Advertisement

ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಚೆಕ್‌ ವಿತರಣೆ

01:25 PM Dec 26, 2021 | Team Udayavani |

ಸುರಪುರ: ಇತ್ತೀಚೆಗೆ ಕೊರೊನಾ ರೋಗದಿಂದ ಮೃತಪಟ್ಟವರ ಕುಟುಂಬಗಳಿಗೆ ಶಾಸಕ ರಾಜುಗೌಡ ಸರ್ಕಾರದಿಂದ ಬಿಡುಗಡೆಯಾದ ಪರಿಹಾರದ ಚೆಕ್‌ ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಮೊದಲ ಹಂತದಲ್ಲಿ 10 ಕುಟುಂಬಗಳಿಗೆ ಚೆಕ್‌ ನೀಡಲಾಗಿತ್ತು. ಈಗ ಎರಡನೇ ಹಂತದಲ್ಲಿ ಕೆಂಭಾವಿ 2 ಸೇರಿ ಒಟ್ಟು 12 ಕುಟುಂಬಗಳಿಗೆ ಮಂಜೂರಿಯಾಗಿ ಅನುದಾನ ಬಿಡುಗಡೆಯಾಗಿದ್ದು ಚೆಕ್‌ ವಿತರಿಸಲಾಗುತ್ತಿದೆ ಎಂದರು.

ಕೊರೊನಾಕ್ಕೆ ತುತ್ತಾಗಿ ಕ್ಷೇತ್ರದಲ್ಲಿ ಒಟ್ಟು 67 ಜನ ಮೃತ ಪಟ್ಟಿದ್ದಾರೆ. ಈ ಪೈಕಿ 33 ಕುಟುಂಬಗಳಿಗೆ ಹಣ ಮಂಜೂರಿಯಾಗಿದೆ. ಈ ಕ್ಷೇತ್ರದವರು ಬೇರೆ ಕಡೆ ರೋಗಕ್ಕೆ ತುತ್ತಾಗಿ ಮೃತಪಟ್ಟ ಕುಟುಂಬದವರಿಂದ 34 ವೈಯಕ್ತಿಕ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಅನುದಾನ ಮಂಜೂರಿಯಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಚಿವ ಡಾ| ಕೆ. ಸುಧಾಕರ ಅವರೊಂದಿಗೆ ಮಾತನಾಡಿದ್ದು, ಮಂಜೂರಿ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಮಾತನಾಡಿ, 33 ಕುಟುಂಬಗಳ ಪೈಕಿ 24 ಬಿಪಿಎಲ್‌, 9 ಎಪಿಎಲ್‌ ಕುಟುಂಬಗಳಿವೆ. ಎಪಿಎಲ್‌ ಕುಟುಂಬಸ್ಥರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗಿದೆ. 2 ಬಿಪಿಎಲ್‌ ಕುಟುಂಬಗಳಿಗೆ ಅನುದಾನ ಬಂದಿಲ್ಲ. ಅವರಿಗೂ ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎಂದರು.

ಈ ವೇಳೆ ಶಿರಸ್ತೇದಾರ್‌ ಸೋಮಶೇಖರ ನಾಯಕ, ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ, ಗ್ರಾಲೆ ಪ್ರದೀಪ, ಮಲ್ಲಮ್ಮ, ಶಂಕರ, ಭೀಮು ಯಾದವ, ವೆಂಕಟೇಶ ನಾಯಕ, ಧರ್ಮರಾಜ ಬಡಿಗೇರ, ಕೃಷ್ಣಾ ಬಾದ್ಯಾಪುರ ಹೊನ್ನಪ್ಪ ತಳವಾರ, ಅರವಿಂದ ಬಿಲ್ಲವ್‌ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next