಬೇಕೇ ವಿನಃ ಅಳಿಸುವ ಕೆಲಸ ಮಾಡಬಾರದು. ಮೂರೂ ವ್ಯವಸ್ಥೆಗಳು ಜಂಟಿಯಾಗಿ ಕೆಲಸ ಮಾಡುತ್ತವೆ.ಅನುದಾನ ಕೊಟ್ಟರೆ ಗ್ರಾಮೀಣ ಅಭಿವೃದ್ಧಿ ಸಾಧ್ಯವಾಗುತ್ತದೆ
. ಶ್ರೀ
ಲತಾ ಕಾಳೇರಮನೆ, ಶಿರಸಿ ತಾಪಂ ಅಧ್ಯಕ್ಷ್ಯೆ
ರಾಘವೇಂದ್ರ ಬೆಟ್ಟಕೊಪ್ಪ